AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಸಿಟಿ ಲೈಫ್​​ ಅರಸಿ ಬಂದ ಮಹಿಳೆ ಮಲ್ಲೇಶ್ವರಂನ ಅಪಾರ್ಟ್ಮೆಂಟ್​​ನಲ್ಲಿ ನೇಣಿಗೆ ಶರಣು

ಆಗಸ್ಟ್​ 6 ರಂದು ಬೆಂಗಳೂರಿನ ಮಲ್ಲೇಶ್ವರಂನ ಸಾಯಿಕೃಪಾ ಅಪಾರ್ಟ್ಮೆಂಟ್​ನಲ್ಲಿ ಅಪರಿಚಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಅಪರಿಚಿತ ಮಹಿಳೆ ಯಾರು? ಹಿನ್ನಲೆ ಏನು? ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುವುದನ್ನು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು: ಸಿಟಿ ಲೈಫ್​​ ಅರಸಿ ಬಂದ ಮಹಿಳೆ ಮಲ್ಲೇಶ್ವರಂನ ಅಪಾರ್ಟ್ಮೆಂಟ್​​ನಲ್ಲಿ ನೇಣಿಗೆ ಶರಣು
ಮೃತ ಜಯಶ್ರೀ
Jagadisha B
| Updated By: ವಿವೇಕ ಬಿರಾದಾರ|

Updated on:Aug 19, 2024 | 9:52 AM

Share

ಬೆಂಗಳೂರು, ಆಗಸ್ಟ್​ 19: ಕಳೆದ ಕೆಲ ದಿನಗಳ ಹಿಂದೆ ಮಲ್ಲೇಶ್ವರಂನ (Malleshwaram) ಸಾಯಿಕೃಪಾ ಅಪಾರ್ಟ್ಮೆಂಟ್​ನಲ್ಲಿ ​ಜಯಶ್ರೀ (46 ವರ್ಷ) ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುವುದನ್ನು ಮಲ್ಲೇಶ್ವರಂ ಠಾಣೆ ಪೊಲೀಸರು (Police) ಪತ್ತೆ ಹಚ್ಚಿದ್ದಾರೆ. ಜಯಶ್ರೀ ಮೂಲತಃ ಚನ್ನಪಟ್ಟಣದವಳು. ಜಯಶ್ರೀ ತವರು ಮನೆಯವರು ಬೆಂಗಳೂರಿನ ವೈಯಾಲಿಕವಲ್​ನಲ್ಲಿ ವಾಸವಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಜಯಶ್ರಿ ಅಕ್ಕ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅಕ್ಕ ಮೃತಪಟ್ಟ ಬಳಿಕ ಮಕ್ಕಳ ಪೋಷಣೆಗೆಂದು ಕುಟುಂಬಸ್ಥರು ಜಯಶ್ರೀಯ ಬಾವ ಚನ್ನೇಗೌಡನ ಜೊತೆಗೆ ಮದುವೆ ಮಾಡಿಸಿದರು.

ದಂಪತಿ ಮೂರು ಮಕ್ಕಳೊಂದಿಗೆ ಚನ್ನಪಟ್ಟಣದಲ್ಲಿ ವಾಸವಾಗಿದ್ದರು. ಪತಿ ಚನ್ನೇಗೌಡ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಆದರೆ ಜಯಶ್ರೀಗೆ ಚನ್ನಪಟ್ಟಣದಲ್ಲಿರಲು ಇಷ್ಟವಿರಲಿಲ್ಲ. ಬದಲಿಗೆ ಬೆಂಗಳೂರಿನಲ್ಲಿ ವಾಸಿಸಲು ಮನಸ್ಸು ಇತ್ತು. ಈ ಕಾರಣಕ್ಕಾಗಿ ಜಯಶ್ರೀ ಪತಿ ಚನ್ನೇಗೌಡನ ಜೊತೆ ಜಗಳವಾಡುತ್ತಿದ್ದಳು. ಬೆಂಗಳೂರಿನಲ್ಲೇ ವಾಸಿಸಬೇಕೆಂದು ಹಠ ಹಿಡಿದಿದ್ದ ಜಯಶ್ರೀ ಇದಕ್ಕಾಗಿ ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಳು. ಬೆಂಗಳೂರು ಸಿಟಿ ಲೈಫ್​​ ಜೀವನ ನಡೆಸಲು ಹಣಕ್ಕಾಗಿ ನಾನಾ ದಾರಿಗಳನ್ನು ಹುಡುಕಿಕೊಂಡಿದ್ದಳು.

ಇದನ್ನೂ ಓದಿ: ಲಿಫ್ಟ್‌ ಕೇಳಿದ ಯುವತಿ ಮೇಲೆ ಎರಗಿ ಅತ್ಯಾಚಾರ ಎಸಗಿದ್ದ ಕಾಮುಕ ಅರೆಸ್ಟ್

ವಿಧಾನಸೌಧದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಜಯಶ್ರಿ ಹಣ ಪಡೆದು ವಂಚಿಸಿದ್ದಳು. ಈ ವಿಚಾರ ತಿಳಿದ ಪತಿ ಚನ್ನೇಗೌಡ ಎಲ್ಲವನ್ನೂ ಬಗೆಹರಿಸಿ, ಸರಿ ಪಡಿಸಿದ್ದರು. ಇದಾದ ಬಳಿಕವೂ ಜಯಶ್ರೀಗೆ ಸಿಟಿ ಲೈಫ್​ನ ಆಸೆ ಕಡಿಮೆ ಆಗಿರಲಿಲ್ಲ. ಸಿಟಿಯಲ್ಲೇ ವಾಸಿಸಬೇಕೆಂದು 3-4 ಬಾರಿ ಮನೆ ಬಿಟ್ಟು ಬಂದಿದ್ದಳು. ಮೂರು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿ ವಾಪಾಸ್ ಆಗಿದ್ದಳು. ಜಯಶ್ರೀ ಮತ್ತೆ ಇತ್ತೀಚಿಗೆ ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದಳು. ಹೊದವಳು ಮತ್ತೆ ಬರುತ್ತಾಳೆ ಎಂದು ಪತಿ ಚನ್ನೇಗೌಡ ಸುಮ್ಮನಾಗಿದ್ದರು.

ಚಿನ್ನದ ಆಭರಣವೊಂದನ್ನ ಅಡವಿಟ್ಟು, ಬಂದ ಹಣದಲ್ಲಿ ಬೆಂಗಳೂರಿಗೆ ಬಂದಿದ್ದ ಜಯಶ್ರೀ, ಎರಡು ದಿನ ಮೆಜೆಸ್ಟಿಕ್​ನಲ್ಲಿ ಕಾಲ ಕಳೆದಿದ್ದಳು. ಮೆಜೆಸ್ಟಿಕ್​​ನಲ್ಲಿ ಜಯಶ್ರೀಗೆ ಓರ್ವ ಮಹಿಳೆಯ ಪರಿಚಯವಾಗಿದೆ. ಮಹಿಳೆ ಎದರು ತಾನು ಮನೆ ಬಿಟ್ಟು ಬಂದಿರುವುದು, ಗಂಡನ ಜೊತೆ ಜಗಳವಾಡಿದ್ದನ್ನು ಹೇಳಿಕೊಂಡಿದ್ದಾಳೆ. ಬಳಿಕ ಅದೇನು ತಿಳಿಯಿತು ಏನೋ ಆಗಸ್ಟ್​ 6 ರಂದು ಮಲ್ಲೇಶ್ವರಂನ ಸಾಯಿಕೃಪಾ ಅಪಾರ್ಟ್ಮೆಂಟ್​ನಲ್ಲಿ ಸಿಸಿಟಿವಿ, ಸೆಕ್ಯೂರಿಟಿ ಇಲ್ಲದೆ ಇರುವುದನ್ನು ಬೆಳಗ್ಗೆ 7:30ರ ಸುಮಾರಿಗೆ 3 ಮತ್ತು 4ನೇ ಮಹಡಿ ಮಧ್ಯದ ಮೆಟ್ಟಿಲುಗಳ ಬಳಿ ಇರುವ ಗ್ರೀಲ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:51 am, Mon, 19 August 24