ಬೆಂಗಳೂರಿನ ಕಾಲುವೆಗಳ ಅಕ್ಕ-ಪಕ್ಕದಲ್ಲಿ ರಸ್ತೆ ನಿರ್ಮಾಣ: ಡಿಕೆ ಶಿವಕುಮಾರ್
ಬೆಂಗಳೂರಿನ ಕಾಲುವೆಗಳ ಅಕ್ಕ-ಪಕ್ಕದಲ್ಲಿ ರಸ್ತೆ ನಿರ್ಮಾಣ ಮಾಡುತ್ತೇವೆ. ಈ ರಸ್ತೆಯಲ್ಲಿ ಸರ್ಕಾರಿ, ಖಾಸಗಿ ಬಸ್ಗಳಿಗೆ ಅವಕಾಶ ಇಲ್ಲ. ಕೇವಲ ಸ್ಥಳೀಯ ವಾಹನಗಳು ಮತ್ತು ಶಾಲಾ ಬಸ್ಗಳಿಗೆ ಮಾತ್ರ ಅವಕಾಶ ಕೊಡುತ್ತೇವೆ ಎಂದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು, ಸೆಪ್ಟೆಂಬರ್ 02: ಬೆಂಗಳೂರು (Bengaluru) ನಗರದ ಕಾಲುವೆಗಳ ಅಕ್ಕ-ಪಕ್ಕದಲ್ಲಿ 30-40 ಅಡಿ ರಸ್ತೆ ನಿರ್ಮಾಣ ಮಾಡುತ್ತೇವೆ. ಒಟ್ಟು 300 ಕಿ.ಮಿ ರಸ್ತೆ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದೇವೆ. ಮೊದಲ ಹಂತದಲ್ಲಿ 100 ಕಿ.ಮೀ ನಿರ್ಮಾಣ ಮಾಡುತ್ತೇವೆ. 200 ಕೋಟಿ ರೂ. ಹಣವನ್ನು ಮೀಸಲು ಇಟ್ಟಿದ್ದೇವೆ. ರಸ್ತೆ ನಿರ್ಮಾಣಕ್ಕೆ ಯಾರು ಜಾಗ ಬಿಟ್ಟು ಕೊಡುತ್ತಾರೆ ಅವರಿಗೆ ಪರಿಹಾರ ಕೊಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವಿರೋಧ ಪಕ್ಷದ ಶಾಸಕರ ಜೊತೆಗೆ ಚರ್ಚೆ ಮಾಡಿದ್ದೇವೆ. ಈ ರಸ್ತೆಯಲ್ಲಿ ಸರ್ಕಾರಿ, ಖಾಸಗಿ ಬಸ್ಗಳಿಗೆ ಅವಕಾಶ ಇಲ್ಲ. ಸ್ಥಳೀಯ ವಾಹನಗಳಿಗೆ ಮತ್ತು ಶಾಲಾ ಬಸ್ಗಳಿಗೆ ಮಾತ್ರ ಅವಕಾಶ ಕೊಡುತ್ತೇವೆ ಎಂದು ತಿಳಿಸಿದರು.
ಮಹಾತ್ಮ ಗಾಂಧಿ ನೆನಪಿನಲ್ಲಿ ಸ್ವಚ್ಚತೆ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ರಾಜ್ಯದ ಸಾವಿರ ಶಾಲಾ-ಕಾಲೇಜುಗಳಲ್ಲಿ ಸ್ವಚ್ಚತೆ ಬಗ್ಗೆ ಆನ್ ಲೈನ್ ಜಾಗೃತಿ ಮೂಡಿಸಲು ತೀರ್ಮಾನ ಮಾಡಿದ್ದೇವೆ. ಮಕ್ಕಳಿಗೆ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿ, ಅವರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿರುವುದು ಫೋಟೊ ತೆಗೆದು ಕಳಿಸುವುದು. ಹೀಗೆ ಅವರಿಗೆ ಅರಿವು ಮೂಡಿಸಲು ಚಿಂತನೆ ಮಾಡಿದ್ದೇವೆ. ಅಕ್ಟೋಬರ್ 2ರ ಗಾಂಧಿ ಜಯಂತಿ ದಿನ ಚಾಲನೆ ನೀಡುತ್ತೇವೆ ಎಂದರು.
ಬೆಂಗಳೂರು ನಗರದಲ್ಲಿ 2795 ರಸ್ತೆ ಗುಂಡಿಗಳನ್ನ ಗುರುತಿಸಿದ್ದೇವೆ. 15 ದಿನಗಳಲ್ಲಿ ರಸ್ತೆ ಗುಂಡಿ ಮುಚ್ಚಲು ಡೆಡ್ಲೈನ್ ಕೊಟ್ಟಿದ್ದೇವೆ. ಮುಖ್ಯ ರಸ್ತೆಗಳಿಗೆ 660 ಕೋಟಿ ರೂಪಾಯಿ ವೆಚ್ಚ ಮಾಡುತ್ತೇವೆ. 15 ದಿನಗಳ ಬಳಿಕ ನಾನೇ ಬೆಂಗಳೂರು ರೌಂಡ್ಸ್ಗೆ ಹೋಗುತ್ತೇನೆ. ನನ್ನದೇ ಹಳೆಯ ಬೈಕ್ ರೆಡಿ ಮಾಡಿಸಿದ್ದೇನೆ. ಬೈಕ್ನಲ್ಲಿ ಆಯುಕ್ತರನ್ನು ಕೂರಿಸಿಕೊಂಡು ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಲಕ್ಕಿ ಬೈಕ್‌ಗೆ ಹೊಸ ರೂಪ, ಆ ದಿನಗಳನ್ನು ಮೆಲುಕು ಹಾಕಿದ ಡಿಸಿಎಂ
ಎತ್ತಿನ ಹೊಳೆ ಯೋಜನೆಯನ್ನು ಗೌರಿ ಹಬ್ಬದ ದಿನ ಶುಭ ಮುಹೂರ್ತ ಮಧ್ಯಾಹ್ನ 12:05 ನಿಮಿಷಕ್ಕೆ ಉದ್ಘಾಟನೆ ಮಾಡಲಿದ್ದೇವೆ. ಈ ಶುಭ ಕಾರ್ಯಕ್ಕೆ ಪಕ್ಷಾತೀತವಾಗಿ ಭಾಗಿಯಾಗಬೇಕು. ರೈತರು, ಸಾರ್ವಜನಿಕರು ಭಾಗಿಯಾಗಿ. ಆಮಂತ್ರಣ ಬಂದಿಲ್ಲ ಅಂತ ಮನೆಯಲ್ಲಿ ಯಾರೂ ಇರಬಾರದು. ಸರ್ಕಾರದಿಂದ ಆಹ್ವಾನ ನೀಡುತ್ತಿದ್ದೆನೆ ಎಂದು ಆಹ್ವಾನಿಸಿದರು.
ಸಿಎಂ ಆಗುವ ಆಕಾಂಕ್ಷೆ ವ್ಯಕ್ತಪಡಿಸಿದ ಶಾಸಕ ಆರ್ವಿ ದೇಶಪಾಂಡೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಆರ್ವಿ ದೇಶಪಾಂಡೆ ಹಿರಿಯರು, ಆಸೆ ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ. ಅದರೆ ಮಾಧ್ಯಮಗಳಿಗೆ ಹೇಳಿಕೆ ಕೊಡುವುದು ಸರಿಯಲ್ಲ. ದೇಶಪಾಂಡೆ ಅವರಿಗೆ ಏನು ಗೌರವ ಕೊಡಬೇಕೋ ಕೊಡುತ್ತೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ