AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಟ್ ಪಾತ್ ತೆರವಿಗೆ ಕೃಷ್ಣಭೈರೇಗೌಡ ಪಣ:ಒತ್ತುವರಿದಾರರಿಗೆ ಡೆಡ್​​ಲೈನ್, ರಸ್ತೆ ಬದಿ ನಿಲ್ಲಿಸುವ ಗಾಡಿ ಗುಜರಿಗೆ

Bengaluru News: ಬೆಂಗಳೂರಿನಲ್ಲಿ ಪಾದಾಚಾರಿ ಮಾರ್ಗಗಳ ಒತ್ತುವರಿ ಅತಿಯಾಗಿದ್ದು, ಪಾದಾಚಾರಿಗಳು ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಫುಟ್ ಪಾತ್ ಒತ್ತುವರಿದಾರರ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಸಮರ ಸಾರಿದ್ದಾರೆ. ತಾವಾಗೇ ಒತ್ತುವರಿ ತೆರವು ಮಾಡಲು ಡೆಡ್ ಲೈನ್ ಕೊಟ್ಟಿದ್ದು, ಜಿಬಿಎ ಅಧಿಕಾರಿಗಳ ಜೊತೆ ಮೀಟಿಂಗ್ ಮಾಡಿರುವ ಸಚಿವರು ಹಲವು ಮಹತ್ವದ ಸೂಚನೆಗಳನ್ನ ಕೊಟ್ಟಿದ್ದಾರೆ.

ಫುಟ್ ಪಾತ್ ತೆರವಿಗೆ ಕೃಷ್ಣಭೈರೇಗೌಡ ಪಣ:ಒತ್ತುವರಿದಾರರಿಗೆ ಡೆಡ್​​ಲೈನ್, ರಸ್ತೆ ಬದಿ ನಿಲ್ಲಿಸುವ ಗಾಡಿ ಗುಜರಿಗೆ
Krishna Byre Gowda
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Jun 24, 2026 | 10:01 PM

Share

ಮುಖ್ಯಾಂಶಗಳು

  • ಫುಟ್ ಪಾತ್ ತೆರವಿಗೆ ಪಣ ತೊಟ್ಟ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ
  • ಜುಲೈ 1 ರ ಒಳಗಾಗಿ ಫುಟ್ ಪಾತ್ ಒತ್ತುವರಿ ತೆರವು ಮಾಡುವಂತೆ ಎಚ್ಚರಿಕೆ
  • 2 ಸಾವಿರ ಕಿಲೋ ಮೀಟರ್ ರಸ್ತೆ ಫುಟ್ ಪಾತ್ ಆದ್ಯತೆ ಮೇಲೆ ಅಭಿಯಾನ

ಬೆಂಗಳೂರು, (ಜೂನ್ 24): ಬೆಂಗಳೂರಿನಲ್ಲಿ ಹುಡುಕಿದರೆ ನೂರು ಮೀಟರ್ ಕೂಡ ಸರಿಯಾಗಿ ಫುಟ್ ಪಾತ್ ಸಿಗಲ್ಲ. ಕೆಲ ಬೀದಿ ಬದಿ ವ್ಯಾಪಾರಿಗಳು ಸೇರಿ ಪಾದಚಾರಿ ಮಾರ್ಗಗಳನ್ನು ಕಬ್ಜಾ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಫುಟ್ ಪಾತ್ (footpath) ಅತಿಕ್ರಮಣ ತೆರವು ಮಾಡುವ ಸಂಬಂಧ ಬೆಂಗಳೂರು (Bengaluru) ನಗರಾಭಿವೃದ್ದಿ ಸಚಿವ ಕೃಷ್ಣ ಬೈರೇಗೌಡ (Krishna Byre Gowda) GBA ಅಧಿಕಾರಿಗಳ ಜೊತೆಗೆ ಇಂದು (ಜೂನ್ 24) ಮಹತ್ವದ ಸಭೆ ನಡೆಸಿದ್ದು, ಯಾರ್ಯಾರು ಫುಟ್ ಪಾತ್ ಅತಿಕ್ರಮಣ ಮಾಡಿಕೊಂಡವರು ತೆರವುಗೊಳಿಸಲು ಜುಲೈ 1 ಡೆಡ್​​ಲೈನ್ ನೀಡಿದ್ದಾರೆ. ಒಂದು ವೇಳೆ ಅಷ್ಟರೊಳಗೆ ಫುಟ್ ಪಾತ್ ತೆರವು ಮಾಡದಿದ್ದಲ್ಲಿ ಬುಲ್ಡೋಜರ್ ಅಸ್ತ್ರ ಪ್ರಯೋಗಿಸುವುದಾಗಿಯೂ ಎಚ್ಚರಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿ ಜನ ಉಪಯೋಗಕ್ಕೆ ನೆರವಾಗುವಂತೆ ದುರಸ್ತಿ ಕಾಮಗಾರಿಗಳನ್ನು ನಡೆಸುವ ಕುರಿತ ಜಿಬಿಎ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಈ ಸಭೆಯಲ್ಲಿ ಸಭೆಯಲ್ಲಿ GBA ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ಸೇರಿ ಎಲ್ಲಾ ನಗರ ಪಾಲಿಕೆಗಳ ಆಯುಕ್ತರು, ಟ್ರಾಫಿಕ್ ಕಮಿಷನರ್ ಸೇರಿ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಇನ್ನು ಸಭೆಯಲ್ಲಿ ಒತ್ತುವರಿಯಾದ ಫುಟ್​​ ಪಾತ್ ತೆರುವುಗೊಳಿಸುವ ಬಗ್ಗೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನಿಡಿದ್ದಾರೆ. ಅಲ್ಲದೇ ಒಂದು ವೇಲೆ ತೊಂದರೆಗಳು ಬಂದರೆ ನಿಮ್ಮ ಬೆನ್ನಿಗೆ ನಿಲ್ಲುವೆ ಎಂದು  ಕೃಷ್ಣಭೈರೇಗೌಡ ಅವರಿಗೆ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ಸಭೆಯ ಹೈಲೈಟ್ಸ್

  • ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಬೃಹತ್ ಫುಟ್ ಪಾತ್ ಅತಿಕ್ರಮಣ ತೆರವು ಅಭಿಯಾನ
  • ಜುಲೈ 1 ರ ಒಳಗಾಗಿ ತಾವೇ ಅತಿಕ್ರಮಣ ತೆರವು ಮಾಡಿಕೊಳ್ಳಿ
  • ಅತಿಕ್ರಮಣ ತೆರವು ಮಾಡದೇ ಇದ್ದರೆ ಕಠಿಣ ಕ್ರಮ, ಭಾರೀ ದಂಡ
  • ರಸ್ತೆ ಬದಿ ನಿಲ್ಲಿಸಿರುವ ತಳ್ಳುವ ಗಾಡಿಗಳನ್ನು ಜುಲೈ 10 ರ ಒಳಗಾಗಿ ತೆರವು ಮಾಡಿ, ಇಲ್ಲವಾದರೆ ಸೀಜ್ ಮಾಡಿ ಹರಾಜು
  •  ನಗರದ ಆರ್ಟಿಯಲ್ ಸಬ್ ಆರ್ಟಿಯಲ್ ನ 2 ಸಾವಿರ ಕಿಲೋ ಮೀಟರ್ ರಸ್ತೆಯಲ್ಲಿ ಶೀಘ್ರ ಸುಗಮ ಫುಟ್ ಪಾತ್
  • ಆದ್ಯತೆಯ ರಸ್ತೆಗಳಲ್ಲಿನ ಫುಟ್ ಪಾತ್ ದುರಸ್ತಿ ಕಾರ್ಯಕ್ಕೆ 70 ಕೋಟಿ ರೂಪಾಯಿ ಮೀಸಲು
  • ಸಿಗ್ನಲ್ ಗಳ 75 ಮೀಟರ್ ಅಂತರದಲ್ಲಿ ಬಸ್ ಸ್ಟಾಪ್ ಇರಬಾರದು, ಇತರೆ ವಾಹನಗಳ ನಿಲುಗಡೆ ನಿಷೇಧ
  •  ಜಂಕ್ಷನ್ ಗಳ ಬಳಿ ಗುಂಡಿ ಮುಚ್ಚಲು ಆದ್ಯತೆ, 77 ಕೋಟಿ ರೂಪಾಯಿ ಮೀಸಲು
  •  ಯಂತ್ರಗಳ ಮೂಲಕ ವೈಜ್ಞಾನಿಕವಾಗಿ ಗುಂಡಿ ಮುಚ್ಚುವ ವ್ಯವಸ್ಥೆ ಶೀಘ್ರ ಅಳವಡಿಕೆ
  •  ಶೀಘ್ರದಲ್ಲೇ ಬೀದಿ ಬದಿ ವ್ಯಾಪಾರಿಗಳ ಜೊತೆ ಅಧಿಕಾರಿಗಳ ಚರ್ಚೆ

ಒಟ್ಟಿನಲ್ಲಿ ಯಾರ ಒತ್ತಡಕ್ಕೂ ಮಣಿಯದೆ ಫುಟ್ ಪಾತ್ ಅತಿಕ್ರಮಣ ಮಾಡುವವರ ವಿರುದ್ಧ ಸಮರ ಸಾರುವುದಾಗಿ ಕೃಷ್ಣ ಬೈರೇಗೌಡ ಘೋಷಣೆ ಮಾಡಿದ್ದಾರೆ. ಸುಗಮ ಫುಟ್ ಪಾತ್, ಗುಂಡಿಗಳ ಮುಚ್ಚುವಿಕೆ ಸೇರಿ ಮೂಲಭೂತ ಸೌಕರ್ಯ ಸುಧಾರಣೆಗೆ ಇವತ್ತಿನ ಮೀಟಿಂಗ್ ಪೂರಕವಾಗಿತ್ತು. ಜುಲೈ 1 ರಿಂದ GBA ಫುಟ್ ಪಾತ್ ಕಬ್ಜಾ ಮಾಡಿದವರ ವಿರುದ್ಧ ಅಭಿಯಾನ ಕೈಗೆತ್ತಿಕೊಳ್ಳಲಿದ್ದು, ಈ ಮೊದಲೇ ಫುಟ್ ಪಾತ್ ಒತ್ತುವರಿ ಮಾಡಿಕೊಂಡವರು ಬುದ್ಧಿ ಕಲಿಯುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ಏರ್‌ಪೋರ್ಟ್‌ನಲ್ಲೇ ಹೈಟೆಕ್ ಭಿಕ್ಷಾಟನೆ!
ಏರ್‌ಪೋರ್ಟ್‌ನಲ್ಲೇ ಹೈಟೆಕ್ ಭಿಕ್ಷಾಟನೆ!
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ