
ಬೆಂಗಳೂರು, ನವೆಂಬರ್ 25: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕೇಸ್ ಸಂಬಂಧ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಕೇಳಿದ್ದ ಮೊಬೈಲ್ನ ಕೊನೆಗೂ ತನಿಖಾಧಿಕಾರಿ ಎಸಿಪಿ ರವಿಗೆ ಕೃಪಾ ಆಳ್ವಾ ನೀಡಿದ್ದು, ಅದನ್ನು ಸೀಜ್ ಮಾಡಿ ಪರಿಶೀಲನೆ ನಡೆಸಲಾಗ್ತಿದೆ. ಸ್ಟಿಂಗ್ ವಿಡಿಯೋ ರೆಕಾರ್ಡ್ ಆಗಿದ್ದ ವೇಳೆ ಈ ಮೊಬೈಲ್ ಬಳಕೆಯಾಗಿತ್ತು ಎನ್ನಲಾಗಿದೆ. ಈ ಹಿಂದೆ ವಿಚಾರಣೆ ಸಂದರ್ಭವೇ ಮೊಬೈಲ್ ಹಸ್ತಾಂತರಿಸುವಂತೆ ಪೊಲೀಸರು ಕೃಪಾ ಆಳ್ವಾಗೆ ಖಡಕ್ ಸೂಚನೆ ನೀಡಿದ್ದರು.
ಮೊಬೈಲ್, ಧ್ವನಿ ಮಾದರಿ ಎಫ್‌ಎಸ್‌ಎಲ್‌ಗೆ
ಇನ್ನು ಕೃಪಾ ಆಳ್ವಾ ನೀಡಿರುವ ಮೊಬೈಲ್ನಲ್ಲಿ ಸಾಕಷ್ಟು ಪೈಲ್ಸ್ ಡಿಲೀಟ್ ಆಗಿರೋ ಅನುಮಾನ ಹಿನ್ನಲೆ ಅದನ್ನು ಎಫ್‌ಎಸ್‌ಎಲ್‌ಗೆ ರವಾನಿಸಲು ಸೈಬರ್ ಕ್ರೈಂ ಪೊಲೀಸರು ಮುಂದಾಗಿದ್ದಾರೆ. ಪ್ರಕರಣದ ತನಿಖೆ ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದ ಕೃಪಾ ಮೊಬೈಲ್ ಕೊಡಲು ಹಿಂದೇಟು ಹಾಕಿದ್ದರು. ಇನ್ನು ಮತ್ತೊಂದೆಡೆ ಕೃಪಾ ಆಳ್ವಾ ಧ್ವನಿ ಮಾದರಿಯನ್ನೂ ಪೊಲೀಸರು ಪಡೆದಿದ್ದು, ವಿಡಿಯೋದಲ್ಲಿದ್ದ ಕೃಪಾ ಧ್ವನಿಗೆ ಅದನ್ನು ಮ್ಯಾಚ್ ಮಾಡಲು ತಯಾರಿ ನಡೆಸಿದ್ದಾರೆ. ಆ ಕಾರಣಕ್ಕೆ ಧ್ವನಿ ಮಾದರಿಯನ್ನೂ ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ, ಸಿಸಿಬಿಗೆ ಸವಾಲು
2023ರ ಫೆಬ್ರವರಿಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಮತ್ತು 2026ರ ಸೆಪ್ಟೆಂಬರ್‌ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ವಿಡಿಯೋದಲ್ಲಿ ಕೃಪಾ ಆಳ್ವಾ ಹಾಗೂ ಖಾಸಗಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಹಿಂದೆ ಇವರಿಬ್ಬರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಪಕ್ಷವಿರೋಧಿ ಚಟುವಟಿಕೆ ಮತ್ತು ಈ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕೃಪಾ ಆಳ್ವಾರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿತ್ತು. ಆದರೆ ವಿಚಾರಣೆ ವೇಳೆ ತಾವು ನಿರಪರಾಧಿ ಎಂದು ಹೇಳಿಕೊಂಡಿರುವ ಕೃಪಾ ಆಳ್ವಾ, ಸ್ಟಿಂಗ್ ವಿಡಿಯೋ ವಿಚಾರವಾಗಿ ರಾಕೇಶ್ ಶೆಟ್ಟಿ ತಮ್ಮನ್ನು ಸಂಪರ್ಕಿಸಿದ್ದರು ಎಂದಿದ್ದರು. ಪ್ರಕರಣ ಸಂಬಂಧ ಕೃಪಾ ಆಳ್ವಾ ಅದಾಗಲೇ ಮೂರು ಬಾರಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.