AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಬೆಂಗಳೂರಿನ ಹಲವೆಡೆ ಇಂದು, ನಾಳೆ ಕರೆಂಟ್ ಕಟ್, ಎಲ್ಲೆಲ್ಲಿ ಎಂಬ ವಿವರ ಇಲ್ಲಿದೆ

ವಿದ್ಯುತ್ ಸರಬರಾಜು ಕಂಪನಿಗಳು ಕೆಲವೆಡೆ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿರುವುದರಿಂದ ಬೆಂಗಳೂರು ನಗರದ ಹಲವೆಡೆ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ. ಎಲ್ಲೆಲ್ಲಿ, ಯಾವ ಏರಿಯಾಗಳಲ್ಲಿ ಕರೆಂಟ್ ಕಟ್ ಆಗಲಿದೆ, ಯಾವ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Bengaluru Power Cut: ಬೆಂಗಳೂರಿನ ಹಲವೆಡೆ ಇಂದು, ನಾಳೆ ಕರೆಂಟ್ ಕಟ್, ಎಲ್ಲೆಲ್ಲಿ ಎಂಬ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on: Nov 29, 2023 | 7:34 AM

Share

ಬೆಂಗಳೂರು, ನ.29: ಬೆಂಗಳೂರು ನಗರದ ಹಲವೆಡೆ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ(Bengaluru Power Cut). ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನಂತಹ ವಿದ್ಯುತ್ ಸರಬರಾಜು ಕಂಪನಿಗಳು ಕೆಲವೆಡೆ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿರುವುದರಿಂದ ಇಂದು(ನ.29) ಬೆಂಗಳೂರಿನ ಉತ್ತರ ಭಾಗದ ಹಲವೆಡೆ ವಿದ್ಯುತ್​ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಾಗೇ ನಾಳೆ (ನ.30) ಕೂಡ ಬೆಂಗಳೂರಿನ ಹಲವೆಡೆ ವಿದ್ಯುತ್ ಸಮಸ್ಯೆ ಎದುರಾಗಲಿದೆ.

ನವೆಂಬರ್ 29ರ ಬುಧವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ಬೆಂಗಳೂರಿನ ಉತ್ತರ ಭಾಗದ ಹಲವೆಡೆ ಇಂದು ವಿದ್ಯುತ್​ ವ್ಯತ್ಯಯವಾಗಲಿದೆ. ಇಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಸಹಕಾರನಗರ ಎ, ಬಿ, ಡಿ, ಇ, ಎಫ್ ಮತ್ತು ಜಿ ಬ್ಲಾಕ್‌, ಅಮೃತಹಳ್ಳಿ, ತಲಕಾವೇರಿ ಲೇಔಟ್, ಬಿಜಿಎಸ್ ಲೇಔಟ್, ನವ್ಯನಗರ, ಜಿಕೆವಿಕೆ ಲೇಔಟ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಕೆಂಪಾಪುರ, ಟೆಲಿಕಾಂ ಲೇಔಟ್, ಸಿಂಗಹಳ್ಳಿ 2ನೇ ಹಂತ, ವೆಂಕಟೇಶ್ವರನಗರ, ಕಳ್ಳಿಪಾಳ್ಯ, ಅತ್ತೂರು ಲೇಔಟ್, ತಿರುಮನಹಳ್ಳಿ, ಯಶೋಧಾ ನಗರ, ಗೋಪಾಲಪ್ಪ ಲೇಔಟ್, ಆರ್​ಎಂಝಡ್​ ಅಜೂರ್ ಬಡಾವಣೆ, ಬ್ರಿಗೇಡ್ ಕ್ಯಾಲಾಡಿಯಂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: Karnataka Rain: ಬೆಂಗಳೂರು ಸೇರಿ ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡಿಸೆಂಬರ್ 5ರವರೆಗೆ ಮಳೆ

ನವೆಂಬರ್ 30ರ ಗುರುವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ಹೊನ್ನಾವರ, ಇಸ್ತೂರು, ಗಂಡರಗುಳಿಪುರ, ಸಿಂಪಾಡಿಪುರ, ಹೊನ್ನದೇವಪುರ, ಕೋಡಿಹಳ್ಳಿ, ಮಧುರೆ, ಬೀರಯ್ಯನಪಾಳ್ಯ, ಹೊಸಪಾಳ್ಯ, ಮಲ್ಲುಹಳ್ಳಿ, ಕಾಡನೂರು, ಮಡುಗೊಂಡನಹಳ್ಳಿ, ಮಲ್ಲಪಾಡಿಗಟ್ಟ, ತಿಮ್ಮಸಂದ್ರ, ವಡ್ಡಗೆರೆ, ಪುರುಷನಹಳ್ಳಿ, ಆಲೇನಹಳ್ಳಿ, ದ್ಯಾನಬಾವನಹಳ್ಳಿ, ದ್ಯಾನಬಾಳವನಹಳ್ಳಿ , LM ವಿಂಡ್, ಸೋಂಪುರ ಕೈಗಾರಿಕಾ ಪ್ರದೇಶ, ಭಾರತೀಪುರ ಕಾಲೋನಿ, ದಾಬಸ್‌ಪೇಟೆ ಕಿಯಾಡ್‌ಬಿ ಕೈಗಾರಿಕಾ ಪ್ರದೇಶ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆಟಿಎನ್ ಹಳ್ಳಿ, ಪಿಲಾಲಿ, ರಂಗನಾಥಪುರ, ಅಡ್ಡಗಲ್, ರಾಯಲಪಾಡು ಮತ್ತು ಗೌನಿಪಲ್ಲಿ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?