ಶಾಕಿಂಗ್! ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್ ಬಳಸುತ್ತಿರುವುದು ದೃಢ

ರಾಜ್ಯ-ರಾಜಧಾನಿಯಲ್ಲಿ‌ ದಿನದಿಂದ‌‌ ದಿನಕ್ಕೆ ಆಹಾರ ಪದಾರ್ಥಗಳಲ್ಲಿ‌ ಕಲಬೆರಕೆ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದ್ದು, ಇದೀಗ ಅದರ ಸಾಲಿಗೆ ಬೆಲ್ಲವು ಸೇರಿಕೊಂಡಿದೆ. ಇನ್ಮುಂದೆ ಬೆಲ್ಲವನ್ನ ಬಳಕೆ ಮಾಡುವವರು ಒಂದು ಬಾರಿ ಯೋಚನೆ ಮಾಡಬೇಕಾದ ಅನಿವಾರ್ಯತೆ ಶುರುವಾಗಿದೆ. ಆ ಕುರಿತು ಒಂದು ಸ್ಟೋರಿ ಇಲ್ಲಿದೆ.

ಶಾಕಿಂಗ್! ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್ ಬಳಸುತ್ತಿರುವುದು ದೃಢ
ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್ ಬಳಸುತ್ತಿರುವುದು ದೃಢ
Follow us
Poornima Agali Nagaraj
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 24, 2024 | 10:48 PM

ಬೆಂಗಳೂರು, ಸೆ.24: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ‌ ಆಹಾರ ಪದಾರ್ಥಗಳಲ್ಲಿ‌ ಕೆಮಿಕಲ್ ಬಣ್ಣ(Chemical color) ಬಳಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದ್ದು, ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ಒಳ್ಳೆಯದಾ, ಇಲ್ಲವಾ ಎನ್ನುವ ಬಗ್ಗೆ ಅನುಮಾನ ಶುರುವಾಗಿದೆ. ಹೌದು, ಇಷ್ಟು ದಿನ ಪಾನಿಪುರಿ, ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್ ಹಾಗೂ ಕಾಫಿಪುಡಿಯಲ್ಲಿ ಕೆಮಿಕಲ್ ಬಳಸುತ್ತಿರುವುದು ಧೃಡವಾಗಿತ್ತು. ಈ ಕುರಿತಾಗಿ ಆಹಾರ ಗುಣಮಟ್ಟ ಇಲಾಖೆ ಅಗತ್ಯ ಕ್ರಮಗಳನ್ನ ಕೂಡ ತೆಗೆದುಕೊಂಡಿದೆ.‌ ಇದರ ಬೆನ್ನಲ್ಲೇ ಇದೀಗ ಬೆಲ್ಲದಲ್ಲಿಯೂ ಕೂಡ ಕಲಬೆರಕೆ ಬಣ್ಣ ಬಳಸಿರುವುದು ದೃಢವಾಗಿದೆ.

ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್ ಬಳಸುತ್ತಿರುವುದು ದೃಢ

ಹೌದು, ಸಧ್ಯ ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ಮಾಡಿದ್ದು ಖಚಿತವಾಗಿದ್ದು, ಇದರ ಬೆನ್ನಲ್ಲೇ ಬೆಲ್ಲದಲ್ಲಿಯೂ ಕಲಬೆರಕೆಯ ಕೃತಕ ಬಣ್ಣ ಬಳಕೆ ಮಾಡಿರುವುದು ದೃಢವಾಗಿವಾಗಿದೆ. ಕೆಲ ದಿನಗಳ ಹಿಂದೆ ಆಹಾರ ಹಾಗೂ ಗುಣಮಟ್ಟ ಇಲಾಖೆ ವಿವಿಧ ಬೆಲ್ಲವನ್ನ ಸಂಗ್ರಹಿಸಿ ಬೆಲ್ಲವನ್ನ ಲ್ಯಾಬ್ ರಿಪೋರ್ಟ್​ಗೆ ಕಳುಹಿಸಲಾಗಿತ್ತು. ಈ ವೇಳೆ ಬೆಲ್ಲದಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದು ಪತ್ತೆಯಾಗಿದೆ. ಇನ್ನು ಸದರಿ ಬೆಲ್ಲವನ್ನ ಉಪಯೋಗಿಸಿದರೆ ಆರೋಗ್ಯದ ಮೇಲೆ ಮಾರಕ ಪರಿಣಾಮಗಳು ಉಂಟಾಗಲಿದೆಯಂತೆ.‌

ಇದನ್ನೂ ಓದಿ:ಕೃತಕ ಬಣ್ಣ, ರಾಸಾಯನಿಕ ಬಳಸುವ ಹೋಟೆಲ್​ಗಳಿಗೆ ಕಾದಿದೆ ಸಂಕಷ್ಟ: ಆಹಾರ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ

ಬೆಲ್ಲವನ್ನ ಬಳಸುವಾಗ ಪರಿಶೀಲಿಸಿ ಬಳಸಲು ಸೂಚನೆ

ದೇವಸ್ಥಾನಗಳಲ್ಲಿ ಹೆಚ್ಚಾಗಿ ಪ್ರಸಾದಕ್ಕೆ ಬೆಲ್ಲ ಬಳಕೆಯಾಗಲಿದ್ದು, ಹೀಗಾಗಿ ಬೆಲ್ಲವನ್ನ ಬಳಸುವಾಗ ಪರಿಶೀಲಿಸಿ ಬಳಸಲು ಮುಜರಾಯಿ ಇಲಾಖೆ ಧಾರ್ಮಿಕ ಹಾಗೂ ದತ್ತಿ ಇಲಾಖೆ ಆಯುಕ್ತರಿಗೆ ಆಹಾರ ಸುರಕ್ಷತೆ ಆಯುಕ್ತರು ಪತ್ರ ಬರೆದಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಸಾರ್ವಜನಿಕರು, ‘ಬೆಲ್ಲದಲ್ಲಿ ಕಲಬೆರಕೆಯ ಬಣ್ಣ ಬಳಸಿದ್ದಾರೆ ಎಂದು ಹೇಳುತ್ತಿದ್ದಾರೆ.‌ ಬೆಲ್ಲವನ್ನ ಸಿಹಿ ಅಡುಗೆಗಳಿಗೆ ಹೆಚ್ಚಾಗಿ ಬಳಸುತ್ತೇವೆ. ಆದ್ರೆ, ಇದರಲ್ಲೂ ಬಣ್ಣ ಬಳಕೆ ಮಾಡಿದರೆ ಹೇಗೆ ಬಳಸೋದು.‌ ಈ ಕುರಿತಾಗಿ ಸರ್ಕಾರ ಹಾಗೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ, ದಿನದಿಂದ ದಿನಕ್ಕೆ ಕಲಬೆರಕೆಯ ಹಾವಳಿ ಹೆಚ್ಚಾಗುತ್ತಿದ್ದು, ಆರೋಗ್ಯದ ದೃಷ್ಟಿಯಿಂದ ಆಹಾರ ಮತ್ತು ಗುಣಮಟ್ಟ ಇಲಾಖೆ‌ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ