AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ- ನ್ಯೂಜಿಲೆಂಡ್ ನಡುವೆ 5 ಪಂದ್ಯಗಳ ಏಕದಿನ ಸರಣಿ; ಪೂರ್ಣ ವಿವರ ಇಲ್ಲಿದೆ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿ ನವೆಂಬರ್ 4ರಂದು ಆರಂಭಗೊಂಡು 15ಕ್ಕೆ ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ನವೆಂಬರ್ 19ರಿಂದ ಟೆಸ್ಟ್ ಸರಣಿ ಶುರುವಾಗಲಿದೆ. ಭಾರತ ಎರಡು ಪ್ರತ್ಯೇಕ ಏಕದಿನ ತಂಡಗಳನ್ನು ಪ್ರಕಟಿಸಿದ್ದು, ಪ್ರಮುಖ ಆಟಗಾರರು ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲಿದ್ದಾರೆ. ಪ್ರಸಿದ್ಧ್ ಕೃಷ್ಣ ಬದಲಿಗೆ ಸಿರಾಜ್ ತಂಡ ಸೇರಿದ್ದು, ಸಂಪೂರ್ಣ ವೇಳಾಪಟ್ಟಿ ಮತ್ತು ತಂಡದ ವಿವರಗಳು ಲಭ್ಯ.

ಭಾರತ- ನ್ಯೂಜಿಲೆಂಡ್ ನಡುವೆ 5 ಪಂದ್ಯಗಳ ಏಕದಿನ ಸರಣಿ; ಪೂರ್ಣ ವಿವರ ಇಲ್ಲಿದೆ
ಭಾರತ Vs ನ್ಯೂಜಿಲೆಂಡ್
ಪೃಥ್ವಿಶಂಕರ
|

Updated on:Nov 01, 2026 | 10:46 PM

Share

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ನವೆಂಬರ್ 4ರಂದು ಆಕ್ಲೆಂಡ್‌ನಲ್ಲಿ ಆರಂಭವಾಗಲಿದೆ. ಉಭಯ ತಂಡಗಳ ನಡುವೆ ಒಟ್ಟು ಐದು ಪಂದ್ಯಗಳು ನಡೆಯಲಿದ್ದು, ಆಕ್ಲೆಂಡ್, ವೆಲ್ಲಿಂಗ್ಟನ್, ಹ್ಯಾಮಿಲ್ಟನ್ ಮತ್ತು ಟೌರಂಗಾ ಮೈದಾನಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ನವೆಂಬರ್ 15ರಂದು ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಇದಾದ ಬೆನ್ನಲ್ಲೇ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಟೆಸ್ಟ್ ನವೆಂಬರ್ 19ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದ್ದು, ಎರಡನೇ ಟೆಸ್ಟ್ ಡಿಸೆಂಬರ್ 1ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಎರಡು ತಂಡಗಳು ಪ್ರಕಟ

ಈಗಾಗಲೇ ಈ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮೊದಲ ಮೂರು ಪಂದ್ಯಗಳಿಗೆ ಒಂದು ತಂಡ ಹಾಗೂ ನಾಲ್ಕು ಮತ್ತು ಐದನೇ ಪಂದ್ಯಗಳಿಗೆ ಮತ್ತೊಂದು ತಂಡವನ್ನು ಆಯ್ಕೆ ಮಾಡಲಾಗಿದೆ. ನವೆಂಬರ್ 15ರಂದು ಟೌರಂಗಾದಲ್ಲಿ ಐದನೇ ಏಕದಿನ ಪಂದ್ಯ ನಡೆಯಲಿದ್ದು, ಕೇವಲ ನಾಲ್ಕು ದಿನಗಳ ಬಳಿಕ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ನ್ಯೂಜಿಲೆಂಡ್ ತಂಡದ ಮಾದರಿಯಲ್ಲೇ ಭಾರತವೂ ಏಕದಿನ ಸರಣಿಗೆ ಎರಡು ತಂಡಗಳನ್ನು ಆಯ್ಕೆ ಮಾಡಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮಹತ್ವದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಪ್ರಮುಖ ಆಟಗಾರರು ಕೆಂಪು ಚೆಂಡಿನ ಕ್ರಿಕೆಟ್‌ಗೆ ಸಿದ್ಧತೆ ನಡೆಸಲಿದ್ದಾರೆ.

ಪ್ರಸಿದ್ಧ್ ಕೃಷ್ಣ ಔಟ್

ಇನ್ನು ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದೆ. ಅವರ ಬದಲಿಗೆ ಅನುಭವಿ ವೇಗಿ ಮೊಹಮ್ಮದ್ ಸಿರಾಜ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಇದೇ ವೇಳೆ ಮೊದಲ ಏಕದಿನ ಪಂದ್ಯಕ್ಕೆ ಮಾತ್ರ ನಿತೀಶ್ ಕುಮಾರ್ ರೆಡ್ಡಿ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಅಕ್ಟೋಬರ್ 31ರಂದು ಬಿಸಿಸಿಐ ಮತ್ತೊಂದು ಪ್ರಕಟಣೆ ಹೊರಡಿಸಿದ್ದು, ಈ ಹಿಂದೆ ನಾಲ್ಕು ಮತ್ತು ಐದನೇ ಏಕದಿನ ಪಂದ್ಯಗಳಿಗೆ ಮಾತ್ರ ಆಯ್ಕೆಯಾಗಿದ್ದ ಆಕಿಬ್ ನಬಿ ಅವರನ್ನು ಮೊದಲ ಮೂರು ಪಂದ್ಯಗಳ ತಂಡಕ್ಕೂ ಸೇರ್ಪಡೆ ಮಾಡಿದೆ.

ಏಕದಿನ ಸರಣಿಗೆ ಭಾರತ ತಂಡ

ಮೊದಲ 3 ಏಕದಿನ ಪಂದ್ಯಗಳಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ (ಮೊದಲ ಪಂದ್ಯಕ್ಕೆ ಮಾತ್ರ), ಅಕ್ಷರ್ ಪಟೇಲ್, ನಮನ್ ಧೀರ್, ಅನ್ಶುಲ್ ಕಾಂಬೋಜ್, ಗುರ್‌ನೂರ್ ಬ್ರಾರ್, ರುತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಆಕಿಬ್ ನಬಿ

ಕೊನೆಯ 2 ಏಕದಿನ ಪಂದ್ಯಗಳಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್/ಉಪನಾಯಕ), ಅಕ್ಷರ್ ಪಟೇಲ್, ನಮನ್ ಧೀರ್, ಆಕಿಬ್ ನಬಿ, ಗುರ್‌ನೂರ್ ಬ್ರಾರ್, ರುತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್, ಯಶ್ ಠಾಕೂರ್, ಕುಲ್ದೀಪ್ ಯಾದವ್.

ಏಕದಿನ ಸರಣಿ ವೇಳಾಪಟ್ಟಿ 2026

ಐದು ಪಂದ್ಯಗಳ ಏಕದಿನ ಸರಣಿ ನವೆಂಬರ್ 4ರಿಂದ ನವೆಂಬರ್ 15ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 7.30ಕ್ಕೆ ಶುರುವಾಗಲಿವೆ.

  • ನವೆಂಬರ್ 4: ಮೊದಲ ಏಕದಿನ ಪಂದ್ಯ, ಈಡನ್ ಪಾರ್ಕ್, ಆಕ್ಲೆಂಡ್. ಬೆಳಗ್ಗೆ 7.30
  • ನವೆಂಬರ್ 7: ಎರಡನೇ ಏಕದಿನ ಪಂದ್ಯ, ಎಚ್‌ಎನ್‌ಆರ್‌ವೈ ಸ್ಟೇಡಿಯಂ, ವೆಲ್ಲಿಂಗ್ಟನ್. ಬೆಳಗ್ಗೆ 7.30
  • ನವೆಂಬರ್ 10: ಮೂರನೇ ಏಕದಿನ ಪಂದ್ಯ, ಸೆಡ್ಡನ್ ಪಾರ್ಕ್, ಹ್ಯಾಮಿಲ್ಟನ್. ಬೆಳಗ್ಗೆ 7.30
  • ನವೆಂಬರ್ 13: ನಾಲ್ಕನೇ ಏಕದಿನ ಪಂದ್ಯ, ಬೇ ಓವಲ್, ಟೌರಂಗಾ. ಬೆಳಗ್ಗೆ 7.30
  • ನವೆಂಬರ್ 15: ಐದನೇ ಏಕದಿನ ಪಂದ್ಯ, ಬೇ ಓವಲ್, ಟೌರಂಗಾ. ಬೆಳಗ್ಗೆ 7.30

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:45 pm, Sun, 1 November 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹುಟ್ಟಿದರೆ ಕನ್ನಡ ನಾಡಲಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಸಚಿವ ಶಿವಲಿಂಗೇಗೌಡ
ಹುಟ್ಟಿದರೆ ಕನ್ನಡ ನಾಡಲಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಸಚಿವ ಶಿವಲಿಂಗೇಗೌಡ
ಸುದೀಪ್ ಎದುರು, ಸೋನಿಕಾ-ಧನುಶ್​​ ಅವರ ಮಿಮಿಕ್ ಮಾಡಿದ ತಾಂಡವ್-ಪ್ರಶಾಂತ್
ಸುದೀಪ್ ಎದುರು, ಸೋನಿಕಾ-ಧನುಶ್​​ ಅವರ ಮಿಮಿಕ್ ಮಾಡಿದ ತಾಂಡವ್-ಪ್ರಶಾಂತ್
ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ
ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ
ಬೆಂಗಳೂರಿನಲ್ಲಿ ಮೈ ಹೋಮ್ ಗ್ರೂಪ್‌ನ ನೂತನ ಕಚೇರಿ ಉದ್ಘಾಟನೆ
ಬೆಂಗಳೂರಿನಲ್ಲಿ ಮೈ ಹೋಮ್ ಗ್ರೂಪ್‌ನ ನೂತನ ಕಚೇರಿ ಉದ್ಘಾಟನೆ
"ಹಿಟ್ ಅಂಡ್ ರನ್ ಮಾಡಲು ನಾನೇನು ಕುಮಾರಸ್ವಾಮಿನಾ?"
ರಾಜ್ಯೋತ್ಸವ ಸಂಭ್ರಮದ ನಡುವೆ ಮದ್ಯಪ್ರಿಯರ ಎಡವಟ್ಟು
ರಾಜ್ಯೋತ್ಸವ ಸಂಭ್ರಮದ ನಡುವೆ ಮದ್ಯಪ್ರಿಯರ ಎಡವಟ್ಟು
ಬಿಜೆಪಿಗೆ ವಾಪಸಾಗಲು ಯತ್ನಾಳ್ ಹಾಕಿದ್ರು 2 ಕಂಡಿಷನ್‌! ಏನದು? ಇಲ್ಲಿದೆ ನೋಡಿ
ಬಿಜೆಪಿಗೆ ವಾಪಸಾಗಲು ಯತ್ನಾಳ್ ಹಾಕಿದ್ರು 2 ಕಂಡಿಷನ್‌! ಏನದು? ಇಲ್ಲಿದೆ ನೋಡಿ
ನವೆಂಬರ್ 2 ರಿಂದ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 2 ರಿಂದ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ