ಸೆಕ್ಯೂರಿಟಿ ಗಾರ್ಡ್ ಹತ್ಯೆ ಕೇಸ್: ಯುವತಿಯರ ಮುಂದೆ ಪ್ರಶ್ನೆ ಮಾಡಿದಕ್ಕೆ ಕೊಲೆ ಮಾಡಿದ ವಿದ್ಯಾರ್ಥಿ
ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಕೆಂಪಾಪುರದ ಸಿಂಧಿ ಕಾಲೇಜಿನ ಅವಾರಣದಲ್ಲಿ ವಿದ್ಯಾರ್ಥಿಯೋರ್ವ ಸೆಕ್ಯುರಿಟಿ ಇಂಚಾರ್ಜ್ ನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಘಟನೆ ಸಂಬಂಧ ಕೊಲೆ ಅಸಲಿ ಸತ್ಯ ಬಯಲಾಗಿದೆ. ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು, ಜುಲೈ.04: ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಡಿಸಿಪ್ಲೀನರಿ ಇನ್ ಚಾರ್ಜ್ ಹತ್ಯೆ ಕೇಸ್ಗೆ ಸಂಬಂಧಿಸಿ ವಿದ್ಯಾರ್ಥಿಯನ್ನು (Student) ಬಂಧಿಸಲಾಗಿದೆ. ಇನ್ನು ಕಾಲೇಜು ಯುವತಿಯರ ಮುಂದೆ ವಿದ್ಯಾರ್ಥಿಯನ್ನು ತಡೆದಿದ್ದಕ್ಕೆ ಸಿಬ್ಬಂದಿ ಹೆಣ (Death) ಬಿದ್ದಿದೆ. ಅಮೃತಹಳ್ಳಿ ಸಿಂಧಿ ಕಾಲೇಜಿನಲ್ಲಿ ನಿನ್ನೆ ಕಾನ್ವೋಕೇಶನ್ ಡೇ ಆಯೋಜಿಸಲಾಗಿತ್ತು. ಕಾರ್ಯಕ್ರಮ ಶುರುವಾಗಿ ಮುಗಿಯುವವರೆಗೂ ವಿದ್ಯಾರ್ಥಿಗಳು ಪದೇ ಪದೇ ಓಡಾಡದಂತೆ ಸೂಚಿಸಲಾಗಿತ್ತು. ಆದರೆ ಕೊಲೆ ಆರೋಪಿ ಭಾರ್ಗವ್ ಕಾರ್ಯಕ್ರಮ ಶುರುವಾದಾಗಿನಿಂದ ಐದಾರು ಭಾರಿ ಓಡಾಡಿದ್ದ. ಹೀಗಾಗಿ ಇದನ್ನ ಪ್ರಶ್ನಿಸಿ ವಾರ್ನ್ ಮಾಡಿದಕ್ಕೆ ಡಿಸಿಪ್ಲೀನರಿ ಇನ್ ಚಾರ್ಜ್ ಜೈಕಿಶೋರ್ ರಾಯ್ ಕೊಲೆಯಾಗಿದೆ.
ಕಾಲೇಜು ಯುವತಿಯರ ಮುಂದೆ ಪ್ರಶ್ನಿಸಿದ್ದಕ್ಕೆ ಕೋಪಗೊಂಡಿದ್ದ ಆರೋಪಿ ಭಾರ್ಗವ್ ಕೊಲೆ ಮಾಡಿದ್ದಾನೆ. ಭಾರ್ಗವ್ ಮೂಲತಃ ಅಸ್ಸಾಂ ಮೂಲದವನು. ಅಮೃತಹಳ್ಳಿ ಬಳಿ ಪಿಜಿಯಲ್ಲಿ ವಾಸವಿದ್ದು ಸಿಂಧಿ ಕಾಲೇಜಿನಲ್ಲಿ ಪೈನಲ್ ಇಯರ್ ಬಿ.ಎ ವ್ಯಾಸಾಂಗ ಮಾಡ್ತಿದ್ದ. ನಿನ್ನೆ ಸೆಕ್ಯೂರಿಟಿ ಗಾರ್ಡ್ ಜೊತೆ ಗಲಾಟೆಯಾದ ನಂತರ ಪಿಜಿಗೆ ತೆರಳಿ ಚಾಕು ತಂದಿದ್ದ. ಕೇವಲ 15 ಸೆಕೆಂಡ್ ನಲ್ಲಿ ಐದಾರು ಭಾರಿ ಸೆಕ್ಯೂರಿಟಿ ಗಾರ್ಡ್ ಎದೆಗೆ ಮನಸೋ ಇಚ್ಚೆ ಇರಿದು ಹತ್ಯೆ ಮಾಡಿದ್ದಾನೆ. ಸದ್ಯ ಅಮೃತಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ಕರ್ನಾಟಕದ ಹಲವೆಡೆ ಭಾರಿ ಮಳೆ: ಪ್ರವಾಸಿ ತಾಣ, ಜಲಪಾತಗಳಿಗೆ ಪ್ರವೇಶ ನಿರ್ಬಂಧ
ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ 52 ವರ್ಷದ ಜೈ ಕಿಶೋರ್ ರಾಯ್ ಹಲವು ವರ್ಷಗಳಿಂದ ವಾಸವಿದ್ದರು. ಇದೇ ಸಿಂಧಿ ಕಾಲೇಜಿನಲ್ಲಿ ಕೆಲ ವರ್ಷಗಳಿಂದ ಸೆಕ್ಯುರಿಟಿ ಇಂಚಾರ್ಜ್ ಆಗಿ ಕೆಲಸ ಮಾಡ್ತಿದ್ದರು. ಡಿಸಿಪ್ಲೈನ್ ಬಗ್ಗೆ ಹೆಚ್ಚು ಗಮನವಹಿಸ್ತಿದ್ದರು. ವಿಧ್ಯಾರ್ಥಿಗಳಿಗೆ ಕೊಂಚ ಸ್ಟ್ರಿಕ್ಟ್ ವರ್ತನೆ ತೋರ್ತಿದ್ದರು. ಕೆಂಪಾಪುರದ ಸಿಂಧಿ ಕಾಲೇಜಿನ ಅವಾರಣದಲ್ಲೇ ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಕೊಲೆ ನಡೆದಿದೆ.
ಓದಿನ ನಡುವೆ ಕುಡಿತದ ಚಟಕ್ಕೆ ಬಿದ್ದಿದ್ದ ಭಾರ್ಗವ್ ಹಗಲಿನಲ್ಲೂ ಕುಡಿಯೋಕು ಶುರು ಮಾಡಿದ್ದ. ಕೆಲ ದಿನಗಳಿಂದ ಕುಡಿದು ಕಾಲೇಜಿಗೆ ಬರೋಕೂ ಶುರು ಮಾಡಿದ್ದ. ಕಾಲೇಜಿನಲ್ಲಿ ಆ್ಯನ್ಯುವಲ್ ಡೇ ಕಾರ್ಯಕ್ರಮ ಇದ್ದಾಗ ಮಧ್ಯಾಹ್ನ 2ಗಂಟೆ ಸುಮಾರಿಗೆ ಕುಡಿದುಕೊಂಡೇ ಕಾಲೇಜಿಗೆ ಬಂದಿದ್ದ ಭಾರ್ಗವ್ ಒಳಗಡೆ ಹೋಗೋಕೆ ಮುಂದಾಗಿದ್ದಾಗ ಜಗಳ ನಡೆದು ಕೊಲೆ ನಡೆದಿದೆ ಎಂದೂ ಕೂಡ ಹೇಳಲಾಗುತ್ತಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ