ಬೀದರ್​: 18.6 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು, 11 ವರ್ಷದಿಂದ ಕಚೇರಿಗೆ ಅಲೆಯುತ್ತಿರುವ ರೈತ

ಬೀದರ್​ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಉಡಬಾಳ ಗ್ರಾಮದ ರೈತನ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಆಗಿದೆ. ಪಹಣಿಯಲ್ಲಿನ ವಕ್ಫ್ ಬೋರ್ಡ್ ಹೆಸರು ತೆಗೆಸಲು ರೈತ ಒಂದು ದಶಕದಿಂದ ಹೋರಾಡುತ್ತಿದ್ದಾರೆ. ಇತ್ತ ಅರ್ಧದಷ್ಟು ಊರು ಕೂಡ ವಕ್ಫ್ ಬೋರ್ಡ್ ಹೆಸರಿಗೆ ವರ್ಗಾವಣೆಯಗಿದ್ದು ಗ್ರಾಮಸ್ಥರನ್ನು ಕಂಗಾಲು ಮಾಡಿದೆ.

ಬೀದರ್​: 18.6 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು, 11 ವರ್ಷದಿಂದ ಕಚೇರಿಗೆ ಅಲೆಯುತ್ತಿರುವ ರೈತ
ರೈತ ಕೃಷ್ಣಮೂರ್ತಿ ಜಮೀನಿನ ಪಹಣಿಯಲ್ಲಿ ವಕ್ಫ್​ ಬೋರ್ಡ್​ ಹೆಸರು
Follow us
| Updated By: ವಿವೇಕ ಬಿರಾದಾರ

Updated on:Nov 05, 2024 | 8:52 AM

ಬೀದರ್​, ನವೆಂಬರ್​ 05: ಚಿಟಗುಪ್ಪಾ ತಾಲೂಕಿನ ಉಡಬಾಳ ಗ್ರಾಮದ ರೈತ (Farmer) ಕೃಷ್ಣಮೂರ್ತಿ ಎಂಬುವರ ಸುಮಾರು 18.60 ಎಕರೆಯಷ್ಟು ಜಮೀನು ವಕ್ಫ್ ಬೋರ್ಡ್ (Waqf Board) ಹೆಸರಿಗೆ ವರ್ಗಾವಣೆಯಾಗಿದೆ. ಇದರಿಂದ ರೈತ ಕೃಷ್ಣಮೂರ್ತಿ ಕಂಗಾಲಾಗಿದ್ದಾರೆ. 30 ವರ್ಷದ ಹಿಂದೆ ಮುಸ್ಲಿಂ ಸಮುದಾಯದ ಓರ್ವ ವ್ಯಕ್ತಿ ತೀರಿಕೊಂಡಿದ್ದರು. ಮಾನವೀಯತೆ ಆಧಾರದ ಮೇಲೆ ರೈತ ಕೃಷ್ಣಮೂರ್ತಿ ತಮ್ಮ ಹೊಲದ ಒಂದು ಮೂಲೆಯಲ್ಲಿ ಶವ ಹೂಳಲು ಅವಕಾಶಕೊಟ್ಟಿದ್ದರು. ಅದೇ ಈಗ ಈ ರೈತನಿಗೆ ಮುಳ್ಳಾಗಿದೆ.

ಇಡೀ 18.60 ಎಕರೆ ಜಮೀನೇ ವಕ್ಫ್ ಬೋರ್ಡ್ ತನ್ನದೆಂದು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದು, ಪಹಣಿಯಲ್ಲಿಯೂ ಕೂಡಾ ವಕ್ಫ್ ಬೋರ್ಡ್ ಎಂದು ನಮೂದಾಗಿದೆ. 2013ರಲ್ಲಿ ಪಹಣಿಯಲ್ಲಿ ವಕ್ಫ್ ಬೋರ್ಡ್ ಸೇರ್ಪಡೆಯಾಗಿದೆ. ಯಾವುದೇ ನೋಟೀಸ್ ನೀಡದೆ ವಕ್ಫ್ ಬೋರ್ಡ್ ತನ್ನ ಹೆಸರನ್ನು ಪಹಣಿಯಲ್ಲಿ ಸೇರಿಸಿದೆ ಎಂದು ರೈತ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಈ ಜಮೀನಿಗೆ ಒಟ್ಟು ನಾಲ್ಕು ಜನ ಮಾಲೀಕರಿದ್ದರು. ಕೃಷ್ಣಮೂರ್ತಿ, ಲಕ್ಕಪ್ಪ, ಮಾರುತಿ ಹಾಗೂ ಮರೆಪ್ಪ ಎಂಬುವರ ಹೆಸರಿನಲ್ಲಿ ಜಮೀನು ಇತ್ತು. ಲಕ್ಕಪ್ಪ, ಮಾರುತಿ ಹಾಗೂ ಮರೆಪ್ಪ ಮೃತಪಟ್ಟ ನಂತರ ಸಂಪೂರ್ಣ ಜಮೀನು ಕೃಷ್ಣಮೂರ್ತಿ ಅವರ ಹೆಸರಿಗೆ ಆಗಿದೆ. ಆದರೆ, 2013 ಈ ಜಮೀನಿನ ಪಹಣಿಯಲ್ಲಿ ವಕ್ಫ್​ ಬೋರ್ಡ್​ ಆಸ್ತಿ ಅಂತ ನಮೂದಾಗಿದೆ.

ಹೀಗಾಗಿ, ಕೃಷ್ಣಮೂರ್ತಿ ಜಮೀನು ಉಳಿಕೊಳ್ಳಲು ಇಳಿ ವಯಸ್ಸಿನಲ್ಲಿಯೂ ಕಳೆದ 11 ವರ್ಷಗಳಿಂದ ಕಚೇರಿಗೆ ಅಲೆಯುತ್ತಿದ್ದಾರೆ. ನಮ್ಮ ಜಮೀನು ಪಹಣಿಯಲ್ಲಿನ ವಕ್ಫ್ ಬೋರ್ಡ್ ಹೆಸರು ತೆಗೆಯಿರಿ ಎಂದು ಸರಕಾರಕ್ಕೆ ರೈತರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಕ್ಫ್ ವಿವಾದ: ವಿಜಯಪುರದಲ್ಲಿ ಅಹೋರಾತ್ರಿ ಧರಣಿ, ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ

ಇವರ ಜಮೀನಿಗೆ ಹೊಂದಿಕೊಂಡತೆ ಉಡಬಾಳ ಗ್ರಾಮವಿದೆ. ರೈತ ಕೃಷ್ಣಮೂರ್ತಿಯ ಜಮೀನು ಸೇರಿದಂತೆ ಗ್ರಾಮದ ಅರ್ಧದಷ್ಟು ಅಂದರೆ 90 ಕ್ಕಿಂತ ಹೆಚ್ಚು ಮನೆಗಳು ಮತ್ತು ಸರ್ವೇ ನಂಬರ್​1ರಲ್ಲಿಯೇ ಬರುತ್ತವೆ. ಹೀಗಾಗಿ ಈ ಗ್ರಾಮದ ಕೆಲವು ಮನೆಗಳು ಕೂಡಾ ವಕ್ಫ್ ಬೋರ್ಡ್ ಹೆಸರಿಗೆ ಆಗಿವೆ. ಇದು ಸಹಜವಾಗಿಯೇ ಗ್ರಾಮಸ್ಥರ ಆತಂಕ ಹೆಚ್ಚಿಸುವಂತೆ ಮಾಡಿದೆ. ಈ ಹಿಂದೆ ಒಂದು ಸಲ ಇಲ್ಲಿನ ಮನೆಗಳಿಗೆ ವಕ್ಫ್ ಬೋರ್ಡ್ ನೀಟೀಸ್ ಕೊಟ್ಟಿತ್ತು. ಆವಾಗ ರೈತರು ಹಾಗೂ ವಕ್ಫ್ ಬೋರ್ಡ್ ನಡುವೆ ಜಗಳ ಆದಾಗ ವಕ್ಫ್ ಬೋರ್ಡ್ ಸುಮ್ಮನಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನಿಜಾಮರು ಕೊಟ್ಟಿದ್ದ ಜಮೀನಿನಲ್ಲಿ ನೂರಾರು ವರ್ಷದಿಂದಾ ಉಳುಮೆ ಮಾಡಿಕಜೊಂಡು ಬಂದಿದ್ದೇವೆ. ಉಳುವವನೆ ಭೂಮಿಯ ಒಡೆಯ ಎಂದು ಕಾನೂನು ಜಾರಿಯಾದ ಬಳಿಕ ಈ ಜಮೀನು ಆಯಾ ರೈತರ ಹೆಸರಿಗೆ ವರ್ಗಾವಣೆಯಾಗಿದೆ. ಅಂದಿನಿಂದಲೂ ಈ ಜಮೀನು ನಮ್ಮ ಹೆಸರಿನಲ್ಲಿಯೇ ಇದೆ. ನಾವೆ ಉಳುಮೆ ಮಾಡಿಕೊಂಡು ಬಂದಿದ್ದೇವೆ. ಆದರೆ ಇಷ್ಟು ವರ್ಷಗಳ ಕಾಲ ಇಲ್ಲದ್ದು ಈಗ ಏಕಾಏಕಿ 2013ರಲ್ಲಿ ನಮ್ಮಮ ಜಮೀನು ವಕ್ಫ್ ಬೋರ್ಡ್ ಹೆಸರಿಗೆ ಆಗಿದ್ದು ಹೇಗೆ ಎಂದು ರೈತರು ಸರಕಾರಕ್ಕೆ ಪ್ರಶ್ನೀಸುತ್ತಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದು ಪಿ.ಸಿ. ಜಾಫರ್ ಅವರದ ಅಧಿಕಾರದ ಅವಧಿಯಲ್ಲಿ ದಲಿತರು, ಹಿಂದೂಗಳ ಜಮೀನು ಊರುಗಳು ವಕ್ಫ್ ಬೋರ್ಡ್ ಹೆಸರಿಗೆ ಆಗಿದೆ ಎಂದು ಉಡಬಾಳ ಗ್ರಾಮದ ರೈತರು ಹೇಳಿದ್ದಾರೆ.

ಇಲ್ಲಿನ ರೈತರು ತಲೆ ತಲಾಂತರದಿಂದಲೂ ಇದೇ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಇದೀಗ ದಿಢೀರನೆ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್​ ಬೋರ್ಡ್​ ಅಂತ ಹೆಸರು ಬಂದಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ. ತಮ್ಮ ಭೂಮಿ ಉಳಿಸಿಕೊಳ್ಳಲು ಹಗಲಿರುಳು ರಾಜಕಾರಣಿಗಳ ಮನೆಯ ಮುಂದೆ ಅಲೆಯುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ, ನಮ್ಮ ಪಹಣಿಯಲ್ಲಿ ನಮ್ಮ ಹೆಸರು ಸೇರಿಸಿ ಎಂದು ಸರಕಾರಕ್ಕೆ ರೈತರು ಮನವಿ ಮಾಡುತ್ತಿದ್ದಾರೆ.

ಉಡಬಾಳ ಗ್ರಾಮದ ರೈತರು ಕಳೆದ 10 ವರ್ಷಗಳಿಂದ ವಕ್ಫ್ ಭೀತಿಯಿಂದ ನಲುಗಿದ್ದಾರೆ. ವಕ್ಫ್ ಸಚಿವರು ಸಿಎಂ ಇತ್ತ ಕಡೆಗೆ ಗಮನ ಹರಿಸಿ. ಎಲ್ಲಿ ಸಮಸ್ಯೆಯಾಗಿದೆ ಅದನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:44 am, Tue, 5 November 24

Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಜನರ ಕಷ್ಟ ಗೊತ್ತಿರುವ ಯೋಗೇಶ್ವರ್ ಚನ್ನಪಟ್ಟಣಕ್ಕೆ ರೆಡಿಮೇಡ್ ಗಂಡು: ಡಿಕೆಶಿ
ಜನರ ಕಷ್ಟ ಗೊತ್ತಿರುವ ಯೋಗೇಶ್ವರ್ ಚನ್ನಪಟ್ಟಣಕ್ಕೆ ರೆಡಿಮೇಡ್ ಗಂಡು: ಡಿಕೆಶಿ
ಆಗ್ರಾ ಬಳಿ ಮಿಗ್-29 ಫೈಟರ್ ಜೆಟ್ ಪತನ; ಪೈಲಟ್‌ಗಳು ಪಾರು
ಆಗ್ರಾ ಬಳಿ ಮಿಗ್-29 ಫೈಟರ್ ಜೆಟ್ ಪತನ; ಪೈಲಟ್‌ಗಳು ಪಾರು