‘ದೇಶವೇ ಅಲ್ಲೋಲ ಕಲ್ಲೋಲ ಆಗುವ ವಿಷಯ ಹೇಳುತ್ತೇನೆ’: ಸ್ಫೋಟಕ ಹೇಳಿಕೆ ಕೊಟ್ಟ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ

ಅಮೆರಿಕ ಪ್ರವಾಸದಿಂದ ಬಂದ ನಂತರ ದೇಶವೇ ಅಲ್ಲೋಲ ಕಲ್ಲೋಲವಾಗುವ ಮಹತ್ವದ ದಾಖಲೆ ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ. ಇದೇ ವೇಳೆ ಸದನದಲ್ಲಿ KPSC ಅಕ್ರಮದ ಬಗ್ಗೆ ಸಿಎಂ ಉತ್ತರಿಸಿದ್ದ ದಾಖಲೆ ಬಿಡುಗಡೆ ಮಾಡಿದ ಹೆಚ್​​ಡಿಕೆ, ನೀವು ಯಾರನ್ನು ಕಾಪಾಡಲು ಮುಂದಾಗಿದ್ದೀರಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ದೇಶವೇ ಅಲ್ಲೋಲ ಕಲ್ಲೋಲ ಆಗುವ ವಿಷಯ ಹೇಳುತ್ತೇನೆ: ಸ್ಫೋಟಕ ಹೇಳಿಕೆ ಕೊಟ್ಟ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ
Image Credit source: Tv9 Kannada
Edited By:

Updated on: Aug 30, 2026 | 12:05 PM

ಬೆಂಗಳೂರು, ಆಗಸ್ಟ್​​ 30: ಅಕ್ಕ ಸಮ್ಮೇಳನ ಹಿನ್ನೆಲೆ ಅಮೆರಿಕಗೆ ತೆರಳುತ್ತಿದ್ದು, ಅಲ್ಲಿಂದ ಬಂದ ಬಳಿಕ ದೇಶವೇ ಅಲ್ಲೋಲ ಕಲ್ಲೋಲ ಆಗುವ ವಿಷಯ ಹೇಳುತ್ತೇನೆ ಎಂದು ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಿನ ಜೆಡಿಎಸ್​​​ ಕಚೇರಿಯ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಾಮಾಣಿಕವಾಗಿ ಜನರ ಮುಂದೆ ಹಲವು ದಾಖಲೆ ಇಡ್ತೇ‌ನೆ. ನಿಮಗೆ ದಿನಕ್ಕೊಂದು ಸುದ್ದಿ ಕೊಡುತ್ತೇನೆ. ಆಗ ಹೆಚ್.ಡಿ.ಕುಮಾರಸ್ವಾಮಿ ಏನು ಎಂದು ಗೊತ್ತಾಗುತ್ತೆ ಎಂದು ಅವರು ತಿಳಿಸಿದ್ದಾರೆ.

ದಾಖಲೆ ಬಿಡುಗಡೆ

Kumaraswamy on Congress: ಅಲ್ಪಸ್ವಲ್ಪನಾದ್ರೂ ನೈತಿಕತೆ ಉಳಿಸಿಕೊಂಡಿದ್ದೇನೆ-ಕೈ ನಾಯಕರಿಗೆ HDK ಕೌಂಟರ್|#TV9D

ಇದೇ ವೇಳೆ ಸದನದಲ್ಲಿ KPSC ಅಕ್ರಮದ ಬಗ್ಗೆ ಸಿಎಂ ಉತ್ತರಿಸಿದ್ದ ದಾಖಲೆ ಬಿಡುಗಡೆ ಮಾಡಿದ ಹೆಚ್​​ಡಿಕೆ, ಆರ್ಡರ್ ಕಾಪಿ ಕೊಡಬೇಡಿ ಅಂತಲೇ KPSC ಸೆಕ್ರೆಟರಿ ಹೇಳಿದ್ದರು. ಆದರೂ ಇದರ ಬಗ್ಗೆ ಸರ್ಕಾರ ಯಾವುದೇ ಅಪೀಲು ಮಾಡಿಲ್ಲ. ನೀವು ಯಾರನ್ನು ಕಾಪಾಡಲು ಮುಂದಾಗಿದ್ದೀರಿ? OMR ತಿದ್ದಿ ಪರೀಕ್ಷೆ ಪಾಸ್ ಆಗಿರುವವರಿಗೆ ರಕ್ಷಣೆ ಕೊಡ್ತಿದ್ದೀರಾ? ಇದಕ್ಕೆ ಉತ್ತರಿಸಿ, ಆಮೇಲೆ ಆರ್​ಎಸ್​ಎಸ್​​​ ಬಗ್ಗೆ ಟೀಕೆ ಮಾಡಿ. ಕೆಪಿಎಸ್​ಸಿ ಸಂಸ್ಥೆ ಈಗ ಬೀದಿಯಲ್ಲಿ ಹರಾಜಿಗೆ ಬಂದಿದೆ. ಈ ಸಂಸ್ಥೆಯನ್ನ ಪರಿಶುದ್ಧ ಮಾಡಲು ಹೋಗಿ ಅಧ್ಯಕ್ಷರನ್ನ ತಂದರು. ನಾನು ಕಡಿಮೆ ಅವಧಿಯ ಸಿಎಂ ಆಗಿರಬಹುದು. ಆದರೆ ನೂನುಬಾಹಿರವಾಗಿ ಯಾವುದೇ ಸೂಚನೆ ಯಾರಿಗೂ ಕೊಟ್ಟಿಲ್ಲ. ಕಾನೂನು ಮೀರಿ ರಕ್ಷಣೆ ಕೊಡಿ ಅಂತ ಹೇಳಿಲ್ಲ. ನಾನು ಸಿಎಂ ಆಗಿದ್ದಾಗ ದಲಿತರನ್ನು ಕೆಪಿಎಸ್‌ಸಿ ಅಧ್ಯಕ್ಷರಾಗಿ ಮಾಡಿದ್ದೆ. ನನ್ನ ಸಂಬಂಧಿಕರನ್ನಾಗಲಿ, ಆಪ್ತರಿಗಾಗಲಿ ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕ್​​ ಖರ್ಗೆ ವಿರುದ್ಧ ಕುಮಾರಸ್ವಾಮಿ ಬಿಗ್​​ ಬಾಂಬ್​​: ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ!

ಕೆಪಿಎಸ್​ಸಿ ಬಗ್ಗೆ ಸಾಮಾನ್ಯ ಜನರಲ್ಲಿ ಅಹಸ್ಯಕರ ಭಾವನೆ ಮೂಡಿಸಿದೆ. ಸಚಿವರು ನನಗೆ ಅಧಿಕಾರ ಸಿಕ್ಕರೆ ಏನೋ ಮಾಡ್ತೀನಿ ಅಂತಿದ್ದರು. ಆದರೆ ಗೃಹ ಸಚಿವರು ಈವರೆಗೂ ಏನು ಮಾಡಿದ್ದಾರೆ? ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಅದರ ವಿರುದ್ಧ ಧ್ವನಿ ಎತ್ತಿದ್ದೇನೆ. ಕೆಪಿಎಸ್​ಸಿಯಲ್ಲಿ ಶಿಸ್ತು, ಪ್ರಾಮಾಣಿಕವಾಗಿ ಕೆಲಸ ಮಾಡಿದವರು ಇದ್ದಾರೆ. ತನ್ನ ಬಗ್ಗೆ ಏನೇ ಟೀಕೆ ಮಾಡಿದ್ರೂ ಸಮರ್ಥವಾಗಿ ಉತ್ತರಿಸುತ್ತೇನೆ, ಬೇರೆಯವರ ತರ ಪಲಾಯನ ಮಾಡುವುದಿಲ್ಲ. ಏನೇ ಬಂದರೂ ಒಬ್ಬನೇ ನಿಂತು ಎದುರಿಸುತ್ತೇನೆ. ನನ್ನ ಪರ ಹೇಳಿಕೆ ಕೊಡಿ ಎಂದು ಯಾರಿಗೂ ಹೇಳುವುದಿಲ್ಲ ಎಂದೂ ಅವರು ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 12:03 pm, Sun, 30 August 26

Loading...
Unable to load recommendations.
Follow Us