Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಬೆಂಗಳೂರಿನಲ್ಲಿ ಆರ್​ಸಿಬಿ ಮೊದಲ ಪಂದ್ಯ; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಖಾಕಿ ಭದ್ರತೆ

ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ವರ್ಸಸ್ ಪಂಜಾಬ್ ಹಣಾಹಣಿ ನಡೆಯಲಿದೆ. ಹೀಗಾಗಿ ಎಲ್ಲಾ ರೀತಿಯ ತಯಾರಿ ನಡೆದಿದೆ. ಇತ್ತೀಚೆಗೆ ರಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಘಟನೆ ನಡೆದಿರುವ ಹಿನ್ನೆಲೆ ಪೊಲೀಸರು ಹೆಚ್ಚಿನ ಭದ್ರತೆ ನೀಡುತ್ತಿದ್ದು ಚಿನ್ನಸ್ವಾಮಿ ಮೈದಾನದ ಸುತ್ತ ಹದ್ದಿನ ಕಣ್ಣಿಟ್ಟಿದ್ದಾರೆ.

ಇಂದು ಬೆಂಗಳೂರಿನಲ್ಲಿ ಆರ್​ಸಿಬಿ ಮೊದಲ ಪಂದ್ಯ; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಖಾಕಿ ಭದ್ರತೆ
ಚಿನ್ನಸ್ವಾಮಿ ಸ್ಟೇಡಿಯಂ
Follow us
Jagadisha B
| Updated By: ಆಯೇಷಾ ಬಾನು

Updated on: Mar 25, 2024 | 10:57 AM

ಬೆಂಗಳೂರು, ಮಾರ್ಚ್​.25: ಈ ಬಾರಿಯ ಐಪಿಎಲ್​ನ (IPL) ಉದ್ಘಾಟನ ಪಂದ್ಯದಲ್ಲಿ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಗೆಲುವಿನ ಇರಾದೆಯೊಂದಿಗೆ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಆರ್​ಸಿಬಿ ವರ್ಸಸ್ ಪಂಜಾಬ್ ಹಣಾಹಣಿ ನಡೆಯಲಿದೆ. ಆರ್​ಸಿಬಿಗೆ ಇದು ಮೊದಲ ತವರಿನ ಪಂದ್ಯವಾಗಿದ್ದು, ಆರ್​ಸಿಬಿ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ ಇಂದು ಬೆಂಗಳೂರಿನಲ್ಲಿ ಪಂದ್ಯ ಹಿನ್ನೆಲೆ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಭಾರೀ ಬಂದೋಬಸ್ತ್

ಇಂದಿನಿಂದ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯಾವಳಿ ಶುರುವಾಗಲಿದೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬೆನ್ನಲ್ಲೆ ಖಾಕಿ ಅಲರ್ಟ್ ಆಗಿದ್ದು ಕಳೆದ ಒಂದು ವಾರದಿಂದಲೇ ಸ್ಟೇಡಿಯಂ ಇಂಚಿಂಚೂ ತಪಾಸಣೆ ನಡೆಸಿದ್ದಾರೆ. ಬಂದೋಬಸ್ತ್​ಗಾಗಿ ಒಂದು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರತಿ ಭಾರಿಗಿಂತ ಈ ಭಾರಿ ದುಪ್ಪಟ್ಟು ಭದ್ರತೆ ಕಲ್ಪಿಸಲಾಗಿದೆ.

ಇದನ್ನೂ ಓದಿ: IPL 2024: ಪಂಜಾಬ್ ವಿರುದ್ಧ ತಂಡ ಬದಲಿಸುತ್ತಾ ಆರ್​ಸಿಬಿ?

ಸಾರ್ವಜನಿಕರ ತಪಾಸಣೆಗಾಗಿ 300 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಸ್ಟೇಡಿಯಂಗೆ ಬರುವ ಪ್ರತಿಯೊಬ್ಬರನ್ನ ತಪಾಸಣೆ ನಡೆಸಿ ಒಳ ಬಿಡಲಾಗುತ್ತೆ. ಈಗಾಗಲೇ ಬಿಡಿಟಿಎಸ್ ಟೀಂನಿಂದ ಸಂಪೂರ್ಣ ಪರಿಶೀಲನೆ ನಡೆದಿದೆ. ಬಂದೋಬಸ್ತ್ ಗಾಗಿ ಡಿ ಸ್ವಾಟ್, ಸಿ ಸ್ವಾಟ್ ಟೀಂ ನಿಯೋಜನೆ ಮಾಡಲಾಗಿದೆ. ಹಾಗೂ ಮೊಬೈಲ್ ಕಮಾಂಡ್ ಸೆಂಟರ್ ವೆಹಿಕಲ್, ನಾಲ್ಕು ಕೆಎಸ್ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಅಗತ್ಯ ಬಿದ್ದಲ್ಲಿ ಡ್ರೋಣ್ ಮೂಲಕವೂ ಹದ್ದಿನ ಕಣ್ಣಿಡಲು ಪೊಲೀಸ್ ಪಡೆ ಸಜ್ಜಾಗಿದೆ.

ಅಲ್ಲದೇ ಸ್ಟೇಡಿಯಂನ ನಾಲ್ಕು ಕಡೆ ವಾಚ್ ಟವರ್ ನಿರ್ಮಾಣ ಮಾಡಲಾಗಿದೆ. ವಾಚ್ ಟವರ್​ಗಳ ಮೂಲಕ ಸ್ಟೇಡಿಯಂನಲ್ಲಿ ನಿಗಾ ಇಡಲಾಗುತ್ತೆ. ಬ್ಯಾಗ್, ವಾಟರ್ ಬಾಟಲ್ ಸೇರಿ ಯಾವುದೇ ರೀತಿಯ ವಸ್ತುಗಳನ್ನ ಕೊಂಡೊಯ್ಯುವಂತಿಲ್ಲ‌. ಪಂದ್ಯ ವೀಕ್ಷಣೆಗೆ ಬರುವ ಸಾರ್ವಜನಿಕರು ಸಂಜೆ 5 ಗಂಟೆಗೆ ಬರಬೇಕು. ಐದು ಗಂಟೆಯಿಂದಲೇ ಸ್ಟೇಡಿಯಂ ಒಳಗೆ ಬಿಡಲಾಗುತ್ತೆ. ಬಾಂಬ್ ಬ್ಲಾಸ್ಟ್ ಬಳಿಕ ನಗರದಲ್ಲಿ ನಡೆಯುತ್ತಿರುವ ಮೊದಲ ಮ್ಯಾಚ್ ಇದಾಗಿರುವುದರಿಂದ ಹೆಚ್ಚಿನ ಭದ್ರತೆ ಕಲ್ಪಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಈಗಾಗಲೇ ಪೊಲೀಸರು ಬಂದೋಬಸ್ತ್ ರಿಹರ್ಸಲ್ ನಡೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ