AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ ದೋಖಾ! ‘ಕ್ರಿಸ್ಟಲ್ ಎಐ’ ಕಂಪನಿಯ ಎಂ.ಡಿ ರಾಜೇಶ್ ಕಾಮತ್ ಪೊಲೀಸರ ವಶಕ್ಕೆ

ಬೆಂಗಳೂರಿನಲ್ಲಿ ಕ್ರಿಸ್ಟಲ್ AI ಸಂಸ್ಥೆಯು ರೋಬೋಟ್ ಟ್ರೇಡಿಂಗ್ ಹೆಸರಿನಲ್ಲಿ ನೂರಾರು ಹೂಡಿಕೆದಾರರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. 'ಹಣ ಡಬಲ್' ಮಾಡುವ ಆಮಿಷವೊಡ್ಡಿ ಮೋಸ ಮಾಡಿದ್ದಾರೆ ಎಂಬ ಆರೋಪದಡಿ ಸಂಸ್ಥೆಯ MD ರಾಜೇಶ್ ಕಾಮತ್ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವಂಚನೆಯ ಜಾಲ ದುಬೈಗೂ ವಿಸ್ತರಿಸಿದ್ದು, ಸೈಬರ್ ಕ್ರೈಮ್ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.

ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ ದೋಖಾ! 'ಕ್ರಿಸ್ಟಲ್ ಎಐ' ಕಂಪನಿಯ ಎಂ.ಡಿ ರಾಜೇಶ್ ಕಾಮತ್ ಪೊಲೀಸರ ವಶಕ್ಕೆ
ಕ್ರಿಸ್ಟಲ್ ಎಐ ಕಂಪನಿಯ ಎಂ.ಡಿ ರಾಜೇಶ್ ಕಾಮತ್
Shivaprasad B
| Edited By: |

Updated on: Apr 18, 2026 | 8:54 AM

Share

ಬೆಂಗಳೂರು, ಏಪ್ರಿಲ್ 18: ನಗರದಲ್ಲಿ ಟ್ರೇಡಿಂಗ್ (Trading) ಕಂಪನಿ ಹೆಸರಿನಲ್ಲಿ ಭಾರೀ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಕ್ರಿಸ್ಟಲ್ ಎಐ (Crystal AI)ಎಂಬ ಸಂಸ್ಥೆಯ ಮೂಲಕ ನೂರಾರು ಹೂಡಿಕೆದಾರರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹಣ ಡಬಲ್ ಮಾಡಿಕೊಡುತ್ತೇವೆ ಅಂತಾ ಟೋಪಿ!

ಈ ಪ್ರಕರಣ ಸಂಬಂಧ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕಾಮತ್​ರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರೋಬೋಟ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಹೂಡಿಕೆ ಮಾಡಿದ ಹಣವನ್ನು ಡಬಲ್ ಮಾಡಿಕೊಡಲಾಗುತ್ತದೆ ಎಂದು ನಂಬಿಸಿ ಜನರನ್ನು ಬಲೆಗೆ ಬೀಳಿಸಿರವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಕಮಿಷನರ್ ಕಚೇರಿಯಲ್ಲಿ ಸಿಸಿಬಿ ಪೊಲೀಸರಿಂದ ವಿಚಾರಣೆ ನಡೆಯುತ್ತಿದ್ದು, 5 ರಿಂದ 6 ಕೋಟಿಗೂ ಅಧಿಕ ಹಣ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ನಿಜವಾಗಿಯೂ ವಂಚಿಸಿರುವ ಮೊತ್ತ ನೂರಾರು ಕೋಟಿಗಳಿಗೆ ತಲುಪಿರುವ ಶಂಕೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ KSCA ಸದಸ್ಯನಿಂದಲೇ IPL ಬ್ಲಾಕ್ ಟಿಕೆಟ್ ದಂಧೆ! ಚಿನ್ನಸ್ವಾಮಿ ಸ್ಟೇಡಿಯಂ ಹೋಟೆಲ್ ಕ್ಯಾಪ್ಟನ್ ಜೊತೆ ಸೇರಿ ಕೃತ್ಯ

ಅಂತರರಾಷ್ಟ್ರೀಯ ಮಟ್ಟದಲ್ಲೂ ವಂಚನೆಯ ಜಾಲ

ಅಲ್ಲದೆ ಆರೋಪಿಗಳು ದುಬೈನಲ್ಲಿ ಕಚೇರಿ ತೆರೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲೂ ವಂಚನೆ ಜಾಲ ವಿಸ್ತರಿಸಿರುವ ಮಾಹಿತಿ ಲಭ್ಯವಾಗಿದ್ದು, ರಾಜೇಶ್ ಕಾಮತ್ ಸೇರಿದಂತೆ ಮೂವರು ಆರೋಪಿಗಳು ಸಂಘಟಿತ ಸಂಚು ರೂಪಿಸಿ ಹೂಡಿಕೆದಾರರನ್ನು ಮೋಸಗೊಳಿಸಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us