ಆರ್​​ಎಸ್​​ಎಸ್​ ನೋಂದಣಿ, ಸದಸ್ಯತ್ವದ ಬಗ್ಗೆ ಕೋರ್ಟ್‌ನಲ್ಲೂ ಪ್ರಿಯಾಂಕ್​​ ತಕರಾರು: ಸಚಿವರಿಗೆ ಉತ್ತರಿಸಿಯೇ ನ್ಯಾಯಾಲಯದಿಂದ ಸಮನ್ಸ್​​

Priyank Kharge: ಆರ್‌ಎಸ್‌ಎಸ್‌ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ, ಮೊಹಮ್ಮದ್ ಹ್ಯಾರಿಸ್ ನಲಪಾಡ್‌ಗೆ ಸಮನ್ಸ್ ಜಾರಿಗೂ ಮುನ್ನ ಕೋರ್ಟ್​​ ಸಚಿವರ ವಾದವನ್ನೂ ಪರಿಗಣಿಸಿದೆ. ಆರ್‌ಎಸ್‌ಎಸ್‌ ಚಟುವಟಿಕೆ ನಿರ್ಬಂಧಿಸುವ ಯತ್ನವೇ ಆರ್‌ಎಸ್‌ಎಸ್‌ ಗುರುತಿಸಬಹುದಾದ ಗುಂಪೆಂಬುದಕ್ಕೆ ನಿದರ್ಶನ. ಕೇರಳ ಹೈಕೋರ್ಟ್ RSS ಗುರುತಿಸಬಹುದಾದ ಗುಂಪೆಂದು ತೀರ್ಪು ನೀಡಿದೆ. ಹೀಗಾಗಿ RSS ಸದಸ್ಯರು ದಾಖಲಿಸಿದ ಮಾನನಷ್ಟ ಕೇಸ್ ವಿಚಾರಣೆಗೆ ಪರಿಗಣಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆರ್​​ಎಸ್​​ಎಸ್​ ನೋಂದಣಿ, ಸದಸ್ಯತ್ವದ ಬಗ್ಗೆ ಕೋರ್ಟ್‌ನಲ್ಲೂ ಪ್ರಿಯಾಂಕ್​​ ತಕರಾರು: ಸಚಿವರಿಗೆ ಉತ್ತರಿಸಿಯೇ ನ್ಯಾಯಾಲಯದಿಂದ ಸಮನ್ಸ್​​
ಪ್ರಿಯಾಂಕ್ ಖರ್ಗೆ
Image Credit source: Priyank Kharge Facebook
Edited By:

Updated on: Jul 02, 2026 | 11:47 AM

ಮುಖ್ಯಾಂಶಗಳು

  • RSS ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪ
  • ಸಚಿವ ಪ್ರಿಯಾಂಕ್​​ ಖರ್ಗೆ, ನಲಪಾಡ್‌ಗೆ ಕೋರ್ಟ್​​ ಸಮನ್ಸ್
  • ಸಮನ್ಸ್​​ಗೂ ಮುನ್ನ ಸಚಿವರ ವಾದ ಪರಿಗಣಿಸಿದ್ದ ಕೋರ್ಟ್​​

ಬೆಂಗಳೂರು, ಜುಲೈ 02: ಆರ್​​ಎಸ್​​ಎಸ್​ ನೋಂದಣಿ, ಸದಸ್ಯತ್ವದ ಬಗ್ಗೆ ಕೋರ್ಟ್‌ನಲ್ಲೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಕರಾರು ತೆಗೆದಿದ್ದು, ಪ್ರಿಯಾಂಕ್ ತಕರಾರಿಗೆ ಉತ್ತರಿಸಿಯೇ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್‌ ಸಮನ್ಸ್ ಜಾರಿಗೊಳಿಸಿದೆ. ಕೇರಳ ಹೈಕೋರ್ಟ್, ಸುಪ್ರೀಂ ತೀರ್ಪು ಪ್ರಸ್ತಾಪಿಸಿರುವ ನ್ಯಾಯಾಲಯಜಡ್ಜ್ ಸಂದೀಪ್ ಪಾಟೀಲ್, ಸಂಘಟನೆಯು ನೋಂದಣಿಯಾಗಿದ್ದರೆ ಮಾತ್ರವೇ ದೂರು ದಾಖಲಿಸಬೇಕೆಂದಿಲ್ಲ. ಗುರುತಿಸಬಹುದಾದ ಗುಂಪಿಗೆ ಸೇರಿದವರಾಗಿದ್ದರೂ ದೂರು ದಾಖಲಿಸಬಹುದು ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್​​ ತೀರ್ಪು ಉಲ್ಲೇಖ

ಆರ್‌ಎಸ್‌ಎಸ್‌ ಚಟುವಟಿಕೆ ನಿರ್ಬಂಧಿಸುವ ಯತ್ನವೇ ಆರ್‌ಎಸ್‌ಎಸ್‌ ಗುರುತಿಸಬಹುದಾದ ಗುಂಪೆಂಬುದಕ್ಕೆ ನಿದರ್ಶನ. ಕೇರಳ ಹೈಕೋರ್ಟ್ RSS ಗುರುತಿಸಬಹುದಾದ ಗುಂಪೆಂದು ತೀರ್ಪು ನೀಡಿದೆ. ಇಂತಹ ಗುಂಪಿಗೆ ಸೇರಿದ ಯಾವುದೇ ವ್ಯಕ್ತಿ ದೂರನ್ನು ದಾಖಲಿಸಬಹುದು. ಸುಪ್ರೀಂಕೋರ್ಟ್ ಕೂಡ RSS ಗುರುತಿಸಬಹುದಾದ ಗುಂಪೆಂದು ತೀರ್ಪು ನೀಡಿದೆ. ಬಿಎನ್ಎಸ್ ಸೆಕ್ಷನ್‌ 2(26)ರಡಿ ನೋಂದಾಯಿತವಾಗದ ವ್ಯಕ್ತಿಗಳ ಗುಂಪಿಗೂ ಮಾನ್ಯತೆ ನೀಡಲಾಗಿದೆ. ಆರೋಪಿಗಳ ಪೋಸ್ಟ್‌ನಲ್ಲಿ RSS ಸ್ವಯಂಸೇವಕರೆಂದು ಉಲ್ಲೇಖಿಸಿದ್ದಾರೆ. ಹೀಗಾಗಿ RSS ಸದಸ್ಯರು ದಾಖಲಿಸಿದ ಮಾನನಷ್ಟ ಕೇಸ್ ವಿಚಾರಣೆಗೆ ಪರಿಗಣಿಸಬಹುದು ಎಂದು ನ್ಯಾಯಾಧೀಶರಾದ ಸಂದೀಪ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್; ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್ ಸಮನ್ಸ್

ಪ್ರಿಯಾಂಕ್ ವಾದವೂ ಪರಿಗಣನೆ

ಆರ್‌ಎಸ್‌ಎಸ್‌ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ, ಮೊಹಮ್ಮದ್ ಹ್ಯಾರಿಸ್ ನಲಪಾಡ್‌ಗೆ ಕೋರ್ಟ್​​ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿಗೆ ಆದೇಶಕ್ಕೂ ಮುನ್ನ ಪ್ರಿಯಾಂಕ್ ವಾದವನ್ನೂ ಕೋರ್ಟ್​​ ಪರಿಗಣಿಸಿತ್ತು. ಅವಹೇಳನಕಾರಿ ಹೇಳಿಕೆಯಿಂದ ಸಂಘದ ಘನತೆಗೆ ಧಕ್ಕೆಯಾಗಿದೆ ಎಂದು ಬೆಂಗಳೂರಿನ ಸಿದ್ದಾಪುರದ ಎ.ತೇಜಸ್ ಎಂಬವರು ಖಾಸಗಿ ದೂರು ದಾಖಲಿಸಿದ್ದರು. 2025ರ ಅಕ್ಟೋಬರ್ 14ರಂದು ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಸದಸ್ಯರ ವಿರುದ್ಧ ಟ್ವೀಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಇದೇ ರೀತಿ, ಮೊಹಮ್ಮದ್ ನಲಪಾಡ್​ ಕೂಡ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ದೂರಲ್ಲಿ ಆರೋಪಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 10:26 am, Thu, 2 July 26

Follow Us