AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಸ್ತೂಲ್ ತೋರಿಸಿ ಪತ್ನಿ ಮೇಲೆ ಹಲ್ಲೆ: ತನ್ನ ವೈರಿಗಳ ವಿರುದ್ಧ ಅತ್ಯಾಚಾರದ ದೂರು ನೀಡುವಂತೆ ಪತಿ ಒತ್ತಡ

ಪಿಸ್ತೂಲ್ ತೋರಿಸಿ ಹಲ್ಲೆ ಮಾಡಿ ಪತಿಯಿಂದ ಪತ್ನಿ ಮೇಲೆ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಸುದ್ದುಗುಂಟೆಪಾಳ್ಯದಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಕಳೆದ ತಿಂಗಳು ಎಸ್​ಜಿ ಪಾಳ್ಯ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ಸುಳ್ಳು ದೂರು ದಾಖಲಿಸುವಂತೆ ಮತ್ತು ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.

ಪಿಸ್ತೂಲ್ ತೋರಿಸಿ ಪತ್ನಿ ಮೇಲೆ ಹಲ್ಲೆ: ತನ್ನ ವೈರಿಗಳ ವಿರುದ್ಧ ಅತ್ಯಾಚಾರದ ದೂರು ನೀಡುವಂತೆ ಪತಿ ಒತ್ತಡ
ಪ್ರಾತಿನಿಧಿಕ ಚಿತ್ರImage Credit source: Getty images
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Nov 12, 2026 | 11:38 AM

Share

ಮುಖ್ಯಾಂಶಗಳು

  • ಬೆಂಗಳೂರಲ್ಲಿ ಪತಿಯಿಂದ ಪತ್ನಿಯ ಮೇಲೆ ದೌರ್ಜನ್ಯ ಆರೋಪ
  • ಪಿಸ್ತೂಲ್ ತೋರಿಸಿ ಪತಿಯಿಂದ ಪತ್ನಿ ಮೇಲೆ ಹಲ್ಲೆ
  • ಸುದ್ದುಗುಂಟೆಪಾಳ್ಯದ ಬಿಸ್ಮಿಲ್ಲಾ ನಗರದಲ್ಲಿ ನಡೆದಿರುವ ಘಟನೆ

ಬೆಂಗಳೂರು, ನವೆಂಬರ್​ 12: ನಗರದಲ್ಲಿ ಪತಿಯಿಂದ ಪತ್ನಿಯ ಮೇಲೆ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ. ಪಿಸ್ತೂಲ್ ತೋರಿಸಿ ಪತ್ನಿ ಮೇಲೆ ಪತಿ ಹಲ್ಲೆ ಮಾಡಿದ್ದು, 3ನೇ ಮದುವೆ ಆಗುವುದಕ್ಕೆ ಡಿವೋರ್ಸ್ ನೀಡುವಂತೆ ಹಿಂಸೆ ಕೊಡಲಾಗಿದೆ. ಅಷ್ಟೇ ಅಲ್ಲದೆ ತನ್ನ ವೈರಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ದೂರು ನೀಡುವಂತೆ ಒತ್ತಡ ಹೇರಲಾಗಿದೆ. ಸುದ್ದುಗುಂಟೆಪಾಳ್ಯದ ಬಿಸ್ಮಿಲ್ಲಾ ನಗರದಲ್ಲಿ ಈ ಘಟನೆ ನಡೆದಿದೆ.

ನಡೆದಿದ್ದೇನು?

ಝಾರ ಅಮೀನಾ ಮತ್ತು ಮುಹೀಜ್ ಅಹ್ಮದ್ 2017ರಲ್ಲಿ ಮದುವೆ ಆಗಿದೆ. ದಂಪತಿಗೆ ಮಕ್ಕಳೂ ಇದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಪತಿ ಅನುಮಾನ ಪಟ್ಟು ಪತ್ನಿ ಮೇಲೆ ಹಲ್ಲೆ ಹಾಗೂ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ! ಹೃದಯಾಘಾತದ ನಾಟಕವಾಡಿ ಕಣ್ಣೀರಿಟ್ಟಿದ್ದ ಆರೋಪಿ ಅರೆಸ್ಟ್

ಕಳೆದ ತಿಂಗಳೂ ಪತಿ ಪಿಸ್ತೂಲ್ ತೋರಿಸಿ ಹಲ್ಲೆ ನಡೆಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಮೂರನೇ ಮದುವೆಯಾಗಬೇಕಿದ್ದು, ಅದಕ್ಕಾಗಿ ವಿಚ್ಛೇದನ ನೀಡುವಂತೆ ಪೀಡಿಸುತ್ತಿದ್ದಾನೆ. ಅಲ್ಲದೆ, ತನ್ನ ವೈರಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ದೂರು ದಾಖಲಿಸುವಂತೆ ಪತ್ನಿಗೆ ಒತ್ತಡ ಹಾಕಿದ್ದಾನೆ. ಅಷ್ಟೇ ಅಲ್ಲದೆ ಮಕ್ಕಳನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿರುವುದಾಗಿ ಪತ್ನಿ ದೂರಿದ್ದಾರೆ.

LIVE TV

ಪೊಲೀಸ್​ ವಿಚಾರಣೆ ಬಳಿಕವೂ ಮತ್ತೆ ಗಲಾಟೆ 

ಇನ್ನು ಈ ಸಂಬಂಧ ಕಳೆದ ತಿಂಗಳು ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಪೊಲೀಸರು ಪತಿ ಮತ್ತು ಪತ್ನಿ ಇಬ್ಬರನ್ನೂ ಕರೆಸಿ ವಿಚಾರಣೆ ಮಾಡಿದ್ದರು. ಆದರೆ ವಿಚಾರಣೆ ಬಳಿಕವೂ ಪತಿ ಮತ್ತು ಆತನ ಪ್ರೇಯಸಿಯಿಂದ ಮತ್ತೆ ಗಲಾಟೆ ಮಾಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.

ಇದನ್ನೂ ಓದಿ: 7 ಮಂದಿ ಕೊಲೆ ಕೇಸ್​​: ಇಂದುಶೇಖರ್ ಮಗಳು ಈಗ ಅಪ್ರಾಪ್ತೆ ಅಲ್ಲ; ಗೊಂದಲದಲ್ಲಿ ಪೊಲೀಸರು, ತಜ್ಞರ ಮೊರೆ

ಆಸ್ತಿಯಲ್ಲಿ ಪಾಲು ಬೇಕೆಂದು ಪತಿ ಗಲಾಟೆ ಮಾಡಿದ್ದ. ಅಲ್ಲದೆ, ಪತ್ನಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಪತ್ನಿ ಹಾಗೂ ಬಾಮೈದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ವೇಳೆ ಪತಿ ಮುಹೀಜ್ ಅಹ್ಮದ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ಝಾರ ಅಮೀನಾ ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್