ಶಾರ್ಟ್ ಸರ್ಕ್ಯೂಟ್ನಿಂದ 3 ಎಕರೆಯಲ್ಲಿನ ಕಬ್ಬು ಬೆಳೆ ಭಸ್ಮ; ಜೆಸ್ಕಾಂ ವಿರುದ್ಧ ರೈತನ ಆಕ್ರೋಶ
ಮೀನಕೇರಾ ಗ್ರಾಮದ ರೈತ ಸಂತೋಷ ಸೋಲಪುರಗೆ ಸೇರಿದ ಬೆಳೆ ಕರಕಲಾಗಿದೆ. ಕಟಾವಿಗೆ ಬಂದ ಕಬ್ಬು ಸುಟ್ಟು ಕರಕಲಾದ ಹಿನ್ನೆಲೆ ಜೆಸ್ಕಾಂ ವಿರುದ್ಧ ರೈತ ಸಂತೋಷ ಸೋಲಪುರ ಆಕ್ರೋಶ ವ್ಯಕ್ತಡಿಸಿದ್ದಾರೆ.
ಬೀದರ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ( short circuit) ಮೂರು ಎಕರೆಯಲ್ಲಿನ ಕಬ್ಬು ಬೆಳೆ ನಾಶವಾದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮೀನಕೇರಾ ಗ್ರಾಮದಲ್ಲಿ ನಡೆದಿದೆ. ಮೀನಕೇರಾ ಗ್ರಾಮದ ರೈತ ಸಂತೋಷ ಸೋಲಪುರಗೆ ಸೇರಿದ ಬೆಳೆ ಕರಕಲಾಗಿದೆ. ಕಟಾವಿಗೆ ಬಂದ ಕಬ್ಬು ಸುಟ್ಟು ಕರಕಲಾದ ಹಿನ್ನೆಲೆ ಜೆಸ್ಕಾಂ ವಿರುದ್ಧ ರೈತ ಸಂತೋಷ ಸೋಲಪುರ ಆಕ್ರೋಶ ವ್ಯಕ್ತಡಿಸಿದ್ದಾರೆ. ಅಲ್ಲದೇ ಪರಿಹಾರ ನೀಡಲು ಮನವಿ ಮಾಡಿಕೊಂಡಿದ್ದಾರೆ.
ಈ ರೀತಿಯ ಅನೇಕ ಘಟನೆಗಳು ಈ ಹಿಂದೆ ಕೂಡ ನಡೆದಿದೆ ವಿಜಯಪುರ: ಕಬ್ಬಿನಗದ್ದೆ ಬೆಂಕಿಗೆ ಆಹುತಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬಿನ ಗದ್ದೆಗೆ ಬೆಂಕಿಬಿದ್ದಿದ್ದು, ನಾಲ್ಕು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಚಡಚಣ ತಾಲ್ಲೂಕಿನ ಉಮರಜ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಮಲ್ಲಪ್ಪ ಇರಮಾಣಿ, ಉಮೇಶ್ ಕಾಶೀನಾಥ ಅವರಿಗೆ ಸೇರಿದ ಬೆಳೆ ಭಸ್ಮವಾಗಿದೆ. ರೈತರಿಗೆ ಸುಮಾರು 8 ಲಕ್ಷ ರೂಪಾಯಿ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಚಡಚಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೆಳಗಾವಿ:ಗದ್ದೆ ಮೇಲಿನ ವಿದ್ಯುತ್ ತಂತಿ ತಗುಲಿ ಕಟಾವಿಗೆ ಬಂದಿದ್ದ 8 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ ಕಟಾವಿಗೆ ಬಂದಿದ್ದ ಎಂಟು ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಕ್ರಾಸ್ ಬಳಿ ನಡೆದಿದೆ. ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ರೈತ ಸಂಗಪ್ಪ ಕಾದ್ರೊಳ್ಳಿಗೆ ಸೇರಿದ ಜಮೀನಿನಲ್ಲಿ ಈ ಅವಘಡ ಸಂಭವಿಸಿದೆ. ಗದ್ದೆ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ತಂತಿ ಹರಿದು ಬಿದ್ದಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ. ಧಗಧಗಿಸುತ್ತಿರುವ ಬೆಂಕಿ ನಂದಿಸಲು ರೈತ ಕುಟುಂಬ ಹಾಗೂ ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:
ಚಿಕ್ಕಮಗಳೂರು: ಮಾರುಕಟ್ಟೆಯಲ್ಲಿ ಬೆಲೆ ಕುಸಿತ; ಟ್ರ್ಯಾಕ್ಟರ್ನಿಂದ 2 ಎಕರೆ ಉಳುಮೆ ಮಾಡಿ ಈರುಳ್ಳಿ ಬೆಳೆ ನಾಶ
ಇಳಕಲ್ನಲ್ಲಿ ಭಾರಿ ಅಗ್ನಿ ಅವಘಡ: ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಶಾಪಿಂಗ್ ಕಾಂಪ್ಲೆಕ್ಸ್
Published On - 1:55 pm, Fri, 12 November 21