AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಸುಲಭ: ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ!

ರಾಜ್ಯ ಸರ್ಕಾರ ಬೆಂಗಳೂರಿನ ಆಸ್ತಿ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೆ ಎ-ಖಾತಾ ಪಡೆಯಲು ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಆ ಮೂಲಕ ಆಸ್ತಿ ಮಾಲೀಕರಿಗೆ ದೀಪಾವಳಿ ಉಡುಗರೆ ನೀಡಲಾಗಿದೆ. ಹಾಗಾದರೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ಎ-ಖಾತಾ ಪಡೆಯಲು ಆನ್‌ಲೈನ್​​ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಸುಲಭ: ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ!
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on:Oct 15, 2025 | 3:05 PM

Share

ಬೆಂಗಳೂರು, ಅಕ್ಟೋಬರ್​​ 15: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೆ ಎ-ಖಾತಾವನ್ನು (A-Khata) ಆನ್‌ಲೈನ್‌ನಲ್ಲೇ ಪಡೆಯಬಹುದಾಗಿದೆ. ಆ ಮೂಲಕ ಬೆಂಗಳೂರಿನ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ದೀಪಾವಳಿ ಅತಿ ದೊಡ್ಡ ಗಿಫ್ಟ್​​ ನೀಡಿದೆ. ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತಷ್ಟು ಸುಲಭವಾಗಲಿದೆ. ಈ ಉಪಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್​​ ಬುಧವಾರ ಚಾಲನೆ ನೀಡಿದ್ದಾರೆ.

ಈ ಕುರಿತಾಗಿ ಡಿಸಿಎಂ ಡಿಕೆ ಶಿವಕುಮಾರ್​ ಟ್ವೀಟ್​ ಮಾಡಿದ್ದಾರೆ. ‘ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಸುಲಭ! ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬೆಂಗಳೂರಿನ ನಾಗರಿಕರಿಗೆ ಅನುಕೂಲವಾಗಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೆ ಎ-ಖಾತಾವನ್ನು ಆನ್‌ಲೈನ್‌ನಲ್ಲೇ ಪಡೆಯುವುದಕ್ಕೆ ಇಂದು ಚಾಲನೆ ನೀಡಲಾಯಿತು ಎಂದಿದ್ದಾರೆ.

ಡಿಕೆ ಶಿವಕುಮಾರ್​ ಟ್ವೀಟ್

2000 ಚ.ಮೀ.ಗಳವರೆಗಿನ ನಿವೇಶನಗಳಿಗೆ https://bbmp.karnataka.gov.in/BtoAKhata ವೆಬ್‌ಸೈಟ್‌ನಲ್ಲಿ ಹಾಗೂ 2000 ಚ.ಮೀ.ಗೂ ಹೆಚ್ಚಿನ ನಿವೇಶನಗಳಿಗೆ https://bpas.bbmp.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದು ಲಕ್ಷಾಂತರ ಜನರಿಗೆ ಅನುಕೂಲವಾಗಲಿದ್ದು, ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ತಾಪತ್ರಯ ಕಡಿಮೆ ಆಗಲಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಬಿ-ಖಾತಾದಿಂದ ಎ-ಖಾತಾ ಆನ್​​ಲೈನ್​ನಲ್ಲಿ ಪರಿವರ್ತಿಸುವುದು ಹೇಗೆ?

2000 ಚ.ಮೀ.ಗಳವರೆಗಿನ ನಿವೇಶನಗಳಿಗೆ

  • ನಿಮ್ಮ ಮೊಬೈಲ್​​ ಮತ್ತು ಓಟಿಪಿ ಬಳಸಿಕೊಂಡು https://bbmp.karnataka.gov.in/BtoAKhata ಸೈಟ್​​ಗೆ ಲಾಗಿನ್​ ಆಗಿ.
  • ನಿಮ್ಮ ಅಂತಿಮ ಬಿ-ಖಾತೆಯ ಇಪಿಐಡಿ ಸಂಖ್ಯೆಯನ್ನು ನಮೂದಿಸಿ ವಿವರಗಳನ್ನು ಪಡೆಯಿರಿ.
  • ಮಾಲೀಕರ ಆಧಾರ್ ದೃಢೀಕರಿಸಿ.
  • ನಿವೇಶನವಿರುವ ಸ್ಥಳವನ್ನು ಮತ್ತು ನಿವೇಶನ ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢೀಕರಿಸಿ.
  • ಭೂ ಪರಿವರ್ತನೆಯಾದ ಮತ್ತು ಭೂ ಪರಿವರ್ತನೆಯಾಗದ ಎರಡೂ ನಿವೇಶನಗಳು ಅರ್ಹ (ಫ್ಲಾಟ್​​ಗ ಳಿಗೆ ಅರ್ಹತೆಯಿಲ್ಲ).
  • ಸ್ವೀಕೃತಿಯನ್ನು ಪಡೆಯಿರಿ.
  • ನಗರ ಪಾಲಿಕೆ ವತಿಯಿಂದ ನಿವೇಶನಕ್ಕೆ ಭೇಟಿ ಮತ್ತು ದೃಢೀಕರಣ
  • ಮಾರುಕಟ್ಟೆ ಮೌಲ್ಯದ ಶೇ. 5% ರಷ್ಟು ಮೊತ್ತವನ್ನು ಏಕ ನಿವೇಶನ ಅನುಮೋದನೆ ಶುಲ್ಕವಾಗಿ ಹಾಗೂ ಇತರೆ ಶುಲ್ಕಗಳನ್ನು ಪಾವತಿಸುವುದು.
  • ಸ್ವಯಂಕೃತ ಏಕ ನಿವೇಶನ ಅನುಮೋದನೆಯಾಗಿ ಅರ್ಹತಾನುಸಾರ ಎ-ಖಾತಾ ವಿತರಣೆ

2000 ಚ.ಮೀ.ಗೂ ಹೆಚ್ಚಿನ ನಿವೇಶನಗಳಿಗೆ

  • ನೋಂದಾಯಿತ ವಾಸ್ತುಶಿಲ್ಪಿ ಅಥವಾ ಎಂಜಿನಿಯರ್​ರನ್ನು ಸಂಪರ್ಕಿಸಿ
  • ಯಾವುದೇ ರೀತಿಯ ನಿವೇಶನಗಳಿಗಾಗಿ https://bpas.bbmp.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
  • ಅಗತ್ಯ ದಾಖಲೆಗಳು ಮತ್ತು ಕ್ಯಾಡ್ ಡ್ರಾಯಿಂಗ್ ಅನ್ನು ಅಪ್ ಲೋಡ್ ಮಾಡಿ
  • ಆರಂಭಿಕ ಪರಿಶೀಲನಾ ಶುಲ್ಕ ರೂ.500 ಅನ್ನು ಪಾವತಿಸಬೇಕು.
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ (ಫ್ಲಾಟ್ ಗಳಿಗೆ ಅರ್ಹತೆಯಿಲ್ಲ)
  • ನಿವೇಶನಕ್ಕೆ ಭೇಟಿ ನೀಡುವ ಮೂಲಕ ಪರಿಶೀಲನೆ
  • ಅನ್ವಯವಾಗುವ ಶುಲ್ಕಗಳನ್ನು ಪಾವತಿಸುವುದು
  • ಅರ್ಹತಾನುಸಾರ ಏಕ ನಿವೇಶನ ಅನುಮೋದನೆ ಪ್ರಮಾಣಪತ್ರ, ಡ್ರಾಯಿಂಗ್ ಮತ್ತು ಎ-ಖಾತಾ ವಿತರಣೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:02 pm, Wed, 15 October 25

Follow Us
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!
‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!
‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!
ಮುಸ್ಲಿಮ್ ವಿದ್ಯಾರ್ಥಿಗೆ 'ಟೆರರಿಸ್ಟ್' ಎಂದು ಕ್ಲಾಸ್​ನಲ್ಲೇ ಅವಮಾನ!
ಮುಸ್ಲಿಮ್ ವಿದ್ಯಾರ್ಥಿಗೆ 'ಟೆರರಿಸ್ಟ್' ಎಂದು ಕ್ಲಾಸ್​ನಲ್ಲೇ ಅವಮಾನ!
ರಚಿತಾ ರಾಮ್​ಗೆ ಹಾಡಿನ ಮೂಲಕ ಪ್ರಪೋಸ್ ಮಾಡಿದ ಸಿದ್ದೇಗೌಡ್ರು
ರಚಿತಾ ರಾಮ್​ಗೆ ಹಾಡಿನ ಮೂಲಕ ಪ್ರಪೋಸ್ ಮಾಡಿದ ಸಿದ್ದೇಗೌಡ್ರು
ರಸ್ತೆ ಇಲ್ಲ, ವಿದ್ಯುತ್ ಇಲ್ಲ! ಮೂಲಭೂತ ಸೌಕರ್ಯವಿಲ್ಲದೆ ಜನರು ಕಂಗಾಲು!
ರಸ್ತೆ ಇಲ್ಲ, ವಿದ್ಯುತ್ ಇಲ್ಲ! ಮೂಲಭೂತ ಸೌಕರ್ಯವಿಲ್ಲದೆ ಜನರು ಕಂಗಾಲು!
ಮಾದಪ್ಪನ ಸನ್ನಿಧಿಯಲ್ಲಿ 23 ದಿನಗಳಲ್ಲಿ 2.33 ಕೋಟಿ ರೂ. ಹುಂಡಿ ಹಣ ಸಂಗ್ರಹ!
ಮಾದಪ್ಪನ ಸನ್ನಿಧಿಯಲ್ಲಿ 23 ದಿನಗಳಲ್ಲಿ 2.33 ಕೋಟಿ ರೂ. ಹುಂಡಿ ಹಣ ಸಂಗ್ರಹ!
ಗೌರಿ ಕಲ್ಯಾಣ ಸೀರಿಯಲ್ ಸಂತೆ; ಕಣ್ಣು ಕಟ್ಟಿದರೂ ಚಂದನಾ ಪತ್ತೆ ಹಚ್ಚಿದ ಹರಿ
ಗೌರಿ ಕಲ್ಯಾಣ ಸೀರಿಯಲ್ ಸಂತೆ; ಕಣ್ಣು ಕಟ್ಟಿದರೂ ಚಂದನಾ ಪತ್ತೆ ಹಚ್ಚಿದ ಹರಿ
ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮರು: ಸಿಸಿಟಿವಿ ವಿಡಿಯೋ ನೋಡಿ
ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮರು: ಸಿಸಿಟಿವಿ ವಿಡಿಯೋ ನೋಡಿ
ದೋಷ ನಿವಾರಣೆಗೆ ಹೋಮಗಳನ್ನ ಎಲ್ಲಿ ಮಾಡಬೇಕು?
ದೋಷ ನಿವಾರಣೆಗೆ ಹೋಮಗಳನ್ನ ಎಲ್ಲಿ ಮಾಡಬೇಕು?
ಇಂದು ಈ ರಾಶಿಯವರು ಹಣಕಾಸು ವಿಚಾರದಲ್ಲಿ ಎಚ್ಚರ!
ಇಂದು ಈ ರಾಶಿಯವರು ಹಣಕಾಸು ವಿಚಾರದಲ್ಲಿ ಎಚ್ಚರ!