ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್ ನ್ಯೂಸ್: ಮೇ ತಿಂಗಳಿನಲ್ಲಿ ಓಪನ್ ಆಗಲ್ಲ ಪಿಂಕ್ ಲೈನ್! ವಿಳಂಬಕ್ಕೆ ಅಸಲಿ ಕಾರಣವೇನು?

ಬೆಂಗಳೂರಿನ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ ಜೂನ್-ಜುಲೈಗೆ ವಿಳಂಬವಾಗುವ ಸಾಧ್ಯತೆಯಿದೆ. ಮೊದಲಿಗೆ, ಮೇ ತಿಂಗಳಲ್ಲಿ ಪಿಂಕ್ ಲೈನ್ ಲೋಕಾರ್ಪಣೆಯಾಗಿದೆ ಎಂದು ಹೇಳಲಾಗಿತ್ತು. ಇದೀಗ, ರೈಲುಗಳು ಲಭ್ಯವಿದ್ದರೂ ತಾಂತ್ರಿಕ ಪರೀಕ್ಷೆಗಳು ಬಾಕಿ ಇರುವುದು ವಿಳಂಬಕ್ಕೆ ಕಾರಣವಾಗಿದೆ. ಇದು ಮೆಟ್ರೋ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್ ನ್ಯೂಸ್: ಮೇ ತಿಂಗಳಿನಲ್ಲಿ ಓಪನ್ ಆಗಲ್ಲ ಪಿಂಕ್ ಲೈನ್! ವಿಳಂಬಕ್ಕೆ ಅಸಲಿ ಕಾರಣವೇನು?
ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)
Image Credit source: tv9
Edited By:

Updated on: Apr 08, 2026 | 7:43 AM

ಬೆಂಗಳೂರು, ಏಪ್ರಿಲ್ 8: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಬಲ್ಲ ಬಹುನಿರೀಕ್ಷಿತ ನಮ್ಮ ಮೆಟ್ರೋದ (Namma Metro) ಪಿಂಕ್ ಲೈನ್ (Pink Line) ಲೋಕಾರ್ಪಣೆ ಮತ್ತೆ ಮುಂದಕ್ಕೆ ಹೋಗುವ ಲಕ್ಷಣಗಳು ಕಾಣಿಸುತ್ತಿವೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಈ ಮಾರ್ಗದ ಪೈಕಿ, ಮೊದಲ ಹಂತದಲ್ಲಿ 6 ನಿಲ್ದಾಣಗಳನ್ನು ಮೇ ತಿಂಗಳಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಮತ್ತು ರಾಜ್ಯ ಸರ್ಕಾರ ಯೋಜಿಸಿದ್ದವು. ಆದರೆ, ತಾಂತ್ರಿಕ ಪರೀಕ್ಷೆಗಳು (Testing) ಬಾಕಿ ಇರುವುದರಿಂದ ಜೂನ್ ಅಥವಾ ಜುಲೈನಲ್ಲಿ ಉದ್ಘಾಟನೆಯಾಗುವ ಸಾಧ್ಯತೆಯಿದೆ.

ರೈಲುಗಳಿದ್ದರೂ ವಿಳಂಬ ಏಕೆ?

ಸಾಮಾನ್ಯವಾಗಿ ಹೊಸ ಮೆಟ್ರೋ ಮಾರ್ಗ ಉದ್ಘಾಟನೆಗೆ ರೈಲುಗಳ ಕೊರತೆ ಅಡ್ಡಿಯಾಗುತ್ತಿತ್ತು. ಆದರೆ ಪಿಂಕ್ ಲೈನ್‌ಗಾಗಿ ಈಗಾಗಲೇ ಬಿಇಎಂಎಲ್ (BEML) ನಿಂದ ಐದು ರೈಲುಗಳು ಬಂದಿವೆ. ಒಟ್ಟು 23 ರೈಲುಗಳಿಗೆ ಆರ್ಡರ್ ನೀಡಲಾಗಿದ್ದು, ಹಂತಹಂತವಾಗಿ ಪೂರೈಕೆಯಾಗುತ್ತಿದೆ. ಆದರೆ ಸುರಕ್ಷತಾ ಪರೀಕ್ಷೆ ಮತ್ತು ಸಿಗ್ನಲಿಂಗ್ ಟೆಸ್ಟಿಂಗ್ ಕೆಲಸಗಳು ಪೂರ್ಣಗೊಳ್ಳದ ಕಾರಣ ಪ್ರಯಾಣಿಕರು ಮತ್ತಷ್ಟು ಕಾಲ ಕಾಯುವುದು ಅನಿವಾರ್ಯವಾಗಿದೆ.

ಪಿಂಕ್ ಲೈನ್ ಮೆಟ್ರೋ ವಿಶೇಷತೆ ಏನು?

  • ಒಟ್ಟು ಉದ್ದ: 21.25 ಕಿ.ಮೀ
  • ನಿಲ್ದಾಣಗಳು: ಒಟ್ಟು 18 (12 ಅಂಡರ್ ಗ್ರೌಂಡ್, 6 ಎಲಿವೇಟೆಡ್)
  • ಮೊದಲ ಹಂತ: ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 6 ಮೇಲ್ಸೇತುವೆ ನಿಲ್ದಾಣಗಳು.
  • ಅಂಡರ್ ಗ್ರೌಂಡ್ ಕಾಮಗಾರಿ: 13.76 ಕಿ.ಮೀ ವ್ಯಾಪ್ತಿಯ ಸುರಂಗ ಮಾರ್ಗದ ಕೆಲಸ ನಡೆಯುತ್ತಿದ್ದು, ಈ ವರ್ಷದ ಅಂತ್ಯಕ್ಕೆ ಪೂರ್ಣ ಮಾರ್ಗ ಲಭ್ಯವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​ ಕೊಟ್ಟ BWSSB: ಮೂರು ತಿಂಗಳ ಅವಧಿಗೆ OTS ಯೋಜನೆ ಜಾರಿ

ಬಿಎಂಆರ್‌ಸಿಎಲ್ ಪ್ರತಿಬಾರಿಯೂ ನೀಡಿದ ಸಮಯಕ್ಕೆ ಕಾಮಗಾರಿ ಮುಗಿಸದೆ ವಿಳಂಬ ಮಾಡುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us