AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಾಂಕ್​​ ಖರ್ಗೆ ವಿರುದ್ಧ ಕುಮಾರಸ್ವಾಮಿ ಬಿಗ್​​ ಬಾಂಬ್​​: ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ!

ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ವಿರುದ್ಧ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರು ಈ ಹಿಂದೆ ಸಚಿವರಾಗಿದ್ದ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ. ತರಾತುರಿಯಲ್ಲಿ ಎಇಇಗಳ ನೇಮಕಾತಿ ಸಂಬಂಧ ಸಚಿವರು ರಾಜೀನಾಮೆ ನೀಡಬೇಕು ಎಂದವರು ಆಗ್ರಹಿಸಿದ್ದಾರೆ. ಆದರೆ ತಮ್ಮ ಮೇಲಿನ ಆರೋಪಗಳಿಗೆ ಪ್ರಿಯಾಂಕ್​​ ಖರ್ಗೆ ಖಡಕ್​​ ತಿರುಗೇಟು ನೀಡಿದ್ದಾರೆ.

ಪ್ರಿಯಾಂಕ್​​ ಖರ್ಗೆ ವಿರುದ್ಧ ಕುಮಾರಸ್ವಾಮಿ ಬಿಗ್​​ ಬಾಂಬ್​​: ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ!
ಪ್ರಿಯಾಂಕ್​​ ಖರ್ಗೆ ವಿರುದ್ಧ ಕುಮಾರಸ್ವಾಮಿ ಬಿಗ್​​ ಬಾಂಬ್​​Image Credit source: Tv9 Kannada
ಸುನಿಲ್​ ಎಮ್​ ಹೆಚ್​
| Edited By: |

Updated on:Aug 28, 2026 | 12:51 PM

Share

ಬೆಂಗಳೂರು, ಆಗಸ್ಟ್​​ 28: ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ (Priyank Kharge) ವಿರುದ್ಧ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದು, ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಸಚಿವರಾಗಿದ್ದ ವೇಳೆ ಅವ್ಯವಹಾರ ನಡೆದಿದೆ. ತರಾತುರಿಯಲ್ಲಿ ಎಇಇಗಳ ನೇಮಕಾತಿ ಮಾಡಿಕೊಂಡಿದ್ದು, ಈ ಅಕ್ರಮ ಸಂಬಂಧ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ತರಾತುರಿಯಲ್ಲಿ 24 ಎಇಇ ನೇಮಕ ಮಾಡಿದ್ದು ಯಾಕೆ ಎಂದ ಹೆಚ್​ಡಿಕೆ, ಈ ಸಂಬಂಧ ಒಎಮ್​ಆರ್​​ ಶೀಟ್​ ಮತ್ತು ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ. ತರಾತುರಿಯಲ್ಲಿ ಕೊಡಬಾರದೆಂದು ಕೋರ್ಟ್ ಆದೇಶವಿದೆ. ಹೀಗಿದ್ದರೂ ಏಕೆ ಅಪಾಯಿಂಟ್ಮೆಂಟ್ ಕೊಟ್ರಿ? ಎಂದು ಪ್ರಿಯಾಂಕ್​​ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.

‘ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ’

ಪ್ರಿಯಾಂಕ್ ಖರ್ಗೆ ಎಲ್ಲದರಲ್ಲೂ ನಾನು ಪಾರದರ್ಶಕ, ಪರಿಶುದ್ಧವಾಗಿ ಇದ್ದೇನೆ ಅಂತ ಹೇಳುತ್ತಾರೆ. ನಾನು ಅಧಿಕಾರಕ್ಕೆ ಬಂದ್ರೆ ಎಲ್ಲವೂ ಕ್ಲೀನ್ ಮಾಡ್ತೇನೆ ಅಂದವರು ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸಲು ಯತ್ನಿಸುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಆರ್​​ಎಸ್​​ಎಸ್​​ ಅಕೌಂಟ್​​ ಬಗ್ಗೆ ದಿನಾ ಕೇಳುವ ನೀವು ನಿಮ್ಮ ನಾಲಗೆ ಸರಿ ಇಟ್ಟುಕೊಳ್ಳಿ. ಆಡುಮುಟ್ಟಿದ ಸೊಪ್ಪಿಲ್ಲ ಅನ್ನೋ ಹಾಗೆ ನೀವು ಚರ್ಚಿಸದ ವಿಚಾರವೇ ಇಲ್ಲ. ಕೆಪಿಎಸ್​​ಸಿ ಹಗರಣ ಸಂಬಂಧ ಎಕ್ಸಾಂ ಕಂಟ್ರೋಲರ್​​ ಜ್ಞಾನೇಂದ್ರ ಕುಮಾರ್ ಆರೋಗ್ಯ ಸರಿಯಿಲ್ಲ ಎಂದು ಸಚಿವರೇ ಹೇಳಿದ್ದರು. ಊರಿಗೆ ಹೋಗಿದ್ದಾರೆ ಇನ್ನೆರಡು ದಿನಗಳಲ್ಲಿ ವಾಪಸ್ ಬರುತ್ತಾರೆ ಅಂದಿದ್ದರು. ಆ ಬಳಿಕ ಅವರೇ ಜ್ಞಾನೇಂದ್ರ ಎಲ್ಲಿದ್ದಾರೋ ಗೊತ್ತಿಲ್ಲ ಅಂತಾರೆ. ಗೊತ್ತಿಲ್ಲ ಅಂದ‌ಮೇಲೆ ಗೃಹ ಇಲಾಖೆ ಯಾಕೆ ನಡೆಸುತ್ತೀರಿ ಎಂದು ಹೆಚ್​​ಡಿಕೆ ಕಿಡಿ ಕಾರಿದ್ದಾರೆ.

ಇದನ್ನೂ ಓದಿ:  ಹೆಚ್​​.ಡಿ. ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ?: ಮೋದಿ-ಕೇಂದ್ರ ಸಚಿವರ ಭೇಟಿ ಬೆನ್ನಲ್ಲೇ ಹೆಚ್ಚಿದ ಚರ್ಚೆ

ಆರೋಪಗಳಿಗೆ ಪ್ರಿಯಾಂಕ್​​ ಖರ್ಗೆ ಕೌಂಟರ್​​

ಇನ್ನು ತಮ್ಮ ಮೇಲೆ ಕೇಂದ್ರ ಸಚಿವರು ಮಾಡಿರುವ ಆರೋಪಗಳಿಗೆ ಕೌಂಟರ್​​ ನೀಡಿರುವ ಪ್ರಿಯಾಂಕ್​​ ಖರ್ಗೆ, ನನ್ನ ನಾಲಿಗೆ ಬಗ್ಗೆ ಮಾತನಾಡುವವರ ಜೆಡಿಎಸ್ ನವರು ಯಾರು? ನಿಮ್ಮ ಪಕ್ಷದ ಅಸ್ತಿತ್ವ ಉಲಿಸಿಕೊಳ್ಳಲು ಪ್ರಿಯಾಂಕ ಖರ್ಗೆ ಬೇಕಾಗಿದೆಯಾ ಎಂದು ಪ್ರಶ್ನಿಸಿದ್ದಾರೆ. ನನ್ನಿಂದ ರಾಜಕೀಯ ಅಸ್ತಿತ್ವ ಉಳಿಯುತ್ತೆ ಅನದನೋದಾದ್ರೆ ಮಾತನಾಡಲಿ. ಅಧಿಕಾರಕ್ಕಾಗಿ ತತ್ತ್ವ ಸಿದ್ದಾಂತ ಬಿಟ್ಟು ಹೋಗುವವರ ಬಗ್ಗೆ ನಾನು ಏನು ಹೇಳಲಿ? ಜೆಡಿಎಸ್, ಬಿಜೆಪಿಯಿಂದ ನಾನು ಕಲಿಯಬೇಕಾಗಿರುವುದು ಏನೂ ಇಲ್ಲ ಎಂದವರು ಕಿಡಿ ಕಾರಿದ್ದಾರೆ. ಐಎಎಸ್​ ಅಧಿಕಾರಿ ನಾಪತ್ತೆಯಾಗಿದ್ದ ವಿಚಾರವಾಗಿಯೂ ಉತ್ತರಿಸಿರುವ ಅವರು, ಆ ಐಎಎಸ್​ ಅಧಿಕಾರಿ ಎಲ್ಲಿದ್ದಾರೆ ಎಂದು ನನಗೆ ಗೊತ್ತಿದೆ. ಅದನ್ನು ಕುಮಾರಸ್ವಾಮಿಗೆ, ಬಿಜೆಪಿಯವರಿಗೆ ಹೇಳುವ ಅಗತ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:43 pm, Fri, 28 August 26

Follow Us
ಸುನಿಲ್​ ಎಮ್​ ಹೆಚ್​
ಸುನಿಲ್​ ಎಮ್​ ಹೆಚ್​
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು