AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಚ್ಚಾ ಹೆಲ್ಮೆಟ್​ ಡಾ: ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮಿಂಗ್​ನಲ್ಲಿ ಹೆಲ್ಮೆಟ್​ ಜಾಗೃತಿ

ಸಾರ್ವಜನಿಕ ರಸ್ತೆ ಸುರಕ್ಷತಾ ಅಭಿಯಾನದ ಭಾಗವಾಗಿ ಸಂಚಾರಿ ಪೊಲೀಸ್​ ವಿಭಾಗ ವಿಭಿನ್ನವಾಗಿ ಜಾಗೃತಿ ಮೂಡಿಸಲು ಮುಂದಾಗಿದೆ. "ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ" ಎಂಬ ಮೊಬೈಲ್​​ ಗೇಮ್​​​ನಲ್ಲಿ ಹೆಲ್ಮೆಟ್​ ಧರಿಸಿ ಜಾಗೃತಿ ಮೂಡಿಸಿದೆ.

ಮಚ್ಚಾ ಹೆಲ್ಮೆಟ್​ ಡಾ: ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮಿಂಗ್​ನಲ್ಲಿ ಹೆಲ್ಮೆಟ್​ ಜಾಗೃತಿ
ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮಿಂಗ್​ನಲ್ಲಿ ಹೆಲ್ಮೆಟ್​ ಜಾಗೃತಿ
ವಿವೇಕ ಬಿರಾದಾರ
|

Updated on: Sep 11, 2024 | 3:00 PM

Share

ಬೆಂಗಳೂರು, ಸೆಪ್ಟೆಂಬರ್​ 11: ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್​ ಧರಿಸಿ ಅಂತ ಸಂಚಾರಿ ಪೊಲೀಸರು (Traffic Police) ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದರೂ ಕೂಡ ಇನ್ನೂ ಕೆಲವರು ಹೆಲ್ಮೆಟ್​ ಧರಿಸದೆ ವಾಹನ ಚಲಾಯಿಸಿ ಜೀವಕ್ಕೆ ಕಂಟಕ ತಂದುಕೊಳ್ಳುತ್ತಾರೆ. ಇದೀಗ ಸಾರ್ವಜನಿಕ ರಸ್ತೆ ಸುರಕ್ಷತಾ ಅಭಿಯಾನದ (Public Road Safety Campaign) ಭಾಗವಾಗಿ ಸಂಚಾರಿ ಪೊಲೀಸ್​ ವಿಭಾಗ ವಿಭಿನ್ನವಾಗಿ ಜಾಗೃತಿ ಮೂಡಿಸಲು ಮುಂದಾಗಿದೆ.

“ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ” ಎಂಬ ಮೊಬೈಲ್​​ ಗೇಮ್​​​ನಲ್ಲಿ ಹೆಲ್ಮೆಟ್​ ಧರಿಸಿ​ ಜಾಗೃತಿ ಮೂಡಿಸಿದೆ. ಪೋಲೀಸ್, ಗೇಮ್ ಡೆವಲಪರ್‌ಗಳು ಮತ್ತು ಮಾಧ್ಯಮ ಕಂಪನಿ ಸ್ಚ್‌ಬಾಂಗ್ ಸಹಯೋಗದಲ್ಲಿ “ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ”ದಲ್ಲಿ “ಮಚ್ಚಾ ಹೆಲ್ಮೆಟ್​ ಡಾ” ಹುಷಾರಾಗಿ, ಜವಾಬ್ದಾರಿಯುತವಾಗಿ ವಾಹನ ಚಲಾಯಿಸಿ ಎಂಬ ಸೂಚನಾ ಫಲಕ ಇದೆ. ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್​ ಅನ್ನು ಹೆಚ್ಚಾಗಿ 16 ರಿಂದ 25 ವರ್ಷ ವಯಸ್ಸಿನವರು ಆಡುವುದರಿಂದ, ಇವರನ್ನು ಗುರಿಯಾಗಿಸಿಕೊಂಡು ಈ ಜಾಹಿರಾತು ನೀಡಲಾಗಿದೆ.

ಇದನ್ನೂ ಓದಿ: ಸಂಚಾರಿ ಪೊಲೀಸ್​​ ಕಾನ್ಸ್​​ ಟೇಬಲ್ ಜೊತೆ ಯುವಕನ ಗಲಾಟೆ; ವಿಡಿಯೋ ವೈರಲ್​

ಜಾಹಿರಾತು ಪ್ರಮುಖರಾದ ರೆನ್ಸಿಲ್ಲಾ ಫೆರ್ನಾಂಡಿಸ್ ಮಾತನಾಡಿ, “ಬೆಂಗಳೂರು ಇಂಗ್ಲಿಷ್” ನಲ್ಲೇ ಜಾಹಿರಾತು ನೀಡಲಾಗಿದೆ. ಇದು, ಯುವಕರ ಗಮನ ಸೆಳೆಯುತ್ತದೆ. ಗೇಮಿಂಗ್ ಮತ್ತು ನಿಜ ಜೀವನದ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಭಾಷೆ ಬಳಸಲಾಗಿದೆ ಎಂದರು.

ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಮಾತನಾಡಿ, “ಇದು ಸಾಮಾಜಿಕ ಸೇವಾ ಸಂದೇಶವಾಗಿದೆ. ನಾವು 16-25 ವರ್ಷದ ತರುಣರನ್ನು ಗುರಿಯಾಗಿಸಿಕೊಂಡು ಆಟದೊಳಗೆ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್