ಪಾರ್ಕ್​ಗಳ ಶೇಕಡಾ 5ರಷ್ಟು ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ: ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಬೆಂಗಳೂರಲ್ಲಿ ನಡಿಗೆ ಚಳವಳಿ

ರಾಜ್ಯದ ಪಾರ್ಕ್‌ಗಳ ಶೇ. 5ರಷ್ಟು ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಸರ್ಕಾರದ ಕಾಯ್ದೆ ತಿದ್ದುಪಡಿ ವಿರೋಧಿಸಿ ಪರಿಸರವಾದಿ ಯಲ್ಲಪ್ಪ ರೆಡ್ಡಿ ಹಾಗೂ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಬೃಹತ್ ನಡಿಗೆ ಚಳವಳಿ ನಡೆಸಲಾಗಿದೆ. ದು ಅಭಿವೃದ್ಧಿಯ ಭಾಗ ಎಂದು ಸರ್ಕಾರ ಹೇಳುತ್ತಿದ್ದು, ನಾವ್ಯಾರೂ ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ಬಹಳ ಕೆಟ್ಟ ನಿರ್ಧಾರ ಎಂದು ಪರಿಸರವಾದಿಗಳು ಆಕ್ರೋಶ ಹೊರಹಾಕಿದ್ದಾರೆ.​​

ಪಾರ್ಕ್​ಗಳ ಶೇಕಡಾ 5ರಷ್ಟು ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ: ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಬೆಂಗಳೂರಲ್ಲಿ ನಡಿಗೆ ಚಳವಳಿ
ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಬೆಂಗಳೂರಲ್ಲಿ ನಡಿಗೆ ಚಳವಳಿ
Image Credit source: Tv9 Kannada
Edited By:

Updated on: Aug 30, 2026 | 9:07 AM

ಬೆಂಗಳೂರು, ಆಗಸ್ಟ್​ 30: ರಾಜ್ಯದ ಪಾರ್ಕ್​ಗಳ ಶೇಕಡಾ 5ರಷ್ಟು ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ನೀಡುವ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ಸಂಬಂಧ ರಾಜ್ಯ ಸರ್ಕಾರ ಅಂಗೀಕರಿಸಿರುವ ವಿಧೇಯಕ ವಿರೋಧಿಸಿ ಪರಿಸರವಾದಿ ಯಲ್ಲಪ್ಪರೆಡ್ಡಿ ಮತ್ತು ಸಂಸದ ತೇಜಸ್ವಿಸೂರ್ಯ (Tejasvi Surya) ನೇತೃತ್ವದಲ್ಲಿ ಬೆಂಗಳೂರಿನ (Bengaluru) ಲಾಲ್​ಬಾಗ್​ನ ಪಶ್ಚಿಮ ದ್ವಾರದಿಂದ ನಡಿಗೆ ಚಳವಳಿ ನಡೆಸಲಾಗಿದೆ. ಪಾರ್ಕ್​​ ಜಾಗವನ್ನು ಅನ್ಯ ಉದ್ದೇಶಗಳಿಗಾಗಿ ನೀಡಲು ಮುಂದಾಗಿರುವ ಸರ್ಕಾರದ ನಡೆ ಖಂಡಿಸಿ ಪರಿಸರ ಹೋರಾಟಗಾರರು, ಕನ್ನಡಪರ ಹೋರಾಟಗಾರರು ಕೂಡ ನಡಿಗೆ ಚಳವಳಿಗೆ ಸಾಥ್​​ ನೀಡಿದ್ದಾರೆ.

ನಡಿಗೆ ಚಳವಳಿಯಲ್ಲಿ ಯಾರೆಲ್ಲ ಭಾಗಿ?

Bengaluru Citizens Protest At Lalbagh: ಲಾಲ್ ಬಾಗ್ ನಲ್ಲಿ ಉದ್ಯಾನವನಗಳ ತಿದ್ದುಪದಿ ಮಸೂದೆ ವಿರುದ್ಧ ಹೋರಾಟ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಕೆ.ರಾಮಮೂರ್ತಿ, ಸಂಸದರಾದ ಡಾ.ಮಂಜುನಾಥ್, ಪಿ.ಸಿ.ಮೋಹನ್​​​, ನಟಿಯರಾದ ಸಂಯುಕ್ತ ಹೊರನಾಡು, ಪ್ರಣಿತಾ ಸುಭಾಷ್, ಸುಧಾ ಬೆಳವಾಡಿ, ಕರವೇ ಅಧ್ಯಕ್ಷ ಪ್ರವೀಣ್​ ಶೆಟ್ಟಿ ವಿಕಲಚೇತನರು, ನಾಗರಿಕ ಸಂಘಟನೆಗಳು, ವಾಯುವಿಹಾರಿಗಳು ಕೂಡ ನಡಿಗೆ ಚಳವಳಿಯಲ್ಲಿ ಭಾಗಿಯಾಗುವ ಮೂಲಕ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿದ್ದಾರೆ. ಇದು ಅಭಿವೃದ್ಧಿಯ ಭಾಗ ಎಂದು ಸರ್ಕಾರ ಹೇಳುತ್ತಿದ್ದು, ನಾವ್ಯಾರೂ ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ಲಾಲ್ಬಾಗ್​​ನಲ್ಲಿರುವ ಬೃಹತ್​​ ಬಂಡೆ ಬಹಳ ಹಳೆಯದ್ದಾಗಿದ್ದು, ಯಾರ ಅಭಿಪ್ರಾಯವನ್ನೂ ಕೇಳದೆ ನಿರ್ಧಾರ ಕೈಗೊಳ್ಳಲಾಗಿದೆ. ಇದು ಬಹಳ ಕೆಟ್ಟ ನಿರ್ಧಾರ ಎಂದು ಪರಿಸರವಾದಿಗಳು ಆಕ್ರೋಶ ಹೊರಹಾಕಿದ್ದಾರೆ.​​

ಇದನ್ನೂ ಓದಿ: ಕಾರವಾರ ಮೆಡಿಕಲ್ ಕಾಲೇಜು, ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಗೆ ರಾಮಕೃಷ್ಣ ಹೆಗಡೆ ಹೆಸರು: ಸಿಎಂ ಘೋಷಣೆ

ಸಾರ್ವಜನಿಕರಿಂದ ಪೋಸ್ಟ್ ಕಾರ್ಡ್ ಚಳವಳಿ

ರಾಜ್ಯದ ಪಾರ್ಕ್​ಗಳ ಶೇ.5ರಷ್ಟು ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ನೀಡುವ ಬಿಲ್​ಗೆ ವಿರೋಧಿಸಿ, ಬೆಂಗಳೂರಿನ ಪಾರ್ಕ್​ಗಳ ಉಳಿವಿಗಾಗಿ ಸಾರ್ವಜನಿಕರಿಂದ ಪೋಸ್ಟ್ ಕಾರ್ಡ್ ಚಳವಳಿಯೂ ಆರಂಭವಾಗಿದೆ. ಲಾಲ್​ಬಾಗ್​ನ ಪಶ್ಚಿಮ ದ್ವಾರದಲ್ಲಿ ಸಿಎಂಗೆ ಪತ್ರ ಬರೆಯುತ್ತಿರೋ ಸಾರ್ವಜನಿಕರು ಪತ್ರ ಬರೆಯುತ್ತಿದ್ದು, ಇವತ್ತು 3000 ಪತ್ರ ಬರೆಯುವರ ಗುರಿ ಹೊಂದಿದ್ದಾರೆ. ನಿನ್ನೆ ಕೂಡ ಮುಖ್ಯಮಂತ್ರಿಗಳಿಗೆ ಬೆಂಗಳೂರಿನ ನಾಗರಿಕರು 1000 ಪತ್ರ ಬರೆದಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us