ಬೆಂಗಳೂರಿನಲ್ಲಿ ತಮಿಳುನಾಡು ಸಾರಿಗೆ ಬಸ್​ಗಳ ಮೇಲೆ ಕಲ್ಲು ತೂರಾಟ; ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ

Stone Pelting on Tamil Nadu Buses: ಸೆ.11ರ ಮಧ್ಯರಾತ್ರಿ ಸ್ಯಾಟ್​ಲೈಟ್ ಸಮೀಪ‌ದ ಭಾರತ್ ಪೆಟ್ರೋಲ್ ಬಂಕ್ ಬಳಿ ತಮಿಳುನಾಡಿಗೆ ಸೇರಿದ 4 ಬಸ್​ಗಳ​ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಘಟನೆ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರಿನಲ್ಲಿ ತಮಿಳುನಾಡು ಸಾರಿಗೆ ಬಸ್​ಗಳ ಮೇಲೆ ಕಲ್ಲು ತೂರಾಟ; ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ
ತಮಿಳುನಾಡು ಸಾರಿಗೆ ಬಸ್​ಗಳ ಮೇಲೆ ಕಲ್ಲು ತೂರಾಟ
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on:Sep 12, 2023 | 10:51 AM

ಬೆಂಗಳೂರು, ಸೆ.12: ಬೆಂಗಳೂರಿನ ಸ್ಯಾಟ್​ಲೈಟ್ ಸಮೀಪ‌ದ ಭಾರತ್ ಪೆಟ್ರೋಲ್ ಬಂಕ್ ಬಳಿ ತಮಿಳುನಾಡು ಸಾರಿಗೆ ಬಸ್​ಗಳ ಮೇಲೆ ಕಲ್ಲು ತೂರಾಟವಾಗಿದೆ. ಸೆ.11ರ ಮಧ್ಯರಾತ್ರಿ ತಮಿಳುನಾಡಿಗೆ ಸೇರಿದ 4 ಬಸ್​ಗಳ​ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಬಸ್ ಚಾಲಕ ಗುಣಶೇಖರನ್ ದೂರಿನ ಮೇರೆಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಚಾಮರಾಜಪೇಟೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.11ರಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್​ಗೆ ಕರೆ ನೀಡಿತ್ತು. ಪ್ರತಿಭಟನಾಕಾರರು ರೋಡಿಗಿಳಿದ ಕೆಲ ವಾಹನಗಳ ಮೇಲೆ ಕಲ್ಲು, ಮೊಟ್ಟೆ ತೂರಾಟ ಮಾಡಿ ಆಕ್ರೋಶ ಹೊರ ಹಾಕಿದ್ದರು. ಮಧ್ಯಾಹ್ನ ಸಾರಿಗೆ ಸಚುವ ರಾಮಲಿಂಗಾರೆಡ್ಡಿ ಫ್ರೀಡಂ ಪಾರ್ಕ್​ಗೆ ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಮಾತನಾಡಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟ ನಂತರ ಪ್ರತಿಭಟನೆ ಹಿಂಪಡೆಯಲಾಗಿತ್ತು. ಇದರ ನಡುವೆ ತಡರಾತ್ರಿ ತಮಿಳುನಾಡು ಬಸ್​ಗಳ ಮೇಲೆ ಕಲ್ಲು ತೂರಾಟವಾಗಿದೆ.

ಇದನ್ನೂ ಓದಿ: ನೆಲಮಂಗಲ: ಕಾರಿನ ಗ್ಲಾಸ್ ಒಡೆದು ವಿಜ್ಞಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಮೂವರು ದರೋಡೆಕೋರರು ಅರೆಸ್ಟ್, ಇಬ್ಬರು ಪರಾರಿ

ಕಂಡ ಕಂಡಲ್ಲಿ ರಾಪಿಡೊ ಚಾಲಕರ ಮೇಲೆ ಹಲ್ಲೆ

ಖಾಸಗಿ ಸಾರಿಗೆಗಳ ಒಕ್ಕೂಟ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರ್ ಬಂದ್ ಕರೆ ನೀಡಿತ್ತು. ಸುಮಾರು 40 ಸಂಘಗಳ ಬೆಂಬಲವೂ ಬಂದ್​ಗೆ ಸಿಕ್ಕಿತ್ತು. ಹೀಗಾಗಿ ಸೆ.11ರ ತಡರಾತ್ರಿಯಿಂದಲೇ ಬಾಡಿಗೆ ವಾಹನಗಳು ರಸ್ತೆಯಲ್ಲಿ ಅಲ್ಲೊಂದ್ ಇಲ್ಲೊಂದ್ ಕಾಣಿಸ್ತಿದ್ವು. ಇದರ ನಡುವೆ ಚಾಲಕರ ಸಂಘದ ಕಾರ್ಯಕರ್ತರು ಸಹ ತಡರಾತ್ರಿಯಿಂದಲೇ ಬಂದ್ ನ್ನ ಲೆಕ್ಕಿಸದೆ ದುಡಿಯಲು ವಾಹನಗಳನ್ನ ರೋಡಿಗಳಿಸಿದ ಚಾಲಕರು, ಮಾಲೀಕರ ವಿರುದ್ದ ಕಾರ್ಯಾಚರಣೆ ನಡೆಸಿದ್ರೆ ಕೆಲವರು ರಸ್ತೆಗಳಿದ ವಾಹನಗಳ ಮೊಟ್ಟೆ ಕಲ್ಲುಗಳನ್ನ ತೂರಾಟ ಮಾಡಿದರು. ಇನ್ನು ಬಂದ್ ಹಿನ್ನಲೆ ಗಲಾಟೆ ನಡೆದು ಯಾವುದೇ ವಾಹನಕ್ಕೆ ಹಾನಿ ಮಾಡಿದ್ರೆ ಅತಂಹವರು ಪೊಲೀಸರಿಗೆ ದೂರು ನೀಡಿಲು ನಗರ ಪೊಲೀಸ್ ಆಯುಕ್ತರು ಅಭಯ ನೀಡಿದ್ದರು. ಅಲ್ಲದೇ ಘಟನೆ ಕಾರಣ ಕರ್ತರಾದ ಕೆಲವರ ಮೇಲೆ‌ ಪ್ರಕರಣವನ್ನು ದಾಖಲಿಸಿದ್ದಾರೆ.

ನಗರದ ಹಲವಾರು ಕಡೆ ರಾಪಿಡೋ ಚಾಲಕರ ಮೇಲೆ ಹಲ್ಲೆ ತಡೆದು ನಿಂದನೆ ಮಾಡಿರುವ ಬಗ್ಗೆ ಟ್ವೀಟರ್ ಸೇರಿದಂತೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ನೊಂದವರು ಹತ್ತಿರದ ಪೊಲೀಸ್ ಠಾಣೆ ಗೆ ದೂರು ನೀಡಲು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ತಿಳಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:46 am, Tue, 12 September 23