ನಡುರಾತ್ರಿ ರೈಲಿನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಅಮೂಲ್ಯ ಪ್ರಾಣತೆತ್ತ ಮಂಡ್ಯದ ಯುವಕ, ಶ್ರೀರಂಗಪಟ್ಟಣದ ಬಳಿ ಪತ್ತೆಯಾದ ಶವ

ನಡುರಾತ್ರಿ ರೈಲಿನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಅಮೂಲ್ಯ ಪ್ರಾಣತೆತ್ತ ಮಂಡ್ಯದ ಯುವಕ, ಶ್ರೀರಂಗಪಟ್ಟಣದ ಬಳಿ ಪತ್ತೆಯಾದ ಶವ
ರೈಲಿನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಅಮೂಲ್ಯ ಪ್ರಾಣತೆತ್ತ ಮಂಡ್ಯದ ಯುವಕ, ಶ್ರೀರಂಗಪಟ್ಟಣದ ಬಳಿ ಪತ್ತೆಯಾದ ಶವ

ನವೆಂಬರ್ 6ರ ರಾತ್ರಿ ಮಂಡ್ಯಕ್ಕೆ ಹೊರಟಿದ್ದ ಅಭಿಷೇಕ್ ಮತ್ತು ಆತನ ಸ್ನೇಹಿತರು ರಾತ್ರಿ 2 ಗಂಟೆಗೆ ರೈಲಿನ ಬಾಗಿಲಿನಲ್ಲಿ ನಿಂತು ಸೆಲ್ಫೀ ಕ್ಲಿಕ್ಕಿಸುವಾಗ ಅಭಿಷೇಕ್ ಕೆಳಕ್ಕೆ ಬಿದ್ದಿದ್ದ. ಅಭಿಷೇಕ್, ಲೋಕಪಾವನಿ ನದಿಗೆ ಬಿದ್ದು ಮೃತಪಟ್ಟಿದ್ದ.

TV9kannada Web Team

| Edited By: sadhu srinath

Nov 18, 2021 | 1:08 PM

ಬೆಂಗಳೂರು: ಮಂಡ್ಯದ ಯುವಕನೊಬ್ಬ ರೈಲಿನಲ್ಲಿ ಪ್ರಯಾಣಿಸುತ್ತಾ, ಸೆಲ್ಫಿ ಕ್ಲಿಕ್ಕಿಸಲು ಹೋಗಿ ತನ್ನ ಅಮೂಲ್ಯವಾದ ಪ್ರಾಣ ಕಳೆದುಕೊಂಡಿದ್ದಾನೆ. 5 ದಿನಗಳ ಬಳಿಕ ಶ್ರೀರಂಗಪಟ್ಟಣದ ಬಳಿ ಆತನ ಶವ ಪತ್ತೆಯಾಗಿದೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು, ರೈಲ್ವೆ ಪೊಲೀಸರು ಮತ್ತು ಮಂಡ್ಯ ಪೊಲೀಸರ ಕಾರ್ಯಾಚರಣೆಯಲ್ಲಿ ಯುವಕನ ಶವ ಪತ್ತೆಯಾಗಿದೆ. ನವೆಂಬರ್ 10 ರಂದು ಉಪ್ಪಾರಪೇಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಮಂಡ್ಯ ಅಭಿಷೇಕ್ ಮೃತ ಯುವಕ ಎಂದು ಗುರುತಿಸಲಾಗಿದೆ. ಈತ ಗಾಂಧಿನಗರದ ಬಾರ್ & ರೆಸ್ಟೋರೆಂಟ್ ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಊರಿಗೆ ಹೋಗಿ ಬರುವುದಾಗಿ ಸ್ನೇಹಿತರ ಜೊತೆ ಮಂಡ್ಯಕ್ಕೆ ಹೊರಟಿದ್ದ. ನವೆಂಬರ್ 6ರ ರಾತ್ರಿ ಮಂಡ್ಯಕ್ಕೆ ಹೊರಟಿದ್ದ ಅಭಿಷೇಕ್ ಮತ್ತು ಆತನ ಸ್ನೇಹಿತರು ರಾತ್ರಿ 2 ಗಂಟೆಗೆ ರೈಲಿನ ಬಾಗಿಲಿನಲ್ಲಿ ನಿಂತು ಸೆಲ್ಫೀ ಕ್ಲಿಕ್ಕಿಸುವಾಗ ಅಭಿಷೇಕ್ ಕೆಳಕ್ಕೆ ಬಿದ್ದಿದ್ದ. ಅಭಿಷೇಕ್, ಲೋಕಪಾವನಿ ನದಿಗೆ ಬಿದ್ದು ಮೃತಪಟ್ಟಿದ್ದ. ಸತತ ಮಳೆಯಿಂದಾಗಿ 6-7 ಕಿ. ಮೀ. ವರೆಗೂ ಕೊಚ್ಚಿ ಹೋಗಿದ್ದ ಅಭಿಷೇಕ್ ಶವ ನವೆಂಬರ್ 14 ರಂದು ಶ್ರೀರಂಗಪಟ್ಟಣ ಬಳಿ ಪತ್ತೆಯಾಗಿತ್ತು.

Also Read: ಸೆಲ್ಫಿ ಹುಚ್ಚಿಗೆ ನದಿ ಮಧ್ಯದ ಬಂಡೆ ಏರಿದ್ದ ಯುವಕ ನೀರು ಪಾಲು

(mandya youth abhishek died while taking selfie in moving train)

Follow us on

Related Stories

Most Read Stories

Click on your DTH Provider to Add TV9 Kannada