ಮೆಟ್ರೋ ಟಿಕೆಟ್ ದರ ಸಮರ: ಎಲ್ಲವೂ ನಿಮ್ಮ ಕೈಯಲ್ಲಿದೆ, ಡ್ರಾಮಾ ಮಾಡಬೇಡಿ; ಸಿಎಂ ವಿರುದ್ಧ ಸೂರ್ಯ ಕಿಡಿ

ಫೆಬ್ರವರಿ 9ರಿಂದ ಅಂದರೆ ನಾಳೆಯಿಂದ ನಮ್ಮ ಮೆಟ್ರೋ ಪ್ರಯಾಣ ದರದಲ್ಲಿ ಏರಿಕೆ ಆಗಲಿದೆ. ಸಂಸದ ತೇಜಸ್ವಿ ಸೂರ್ಯ ಸಿಎಂ ಸಿದ್ಧರಾಮಯ್ಯ ಹಳೆಯ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದು, ಹಿಂದಿನ ದರ ಏರಿಕೆ ವೇಳೆ ಜನರಿಗೆ ಹೊರೆ ಎಂದಿದ್ದ ಸಿಎಂ, ಈಗೇಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮೆಟ್ರೋ ಟಿಕೆಟ್ ದರ ಸಮರ: ಎಲ್ಲವೂ ನಿಮ್ಮ ಕೈಯಲ್ಲಿದೆ, ಡ್ರಾಮಾ ಮಾಡಬೇಡಿ; ಸಿಎಂ ವಿರುದ್ಧ ಸೂರ್ಯ ಕಿಡಿ
ಸಂಸದ ತೇಜಸ್ವಿ ಸೂರ್ಯ, ಸಿಎಂ ಸಿದ್ದರಾಮಯ್ಯ
Image Credit source: google
Edited By:

Updated on: Feb 08, 2026 | 4:46 PM

ಬೆಂಗಳೂರು, ಫೆಬ್ರವರಿ 08: ರಾಜ್ಯ ಸರ್ಕಾರ ಹಾಗೂ ಕೇಂದ್ರದ ನಡುವೆ ಮೆಟ್ರೋ (Metro) ಟಿಕೆಟ್ ದರ ಏರಿಕೆ ಜಟಾಪಟಿ ಮುಂದುವರೆದಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಿಎಂ ಸಿದ್ದರಾಮಯ್ಯ (Siddaramaiah) ಹಳೇ ಟ್ವೀಟ್​ ಟ್ಯಾಗ್​ ಮಾಡಿದ್ದು, ಹಾಗಾದರೆ ಕಳೆದ ಬಾರಿ ದರ ಕಡಿಮೆ ಮಾಡಲು ಏಕೆ ಸೂಚಿಸಿದ್ದೀರಿ. ಎಲ್ಲವೂ ನಿಮ್ಮ ಕೈಯಲ್ಲಿದೆ, ಡ್ರಾಮಾ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.

ಈಗ ಆ ಅಧಿಕಾರ ಇಲ್ವಾ?

ಕಳೆದ ಬಾರಿ ಮೆಟ್ರೋ ಪ್ರಯಾಣ ಟಿಕೆಟ್​​ ದರ ಏರಿಕೆ ಮಾಡಿದಾಗ ಟಿಕೆಟ್ ದರ ಕಡಿಮೆ ಮಾಡಿ ಎಂದು ಬಿಎಂಆರ್​​ಸಿಎಲ್​​ಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಈ ಕುರಿತು ಸಿಎಂ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಇದೀಗ ಅದೇ ಟ್ವೀಟ್ ಟ್ಯಾಗ್ ಮಾಡಿರುವ ತೇಜಸ್ವಿ ಸೂರ್ಯ, ಈಗ ಆ ಅಧಿಕಾರ ಇಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಟ್ವೀಟ್​

ಮೆಟ್ರೋ ಪ್ರಯಾಣ ದರ ಹೆಚ್ಚಳದಿಂದ ಜನರಿಗೆ ಹೊರೆಯಾಗುತ್ತಿದೆ. ಈಗ ಬೆಲೆ ಏರಿಕೆ ಮಾಡಿದ್ದು ಕೇಂದ್ರ ಸರ್ಕಾರ ಅಂತೀರಿ. ಹಾಗಾದರೆ ಕಳೆದ ಬಾರಿ ದರ ಕಡಿಮೆ ಮಾಡಲು ಏಕೆ ಸೂಚಿಸಿದ್ದೀರಿ. ಎಲ್ಲವೂ ನಿಮ್ಮ ಕೈಯಲ್ಲಿದೆ, ಡ್ರಾಮಾ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಬಿಗ್​​ ಶಾಕ್​​: ವಿವಾದದ ನಡುವೆಯೂ ನಿರ್ಧಾರದಂತೆ ನಾಳೆಯಿಂದ ದರ ಏರಿಕೆ ಫಿಕ್ಸ್​

ಮೆಟ್ರೋ ಪ್ರಯಾಣ ಟಿಕೆಟ್ ದರ ಏರಿಕೆ ವಿಚಾರವಾಗಿ ಬೆಂಗಳೂರಿನ ಆರ್.ವಿ.ರೋಡ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಜೊತೆ ಸಂಸದ ತೇಜಸ್ವಿ ಸೂರ್ಯ ಇಂದು ಸಂವಾದ ಮಾಡಿದ್ದಾರೆ. ಈ ವೇಳೆ ಅನೇಕ ಪ್ರಯಾಣಿಕರು ಮೆಟ್ರೋ ಪ್ರಯಾಣ ಟಿಕೆಟ್ ದರ ಏರಿಕೆ ಬಗ್ಗೆ ತಮ್ಮ ತಮ್ಮ ಅನಿಸಿಕೆ ಹೇಳಿದ್ದಾರೆ.

ಅವರಿಗೋಸ್ಕರ ದರ ಕಡಿಮೆ ಮಾಡಿ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರ ಪದೇ ಪದೇ ದರ ಏರಿಕೆ ಮಾಡಿರುವುದಕ್ಕೆ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಮೆಟ್ರೋದಲ್ಲಿ  ಓಡಾಡುವವರು ಶ್ರೀಮಂತರಲ್ಲ. ಗಾರ್ಮೆಂಟ್ ಕೆಲಸ ಮಾಡುವವರು, ವಿದ್ಯಾರ್ಥಿಗಳು. ಪ್ರತಿನಿತ್ಯ 10 ರಿಂದ 12 ಲಕ್ಷ ಜನ ಓಡಾಡುತ್ತಾರೆ. ಅವರಿಗೋಸ್ಕರ ದರ ಕಡಿಮೆ ಮಾಡಿ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us