Namma Metro: ಹೊಸ ವರ್ಷದ ಮೊದಲ ದಿನವೇ ನಮ್ಮ ಮೆಟ್ರೋಗೆ ರೂ. 1 ಕೋಟಿಗೂ ಆದಾಯ
ಹೊಸ ವರ್ಷಚಾರಣೆ ದಿನ ನಮ್ಮ ಮೆಟ್ರೋದಲ್ಲಿ 6 ಲಕ್ಷ 50 ಸಾವಿರ ಪ್ರಯಾಣಿಕರು ಸಂಚರಿಸುವ ಮೂಲಕ 1 ಕೋಟಿ, 70 ಲಕ್ಷ ಆದಾಯವಾಗಿದೆ.
ಬೆಂಗಳೂರು: ನಗರದಲ್ಲಿ ಸುಲಭ ಮತ್ತು ಅತಿ ವೇಗದ ಸಂಚಾರಕ್ಕೆ ನಮ್ಮ ಮೆಟ್ರೋ (Namma Metro) ಬಹಳಷ್ಟು ಅನುಕೂಲಕರವಾಗಿದೆ. ಪ್ರತಿನಿತ್ಯ ಸಾವಿರಾರು ಜನರು ನಮ್ಮ ಮೆಟ್ರೋವನ್ನು ಅವಲಂಬಿಸಿದ್ದಾರೆ. ಇದೀಗ ನಮ್ಮ ಮೆಟ್ರೋ ಹೊಸ ವರ್ಷಕ್ಕೆ ದಾಖಲೆ ಬರೆದಿದೆ. ಹೌದು ಹೊಸ ವರ್ಷಚಾರಣೆ ದಿನ (ಡಿ.31/2022) ರಂದು ಒಂದೇ ದಿನ 6 ಲಕ್ಷ 50 ಸಾವಿರ ಪ್ರಯಾಣಿಕರು ಸಂಚರಿಸುವ ಮೂಲಕ 1 ಕೋಟಿ, 70 ಲಕ್ಷ ಆದಾಯಗಳಿಸಿದೆ. ಮೆಟ್ರೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಹೆಚ್ಚಿನ ಆದಾಯಗಳಿಸಿದ್ದು ಮತ್ತು ಪ್ರಯಾಣಿಕರು ಸಂಚರಿಸಿದ್ದು.
ಇದನ್ನೂ ಓದಿ: ಹೊಸ ವರ್ಷ ಆಚರಣೆ ವೇಳೆ ಎಣ್ಣೆ ಕಿಕ್; ಬೆಂಗಳೂರಲ್ಲಿ 78 ಡ್ರಂಕ್ ಆಂಡ್ ಡ್ರೈವ್ ಕೇಸ್ ಬುಕ್
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆ ಬಿಎಂಆರ್ಸಿಎಲ್ ನಿಗಮ (BMRCL)ಮಧ್ಯರಾತ್ರಿ 2 ಗಂಟೆಯವರೆಗೂ ಮೆಟ್ರೋ ಅವಧಿ ವಿಸ್ತರಿಸಿತ್ತು. ಎಂಜಿ ರಸ್ತೆ, ಕಬ್ಬನ್ ಪಾರ್ಕ್ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಭರ್ಜರಿ ಮದ್ಯ ಮಾರಾಟ: ಅಬಕಾರಿ ಇಲಾಖೆ ಬೊಕ್ಕಸಕ್ಕೆ ಹರಿದು ಬಂತು 657 ಕೋಟಿ ರೂ. ಆದಾಯ
ಇನ್ನೂ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದ ಕಾರಣ ಬಿಎಂಆರ್ಸಿಎಲ್ ನಿಗಮದ ಸಿಬ್ಬಂದಿ ಜೊತೆಗೆ 100 ಕ್ಕೂ ಹೆಚ್ಚು ಹೋಂ ಗಾರ್ಡ್ಗಳನ್ನು ನಿಯೋಜನೆ ಮಾಡಿಕೊಂಡಿತ್ತು. 2022ರ ಆರಂಭದಲ್ಲಿ 2 ಲಕ್ಷ ರೈಡರ್ ಶಿಫ್ ಇದ್ದು, ಡಿಸೆಂಬರ್ಗೆ 5 ಲಕ್ಷದವರೆಗೂ ಹೆಚ್ಚಿಗೆ ಆಗಿತ್ತು. ಡಿಸೆಂಬರ್ 31 ರಂದು ಮೊದಲ ಬಾರಿಗೆ ಆರೂವರೆ ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರಿಸಿದ್ದಾರೆ ಎಂದು ಮೆಟ್ರೋ ನಿಗಮ ಎಂಡಿ ಅಂಜುಂ ಫರ್ವೇಜ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Mon, 2 January 23