
ಬೆಂಗಳೂರು, ಜುಲೈ 22: ಪಿಂಕ್ ಲೈನ್ ಬೆಂಗಳೂರಿನ ಬಹುನಿರೀಕ್ಷಿತ ಮೆಟ್ರೋ ಮಾರ್ಗ. ಆಗಸ್ಟ್ 15ರಂದು ಪಿಂಕ್ ಲೈನ್ನಲ್ಲಿ (Pink Line) ರೈಲು ಸಂಚಾರ ಮಾಡಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಆರ್ಡಿಎಸ್ಓದಿಂದ ಅನುಮತಿ ಸಿಗದ ಹಿನ್ನೆಲೆ ಮತ್ತೆ ಮೆಟ್ರೋ ಓಪನ್ ಆಗುವುದು ಡೌಟ್ ಎನ್ನಲಾಗುತ್ತಿದ್ದು, ಮೆಟ್ರೋ ಪ್ರಯಾಣಿಕರಿಗೆ ಮತ್ತೊಮ್ಮೆ ನಿರಾಸೆ ಮೂಡಿದೆ.
ನಮ್ಮ ಮೆಟ್ರೋ ಪಿಂಕ್ ಲೈನ್ ರೈಲುಗಳಿಗೆ ಈಗಾಗಲೇ ಅಧಿಕೃತ ಸ್ಪೀಡ್ ಸರ್ಟಿಫಿಕೇಟ್ ನೀಡಲಾಗಿದೆ. ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ ವೇಗ ಪ್ರಮಾಣ ಪತ್ರವನ್ನು ನೀಡಿದೆ. ಯಾವುದೇ ವೇಗದ ನಿರ್ಬಂಧಗಳಿಲ್ಲದೆ, ಗಂಟೆಗೆ 90 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಬೆಮಲ್ನಿಂದ 6 ರೈಲು ಕೂಡ ಬಂದಿದೆ. ಹಾಗಾಗಿ ಆಗಸ್ಟ್ 15ಕ್ಕೆ ಪಿಂಕ್ ಲೈನ್ ಓಪನ್ ಮಾಡುವುದಾಗಿ ಬಿಎಂಆರ್ಸಿಎಲ್ ಅಧಿಕಾರಿಗಳು ಹೇಳಿದ್ದರು.
ಈಗಾಗಲೇ ಪಿಂಕ್ ಲೈನ್ನಲ್ಲಿ ಆರ್ಡಿಎಸ್ಓ ಬಂದು ಪಿಂಕ್ ಲೈನ್ ಅನ್ನು ಎಲ್ಲಾ ತಪಾಸಣೆ ಮಾಡಿದರೂ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಆರ್ಡಿಎಸ್ಓ ಗ್ರೀನ್ ಸಿಗ್ನಲ್ ನೀಡಿದ ನಂತರ ಸಿಎಂಆರ್ಎಸ್ ಅಂತಿಮ ಹಂತದ ತಪಾಸಣೆ ಮಾಡಬೇಕು. ನಂತರ ವರದಿಯನ್ನು ರೈಲ್ವೆ ಬೋರ್ಡ್ಗೆ ಕಳಿಸಲಾಗುತ್ತದೆ. ಅಲ್ಲಿಂದ ಅನುಮತಿ ನೀಡಿದ ಮೇಲೆ ಪಿಂಕ್ ಲೈನ್ ಓಪನ್ ಆಗಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಪಿಂಕ್ ಓಪನ್ ಆಗಬಹುದು ಎನ್ನಲಾಗುತ್ತಿದ್ದು, ಇದಕ್ಕೆ ನಮ್ಮ ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಸುಮಾರು 7.5 ಕಿ.ಮೀ ಉದ್ದದ ಎಲಿವೇಟೆಡ್ ಮಾರ್ಗವಾಗಿದ್ದು, ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಆರು ನಿಲ್ದಾಣಗಳಿವೆ. ವಿಶೇಷವಾಗಿ ಜಯದೇವ ಆಸ್ಪತ್ರೆಯ ಇಂಟರ್‌ಚೇಂಜ್ ನಿಲ್ದಾಣವು, ಪ್ರಯಾಣಿಕರಿಗೆ ಭಾರಿ ಅನುಕೂಲ ಕಲ್ಪಿಸಲಿದೆ. ಇದು ಈಗ ಬೆಂಗಳೂರು ಮೆಟ್ರೋ ಜಾಲವನ್ನು 103.6 ಕಿ.ಮೀ. ಗೆ ವಿಸ್ತರಿಸುತ್ತದೆ. ಕಾಳೇನ ಅಗ್ರಹಾರ ಟು ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿರುವ ಪಿಂಕ್ ಲೈನ್ 21.25 ಕಿಮೀ ವಿಸ್ತೀರ್ಣ, 18 ಮೆಟ್ರೋ ಸ್ಟೇಷನ್ಗಳು.
12 ಅಂಡರ್ ಗ್ರೌಂಡ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ಗಳಿದ್ದು, ಆಗಸ್ಟ್- 15 ರಂದು ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಬಿಎಂಆರ್ಸಿಎಲ್. ಉಳಿದ 13.76. ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಕ್ತಾಯದ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ಪ್ರೇಮ್, ‘ಇದರಿಂದ ಬನ್ನೇರುಘಟ್ಟ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಆಗಲಿದೆ ಎಂದಿದ್ದಾರೆ’.
ಇದನ್ನೂ ಓದಿ: ನಮ್ಮ ಮೆಟ್ರೋ ಪಿಂಕ್ ಲೈನ್ ಆರಂಭಕ್ಕೆ ಭರದ ಸಿದ್ಧತೆ: ನಾಳೆಯಿಂದ ಪರಿಶೀಲನಾ ಕಾರ್ಯ ಶುರು
ಒಟ್ಟಿನಲ್ಲಿ ಆಗಸ್ಟ್- 15ರಂದು ಪಿಂಕ್ ಲೈನ್ ಮಾರ್ಗದ 6 ಮೆಟ್ರೋ ಸ್ಟೇಷನ್ಗಳನ್ನು ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿತ್ತು, ಆದರೆ ಆರ್ಡಿಎಸ್ಓ ಅನುಮತಿ ನೀಡದ ಹಿನ್ನೆಲೆ
ಆಗಸ್ಟ್- 15 ರಂದು ಮೆಟ್ರೋ ಸಂಚಾರ ಮಾಡುವುದು ಡೌಟ್ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.