ತಹಶೀಲ್ದಾರ್ ವರ್ಗಾವಣೆ ವಿಚಾರ; ಆರ್ ಅಶೋಕ್ ಮತ್ತು ಅಶ್ವತ್ಥ್ ನಾರಾಯಣ ಮಧ್ಯೆ ಶೀತಲಸಮರ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್ ನಾರಾಯಣ ಮನವಿ ಮಾಡಿದ್ದರು. ಈ ಸಂಬಂಧ ಆರ್. ಅಶೋಕ್ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ನಿನ್ನೆ ನೇರವಾಗಿ ಭೇಟಿಯಾಗಿ ಆರ್.ಅಶೋಕ್‌ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ಅಶ್ವತ್ಥ್ ನಾರಾಯಣ ಮನವಿಯನ್ನು ಅಶೋಕ್ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರು: ಸಚಿವರಾದ ಆರ್. ಅಶೋಕ್, ಡಾ. ಅಶ್ವತ್ಥ್ ನಾರಾಯಣ ಮಧ್ಯೆ ಶೀತಲಸಮರ ಏರ್ಪಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ. ಮಾಗಡಿ ತಹಶೀಲ್ದಾರ್ ವರ್ಗಾವಣೆ ವಿಚಾರವಾಗಿ ಕೋಲ್ಡ್‌ವಾರ್ ನಡೆಯುತ್ತಿದೆ. ವರ್ಗಾವಣೆ ವಿಚಾರವಾಗಿ ವಿಧಾನಸಭೆ ಲಾಂಜ್‌ನಲ್ಲಿ ನಿನ್ನೆ (ಮಾರ್ಚ್ 17) ಅಶೋಕ್‌ರನ್ನು ಡಾ.ಅಶ್ವತ್ಥ್ ನಾರಾಯಣ ಪ್ರಶ್ನಿಸಿದ್ದರು ಎಂದು ತಿಳಿದುಬಂದಿದೆ. ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ವರ್ಗಾವಣೆ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್‌ಗೆ ಪತ್ರದ ಮೂಲಕ ಮನವಿ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್ ನಾರಾಯಣ ಮನವಿ ಮಾಡಿದ್ದರು. ಈ ಸಂಬಂಧ ಆರ್. ಅಶೋಕ್ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ನಿನ್ನೆ ನೇರವಾಗಿ ಭೇಟಿಯಾಗಿ ಆರ್.ಅಶೋಕ್‌ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ಅಶ್ವತ್ಥ್ ನಾರಾಯಣ ಮನವಿಯನ್ನು ಅಶೋಕ್ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
ಮಾಗಡಿ ತಹಶೀಲ್ದಾರ್‌ರನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಅದರಲ್ಲಿ ಬೇರೆ ವಿಚಾರವಿದೆ, ಸ್ವಾಮೀಜಿ ವಿಚಾರ ಇದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಯಾಕೆ ಮಾಡಲ್ಲ, ಯಾರನ್ನಾದರೂ ಹಾಕಿ, ಒಳ್ಳೆಯವರನ್ನು ಹಾಕಿ. ಭ್ರಷ್ಟಾಚಾರ ಮಾಡುವವರನ್ನು ಹಾಕಬೇಡಿ ಎಂದು ಡಾ.ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ವರ್ಗಾವಣೆ ಮಾಡೋದು ಬೇಡ ಎಂದು ಹೇಳಿದವರು ಯಾರು? ಎಂದು ಏರುಧ್ವನಿಯಲ್ಲಿ ಆರ್. ಅಶೋಕ್‌ಗೆ ಅಶ್ವತ್ಥ್ ನಾರಾಯಣ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಆರ್. ಅಶೋಕ್, ಡಾ. ಅಶ್ವತ್ಥ್ ನಡುವೆ ಶೀತಲ ಸಮರ ವಿಚಾರವಾಗಿ ಬೆಂಗಳೂರಿನಲ್ಲಿ ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಆರ್.ಅಶೋಕ್ ಜೊತೆ ಜಸ್ಟ್ ಮಾತುಕತೆ ನಡೆದಿದೆ. ರಾಮನಗರ, ಮಾಗಡಿಯಲ್ಲಿ ಪೋಸ್ಟಿಂಗ್ ಬಗ್ಗೆ ಕೋರಿಕೆ ಇದೆ. ಸಚಿವ ಆರ್. ಅಶೋಕ್ ಕೋರಿಕೆಯನ್ನ ಪರಿಗಣಿಸುತ್ತೇನೆ ಅಂದ್ರು. ನನ್ನ, ಸಚಿವ ಆರ್.ಅಶೋಕ್ ನಡುವೆ ಗೊಂದಲ ಇಲ್ಲ. ನಮಗೆ ಕೆಲ ಬದಲಾವಣೆಗಳು ಆಗಬೇಕೆಂಬ ಆಸೆ ಇರುತ್ತೆ . ಆಸೆ, ಒತ್ತಾಯವನ್ನ ಸಂಬಂಧಪಟ್ಟ ಸಚಿವರಿಗೆ ತಿಳಿಸ್ತ್ತೇವೆ . ಅವರು ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಕ್ರಿಯೆ ನೀಡುತ್ತಾರೆ. ನಮ್ಮ ಒತ್ತಾಯವನ್ನ ಪರಿಗಣಿಸುವುದು ಅವರಿಗೆ ಬಿಟ್ಟಿದ್ದು. ನಾವೆಲ್ಲರೂ ರಾಜಕೀಯಕ್ಕೆ ಬಂದಿರುವುದು ಜನರಿಗಾಗಿ. ಒಟ್ಟಿಗೆ ಕೆಲಸ ಮಾಡಬೇಕು, ಒಗ್ಗಟ್ಟಿನಿಂದ ಇರಬೇಕು ಎಂದು ಡಾ.ಅಶ್ವತ್ಥ್ ಹೇಳಿಕೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ; ಮಹತ್ವದ ವಿಚಾರಗಳ ಚರ್ಚೆ ಸಾಧ್ಯತೆ
ಇತ್ತ ಇಂದು (ಮಾರ್ಚ್ 18) ಸಿಎಂ ಬಸವರಾಜ ಬೊಮ್ಮಾಯಿ ಸರ್ವಪಕ್ಷಗಳ ಸಭೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಮಹತ್ವದ ಸರ್ವಪಕ್ಷ ಸಭೆ ನಡೆಯಲಿದೆ. ಸಿಎಂ, ವಿಪಕ್ಷ ನಾಯಕ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ನ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ. ಅಂತರ್ ರಾಜ್ಯ ಜಲ ವಿವಾದಗಳ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ ಎಂದು ಮಾಹಿತಿ ಲಭಿಸಿದೆ.
ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವ ಕುರಿತು ಮಹತ್ವದ ನಿರ್ಣಯ ಸಾಧ್ಯತೆ ಇದೆ. ಅದಷ್ಟು ಬೇಗ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳುವಂತೆ ಸರ್ಕಾರಕ್ಕೆ ಕಾಂಗ್ರೆಸ್, ಜೆಡಿಎಸ್ ನಾಯಕರು ಒತ್ತಾಯ ಮಾಡಲಿದ್ದಾರೆ. ಯೋಜನೆಗೆ ಇರುವಂಥ ಕಾನೂನು ತೊಡಕುಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಸಭೆಯಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಲಗಿ ಕೂಡ ಭಾಗಿ ಆಗಲಿದ್ದಾರೆ. ಮುಖ್ಯವಾಗಿ ಪರ್ಮಿಷನ್ ಬೇಕಾಗಿರೋದು ಪರಿಸರ ಇಲಾಖೆಯಿಂದ, ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಕೇಂದ್ರಕ್ಕೆ ಆಲ್ ಪಾರ್ಟಿ ಸದಸ್ಯರ ನಿಯೋಗ ಕರೆದೊಯ್ಯಬೇಕು ಎಂದು ವಿಪಕ್ಷ ನಾಯಕರು ಒತ್ತಾಯಸಲಿದ್ದಾರೆ.
ಇದೇ ವೇಳೆ ಮಹದಾಯಿ ಯೋಜನೆ ಬಗ್ಗೆಯೂ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒತ್ತಾಯಿಸಲಿದ್ದಾರೆ. ಗೋವಾ ಸೇರಿದಂತೆ ತ್ರಿಬಲ್ ಇಂಜಿನ್ ಸರ್ಕಾರ ಇದೆ. ಅಲ್ಲಿರುವ ಕಾನೂನು ತೊಡಕುಗಳ ಬಗ್ಗೆ ಚರ್ಚೆ ನಡೆಯಲಿದೆ. ಕೇಂದ್ರ, ರಾಜ್ಯ, ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದೆ. ಯೋಜನೆಗಿರುವ ತೊಡಕುಗಳನ್ನು ಶೀಘ್ರವೇ ಬಗೆಹರಿಸಬೇಕು ಅಂತಾ ಒತ್ತಾಯ ಕೇಳಿಬರಲಿದೆ. ಸಭೆಯಲ್ಲಿ ಫ್ಲೋರ್ ಲೀಡರ್ಸ್ ಭಾಗಿಯಾಗಿ ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Holi 2022: ‘ಹೋಳಿ ಪರಿಸರ ಸ್ನೇಹಿಯಾಗಿರಲಿ’; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಾಶಯ
Published On - 11:23 am, Fri, 18 March 22