AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಸ್ಪಿನ್ನರ್​ಗಳನ್ನೇ ನಂಬಿದ್ದೆ, ಆದರೆ ಅವರೆಲ್ಲರೂ ಆಫ್ ಡೇನಲ್ಲಿದ್ದರು..!

India vs Pakistan: ಕೊಲಂಬೊದಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 175 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು ಕೇವಲ 114 ರನ್​ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದೆ.

ನಾನು ಸ್ಪಿನ್ನರ್​ಗಳನ್ನೇ ನಂಬಿದ್ದೆ, ಆದರೆ ಅವರೆಲ್ಲರೂ ಆಫ್ ಡೇನಲ್ಲಿದ್ದರು..!
Salman Ali Agha
ಝಾಹಿರ್ ಯೂಸುಫ್
|

Updated on: Feb 16, 2026 | 8:59 AM

Share

T20 World Cup 2026: ಟಿ20 ವಿಶ್ವಕಪ್​​ನಲ್ಲಿ ಭಾರತದ ವಿರುದ್ಧದ ಸೋಲಿನ ಸಂಖ್ಯೆಯನ್ನು ಪಾಕಿಸ್ತಾನ್ ತಂಡ ಎಂಟಕ್ಕೇರಿಸಿದೆ. ಈ ಹಿಂದೆ ಏಳು ಬಾರಿ ಸೋತಿದ್ದ ಪಾಕ್ ಪಡೆ ಇದೀಗ ಕೊಲಂಬೊದಲ್ಲೂ ಮುಗ್ಗರಿಸಿದೆ. ಆರ್​. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಹಿಂದೆ ಮುಂದೆ ನೋಡದೇ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ದಾಂಡಿಗರ ಆರ್ಭಟದ ಮುಂದೆ ಪಾಕ್ ತಂಡ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್​ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು 18 ಓವರ್​ಗಳಲ್ಲಿ 114 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ್ 61 ರನ್​ಗಳ ಸೋಲನುಭವಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ, ನಾವು ಈ ಪಂದ್ಯದಲ್ಲಿ ನಮ್ಮ ಸ್ಪಿನ್ನರ್​ಗಳ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದ್ದೆವು. ಆದರೆ ಅವರ ಪಾಲಿಗೆ ಇಂದು ಅತ್ಯಂತ ಕೆಟ್ಟ ದಿನವಾಗಿತ್ತು. ಅಲ್ಲದೆ ಪಂದ್ಯದ ನಡುವೆ ನಮ್ಮ ಯೋಜನೆಗಳೇ ಕಾಣೆಯಾಗಿತ್ತು.

ಕಳೆದ ಆರು ತಿಂಗಳಲ್ಲಿ ನಮ್ಮ ಸ್ಪಿನ್ನರ್​ಗಳು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ನಾವು ಯಾವಾಗಲೂ ನಮ್ಮ ಸ್ಪಿನ್ನರ್‌ಗಳನ್ನು ನಂಬುತ್ತೇವೆ. ಅದರಂತೆ ಈ ಪಂದ್ಯದಲ್ಲೂ ನಂಬಿಕೆಯಿಟ್ಟಿದ್ದೆ. ಆದರೆ ಎಲ್ಲರೂ ಆಫ್ ಡೇನಲ್ಲಿದ್ದರು.

ಇದಾಗ್ಯೂ ನಾವು ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಬಹುದಾಗಿತ್ತು ಎಂಬುದು ನನ್ನ ಭಾವನೆ. ಟಿ20 ಪಂದ್ಯಗಳಲ್ಲಿ ನಾವು ಪವರ್‌ಪ್ಲೇನಲ್ಲಿ 3 ಅಥವಾ 4 ವಿಕೆಟ್‌ಗಳನ್ನು ಕಳೆದುಕೊಂಡರೆ, ಚೇಸಿಂಗ್ ಮಾಡುವುದು ಕಷ್ಟ. ಇವೆಲ್ಲವೂ ನಮ್ಮ ಸೋಲಿಗೆ ಕಾರಣ ಎನ್ನಬಹುದು ಎಂದು ಪಾಕ್ ನಾಯಕ ಹೇಳಿದ್ದಾರೆ.

ಇನ್ನು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಮಾತನಾಡಿದ ಸಲ್ಮಾನ್ ಅಲಿ ಅಘಾ. ಮೊದಲ ಇನ್ನಿಂಗ್ಸ್‌ ವೇಳೆ ಪಿಚ್​ ಸ್ವಲ್ಪ ಜಿಗುಟಾಗಿತ್ತು ಎಂದು ನಾನು ಭಾವಿಸುತ್ತೇನೆ. ಚೆಂಡು ಕೂಡ ಹಿಡಿತದಲ್ಲಿತ್ತು. ಇದಾಗ್ಯೂ ನಮ್ಮ ಬೌಲರ್​ಗಳಲ್ಲಿ ಯಾವುದೇ ಯೋಜನೆ ಕಾಣಿಸಿರಲಿಲ್ಲ.

ನಮ್ಮ ಬೌಲರ್‌ಗಳು ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್ ಮಾಡಲಿಲ್ಲ. ಇದರಿಂದ ಎದುರಾಳಿ ತಂಡ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ಈ ಸೋಲಿನ ಹೊರತಾಗಿಯೂ ನಾವು ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳಬೇಕಿದೆ. ಎರಡು ದಿನಗಳಲ್ಲೇ ನಮಗೆ ಮತ್ತೊಂದು ಮ್ಯಾಚ್ ಇದೆ. ಈ ಪಂದ್ಯವನ್ನು ಗೆದ್ದು ಸೂಪರ್ 8ಗೆ ಅರ್ಹತೆ ಪಡೆಯಬೇಕು ಎಂಬುದೇ ನಮ್ಮ ಸದ್ಯದ ಗುರಿ ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.

Follow Us
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
ಗ್ಯಾಸ್​ ಇಲ್ಲದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು