ಬೆಂಗಳೂರು: ರಾಜ್ಯದ ಆಸಕ್ತ ಯಾತ್ರಾರ್ಥಿಗಳಿಗಾಗಿ ಸಹಾಯಧನದಲ್ಲಿ ಕಾಶಿ (Kashi) ಯಾತ್ರೆ ಪ್ರವಾಸ ಯೋಜನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2022-23ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿತ ಕಾಶಿಯಾತ್ರೆ ಪ್ರವಾಸ ಯೋಜನೆ, ಪ್ರತಿ ವರ್ಷ ರಾಜ್ಯದ 30 ಸಾವಿರ ಯಾತ್ರಾರ್ಥಿಗಳು ಸರ್ಕಾರದ ಸಹಾಯಧನದ ಮೂಲಕ ಕಾಶಿಗೆ ತೆರಳಲು ಅವಕಾಶವಿದೆ. ಪ್ರತಿಯೊಬ್ಬ ಯಾತ್ರಾರ್ಥಿಗೆ 5 ಸಾವಿರ ರೂ. ಸಹಾಯಧನ ನೀಡಲಾಗುತ್ತಿದ್ದು, ಶೀಘ್ರದಲ್ಲಿಯೇ ಮುಜರಾಯಿ ಇಲಾಖೆಯಿಂದ ಕಾಶಿಯಾತ್ರೆಗೆ ತೆರಳಲು ಆಸಕ್ತಿ ಹೊಂದಿರುವ ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನಿಸಲಿದೆ.
ಮೇ ತಿಂಗಳಲ್ಲಿ ಚಾರ್ ಧಾಮ್ ಯಾತ್ರೆಗೆ ವಿಶೇಷ ರಿಯಾಯ್ತಿ ಘೋಷಿಸಿದ ರೈಲ್ವೆ
ದೆಹಲಿ: ಉತ್ತರಾಖಂಡದಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಪ್ರವಾಸ ಹೊರಡುವ ಆಸೆ ಹೊಂದಿರುವವರಿಗೆ ಐಆರ್ಸಿಟಿಸಿ ವಿಶೇಷ ರಿಯಾಯ್ತಿ ಘೋಷಿಸಿದೆ. ಹಲವು ಅಗತ್ಯ ಸೌಲಭ್ಯಗಳಿರುವ ಪ್ಯಾಕೇಜ್ ಟೂರ್ಗಳಲ್ಲಿ ಪ್ರಯಾಣಿಕರಿಗೆ ಸಾಕಷ್ಟು ರಿಯಾಯ್ತಿಯೂ ಸಿಗುತ್ತಿದೆ. ಬದರಿನಾಥ್, ಕೇದಾರ್ನಾಥ್, ಗಂಗೋತ್ರಿ ಮತ್ತು ಯಮುನೋತ್ರಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಈ ಪ್ಯಾಕೇಜ್ನಲ್ಲಿದೆ. ಈ ನಾಲ್ಕು ತೀರ್ಥ ಕ್ಷೇತ್ರಗಳ ದರ್ಶನದಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಹಿಂದೂಗಳು ನಂಬುತ್ತಾರೆ.
ಭಾರತ ಸರ್ಕಾರದ ಆಜಾದಿ ಕ ಅಮೃತ್ ಮಹೋತ್ಸವ್ ಮತ್ತು ದೇಖೋ ಆಪ್ನಾ ದೇಶ್ ಉಪಕ್ರಮಗಳ ಭಾಗವಾಗಿ ಐಆರ್ಸಿಟಿಸಿ ಈ ಯೋಜನೆಯನ್ನು ಪರಿಚಯಿಸಿದೆ. ಈ ವರ್ಷ ಕೊರೊನಾ ಪ್ರಕರಣಗಳು ಕಡಿಮೆಯಾಗಿರುವುದರಿಂದ ಸಾಕಷ್ಟು ಜನರು ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಮೇ 14ರಿಂದ ಆರಂಭವಾಗಿ ಮೇ 25ಕ್ಕೆ ಮುಕ್ತಾಯವಾಗಲಿರುವ ಈ ಯಾತ್ರೆಯು 12 ಹಗಲು ಮತ್ತು 11 ರಾತ್ರಿಗಳ ಪ್ರವಾಸ ಪ್ಯಾಕೇಜ್ ಹೊಂದಿರುತ್ತದೆ. ಹರಿದ್ವಾರ, ಬಾರ್ಕೊಟ್, ಜಾನಕಿಚಟ್ಟಿ, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ಗುಪ್ತಕಾಶಿ, ಸನ್ಪ್ರಯಾಗ, ಕೇದಾರನಾಥ, ಬದರಿನಾಥ ಕ್ಷೇತ್ರಗಳನ್ನು ಸಂದರ್ಶಿಸಲಾಗುತ್ತದೆ. ನಾಗಪುರ ಮತ್ತು ದೆಹಲಿ ಮಾರ್ಗವಾಗಿ ವಾಯುಯಾನ ಟಿಕೆಟ್ಗಳನ್ನೂ ಈ ಪ್ಯಾಕೇಜ್ ಒಳಗೊಂಡಿರುತ್ತದೆ.
ಇದನ್ನೂ ಓದಿ:
ಇಂದು ಬೆಂಗಳೂರಿನಲ್ಲಿ ಮಳೆಗೆ ಬಿಡುವು; ಗ್ರಾಮಾಂತರದಲ್ಲಿ ವರುಣನ ಆರ್ಭಟ, ಹಲವು ಕಡೆ ಭಾರಿ ಅನಾಹುತ
ಡಿಗ್ರಿ ಮುಗಿದು 2ವರ್ಷಗಳಾದರೂ ಸಿಗದ ಉದ್ಯೋಗ; ಕಾಲೇಜು ಸಮೀಪವೇ ಚಹಾ ಮಾರುತ್ತಿರುವ ಯುವತಿ
Published On - 7:52 pm, Tue, 19 April 22