AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ದಾರುಣ ಘಟನೆ: 2 ವರ್ಷದಿಂದ ಹೆಂಡ್ತಿಯಿಂದ ದೂರವಾಗಿದ್ದ ಟೆಕ್ಕಿ ಸಾವಿಗೆ ಶರಣು!

ಇತ್ತೀಚಿಗಷ್ಟೇ ಕೌಟುಂಬಿಕ ಕಲಹದಿಂದ ಬೇಸತ್ತು ಟೆಕ್ಕಿ ಅತುಲ್​ ಸುಭಾಷ್​ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನ ಚಿಕ್ಕಬಾಣಾವರದಲ್ಲಿನ ಅಪಾರ್ಟ್​ಮೆಂಟ್​ ನಲ್ಲಿ ಒಂಟಿಯಾಗಿ ವಾಸವಾಗಿದ್ದ ಖಾಸಗಿ ಕಂಪನಿಯ ಉದ್ಯೋಗಿ ಪ್ರಶಾಂತ್ ನಾಯರ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಶಾಂತ್ ಲೆನೋವೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಬೆಂಗಳೂರಿನಲ್ಲಿ ದಾರುಣ ಘಟನೆ: 2 ವರ್ಷದಿಂದ ಹೆಂಡ್ತಿಯಿಂದ ದೂರವಾಗಿದ್ದ ಟೆಕ್ಕಿ ಸಾವಿಗೆ ಶರಣು!
ಟೆಕ್ಕಿ ಪ್ರಶಾಂತ್ ನಾಯರ್
Follow us
ವಿವೇಕ ಬಿರಾದಾರ
|

Updated on:Apr 07, 2025 | 5:47 PM

ಬೆಂಗಳೂರು, ಏಪ್ರಿಲ್​ 07: ಪತ್ನಿಯಿಂದ ದೂರವಾಗಿ, ಒಂಟಿಯಾಗಿ ವಾಸವಾಗಿದ್ದ ಖಾಸಗಿ ಕಂಪನಿ ಉದ್ಯೋಗಿ (Techie) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಾಣಾವರದಲ್ಲಿ (Chikkabanavara) ನಡೆದಿದೆ. ಪ್ರಶಾಂತ್ ನಾಯರ್ ಮೃತ ದುರ್ದೈವಿ. ಚಿಕ್ಕಬಾಣಾವರದಲ್ಲಿನ ಡಿ ಎಕ್ಸ್ ಸ್ಮಾರ್ಟ್ ಎಂಬ ಅಪಾರ್ಟ್​ಮೆಂಟ್​ನಲ್ಲಿ ಪ್ರಶಾಂತ್ ವಾಸವಾಗಿದ್ದರು.

ಪ್ರಶಾಂತ ಕಳೆದ ಎರಡು ವರ್ಷಗಳಿಂದ ಪತ್ನಿಯಿಂದ ದೂರ ಇದ್ದರು. ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿ ಒಂಟಿಯಾಗಿ ವಾಸಿಸುತ್ತಿದ್ದರು. ಮೂರು ತಿಂಗಳ ಹಿಂದೆ ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ಕೊರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪ್ರಶಾಂತ್ ಒಂಟಿಯಾಗಿ ಇರುತಿದ್ದರು ಎಂದು ತಿಳಿದುಬಂದಿದೆ. ಇಂದು (ಏ.07) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಪ್ರಶಾಂತ್ ಲೆನೋವೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮರ್ಮಾಂಗಕ್ಕೆ ಒದ್ದು ಕೊಲ್ಲಲು ಪ್ರಯತ್ನಿಸಿದ್ದಾಳೆ: ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿದ ಟೆಕ್ಕಿ

ಇದನ್ನೂ ಓದಿ
Image
ಕುಣಿಗಲ್: ದೊಡ್ಡಕೆರೆಯಲ್ಲಿ ಮಹಿಳಾ ಟೆಕ್ಕಿ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ
Image
ಅತುಲ್ ಆತ್ಮಹತ್ಯೆ ಪ್ರಕರಣ, ಕ್ರಿಮಿನಲ್ ಲಾಯರ್ ವಿಕಾಸ್ ಹೇಳಿದ್ದೇನು?
Image
ಬೆಂಗಳೂರಿನಿಂದ ಜೌನ್​ಪುರ್​ಗೆ 40 ಬಾರಿ ಹೋಗಿದ್ದ ಟೆಕ್ಕಿ
Image
ಮಗನಿಗೆ ಗಿಫ್ಟ್​ ಸಿದ್ಧಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ ಟೆಕ್ಕಿ

ಖಾಸಗಿ ಕಂಪನಿಯ ಉದ್ಯೋಗಿ ನೇಣಿಗೆ ಶರಣು

ಕೋಲಾರ: ಖಾಸಗಿ ಕಂಪನಿಯ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ತಾಲೂಕು ದಿಂಬ ಗ್ರಾಮದ ಹರೀಶ್ (24) ಮೃತ ದುರ್ದೈವಿ. ಕೋಲಾರ ತಾಲ್ಲೂಕು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಹರೀಶ್​ ಕೆಲಸ ಮಾಡುತ್ತಿದ್ದರು. ಕಂಪನಿಯ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ತನ್ನ ಕಂಪನಿಯ ಎದುರಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ: ಪ್ರದೀಪ್​ ಚಿಕ್ಕಾಟಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Mon, 7 April 25