Bidar: ನಾಯಿಕೊಡೆಗಳಂತೆ ಆಗಸದಲ್ಲಿ ಅನಧಿಕೃತ ಮೊಬೈಲ್ ಟವರ್​ಗಳದ್ದೇ ಹಾವಳಿ, ಇದರ ಬಗ್ಗೆ ಮಾಹಿತಿಯೇ ಇಲ್ಲ ಅಂತಾರೆ ನಗರಸಭೆ ಆಯುಕ್ತ!

ಬೀದರ್ ನಗರದಲ್ಲಿ 20 ಟವರ್‌ಗಳಿಂದ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಉಳಿದ 110 ಟವರ್‌ಗಳ ಬಗ್ಗೆ ನಗರ ಸಭೆಯ ಬಳಿ ನಿಖರ ಮಾಹಿತಿಯೇ ಇಲ್ಲ. ಅವರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಜರುಗಿಸಲಾಗುತ್ತದೆಂದು ನಗರ ಸಭೆಯ ಆಯುಕ್ತರಾದ ಪ್ರಭುದ್ಧ ಕಾಂಬ್ಳೆ ಹೇಳುತ್ತಿದ್ದಾರೆ.

Bidar: ನಾಯಿಕೊಡೆಗಳಂತೆ ಆಗಸದಲ್ಲಿ ಅನಧಿಕೃತ ಮೊಬೈಲ್ ಟವರ್​ಗಳದ್ದೇ ಹಾವಳಿ, ಇದರ ಬಗ್ಗೆ ಮಾಹಿತಿಯೇ ಇಲ್ಲ ಅಂತಾರೆ ನಗರಸಭೆ ಆಯುಕ್ತ!
ನಾಯಿಕೊಡೆಗಳಂತೆ ಆಗಸದಲ್ಲಿ ಅನಧಿಕೃತ ಮೊಬೈಲ್ ಟವರ್​ಗಳದ್ದೇ ಹಾವಳಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 29, 2022 | 1:10 PM

ಆ ನಗರದಲ್ಲಿ ನಾಯಿಕೊಡೆಗಳಂತೆ ಆಗಸದಲ್ಲಿ, ಮನೆಗಳ ಮೇಲೆ ಮೊಬೈಲ್ ಟವರ್ (Mobile Towers menace)ಗಳು ಎದ್ದು ನಿಂತಿವೆ. ಕೆಲವೇ ಕೆಲವು ಮೊಬೈಲ್ ಕಂಪನಿವರು ಅನುಮತಿ ಪಡೆದರೆ ಉಳಿದವರು ಮೊಬೈಲ್ ಟವರ್ ಹಾಕಲು ಅನುಮತಿಯನ್ನೇ ಪಡೆದಿಲ್ಲ. ಜೊತೆಗೆ ಮೊಬೈಲ್ ಟವರ್ ಗಳು ಸರಕಾರದ ಕಾನೂನು ಮಾರ್ಗಸೂಚಿ ನಿಯಮಾವಳಿಗಳನ್ನೆಲ್ಲ ಗಾಳಿಗೆ ತೂರಿ ಟವರ್ ಅಳವಡಿಸಿಬಿಟ್ಟಿದ್ದಾರೆ. ಬೀದರ್ ಜಿಲ್ಲೆಯಲ್ಲಿ ‌ಎಲ್ಲಿ ಬೇಕಾದರಲ್ಲಿ ಅಕ್ರಮ ಮೊಬೈಲ್ ಟವರ್ ನಿರ್ಮಾಣ. ನಗರ ಸಭೆ, ಪುರಸಭೆ, ಜಿಲ್ಲಾಡಳಿತದ ಅನುಮತಿ ಪಡೆಯದೆಯೇ (Bidar City Municipal Council) ಎಲ್ಲೆಂದರಲ್ಲಿ ಟವರ್ ನಿರ್ಮಾಣ. ಸಂಬಂಧಿಸಿದ ಇಲಾಖೆಯ ಅನುಮತಿ ಪಡೆಯದೆ ಟವರ್ ನಿರ್ಮಿಸಿದ್ದರಿಂದ‌ ಸರಕಾರಿ ಬೊಕ್ಕಸಕ್ಕೆ ಲಕ್ಷಾಂತರ ‌ರೂಪಾಯಿ ತೆರಿಗೆ ನಷ್ಟ. ಇಷ್ಟೆಲ್ಲ ಗೊತ್ತಿದ್ದರೂ ಕಂಡುಕಾಣದಂತೆ ಕುಳಿತ ಅಧಿಕಾರಿ ವರ್ಗ…..

ಹೌದು ಬೀದರ್ ಜಿಲ್ಲೆಯಲ್ಲಿ ಅನಧಿಕೃತ ಹಾಗೂ ಅಕ್ರಮವಾಗಿ ಎಲ್ಲಿಂದರೆಲ್ಲಿ ಬೇಕಾಬಿಟ್ಟಿ ನಾಯಿಕೊಡೆಗಳಂತೆ ಆಕಾಶದೆತ್ತರಕ್ಕೆ ತಲೆ ಎತ್ತುತ್ತಿರುವ ಮೊಬೈಲ್ ಗೋಪುರಗಳಲ್ಲಿ ಸರಕಾರದ ಕಾನೂನು ಮಾರ್ಗಸೂಚಿ ನಿಯಮಾವಳಿಗಳನ್ನು ಅಕ್ಷರ ಸಹ ಪಾಲಿಸದೇ ಇರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಸಾಕಷ್ಟು ಪ್ರಾಣಿಸಂಕುಲನ ಅವಸಾನದಂಚಿಗೆ ಸಾಗುವ ಮೂಲಕ ಪ್ರಕೃತಿಗೆ ಸಂಚಕಾರವಾಗುತ್ತಿರುವುದರ ಜೊತೆಗೆ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ.

ಬೀದರ್ ನಗರಸಭೆಯ ವ್ಯಾಪ್ತಿಯೊಂದರಲ್ಲಿಯೇ 120 ವಿವಿಧ ಕಂಪನಿಯ ಮೊಬೈಲ್ ಟವರ್ ಗಳಿದ್ದು 90 ಮೊಬೈಲ್ ಟವರ್ ಅಳವಡಿಸಲು ಅನುಮತಿಯನ್ನೇ ಪಡೆದುಕೊಂಡಿಲ್ಲ. ಮೊಬೈಲ್ ಟವರ್ ಗಳು ಅಕ್ರಮವಾಗಿ ತಲೆ ಎತ್ತುವ ಮೂಲಕ ಮೊಬೈಲ್ ಟವರ್ ನಿರ್ಮಾಣ ದೊಡ್ಡ ಮಾಫಿಯಾದಂತೆ ಬೆಳೆದಿದೆ. ಪೈಪೋಟಿಯ ಮೇಲೆ ಟವರ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಟವರ್ ನಿರ್ಮಾಣಕ್ಕಿರುವ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗುತ್ತಿದೆ. ಆದರೆ, ಅಕ್ರಮವಾಗಿ ಟವರ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಯಾರು ಕೇಳಬೇಕು ಎನ್ನುವ ಪ್ರಶ್ನೆ ಎದುರಾಗಿದೆ.

ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಮೊಬೈಲ್ ಟವರ್ ನಿರ್ಮಿಸಬೇಕಾದರೆ, ಸ್ಥಳೀಯ ಸಂಸ್ಥೆಯಾದ ನಗರ ಸಭೆ, ಪುರಸಭೆ, ಅಗ್ನಿಶಾಮಕ ದಳ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ (ಎನ್‌ಒಸಿ) ಪಡೆಯುವುದು ಕಡ್ಡಾಯ.

Mobile Towers menace galore in Bidar City Municipal Council commissioner clueless

ಆದರೆ, ಈ ನಿಯಮಗಳನ್ನು ಗಾಳಿಗೆ ತೂರಿ, ಖಾಸಗಿ ಮೊಬೈಲ್ ಕಂಪೆನಿಗಳು ಟವರ್ ನಿರ್ಮಿಸಿಕೊಳ್ಳುತ್ತಿದ್ದು, ಇದೊಂದು ದೊಡ್ಡ ಮಾಫಿಯಾ ಆಗಿದೆ. ಜೊತೆಗೆ ಹೀಗೆ ಅಕ್ರಮವಾಗಿ ಮೊಬೈಲ್ ಟವರ್ ಅಳವಡಿಸಿದ್ದರ ಪರಿಣಾಮವಾಗಿ ಸರಕಾರದ ಬೊಕ್ಕಸಕ್ಕೆ ಕೂಡಾ ಲಕ್ಷಾಂತರ ರೂಪಾಯಿ ಟ್ಯಾಕ್ಸ್ ವಂಚನೆಯಾಗುತ್ತಿದೆ ಎಂದು ಜಿಲ್ಲೆಯ ಜನರು ಕಳವಳ ವ್ಯಕ್ತಪಡಿಸಿದ್ದಾರೆ.

ಕೇವಲ ರಿಲಯನ್ಸ್ ಕಂಪನಿಯವರು ಮಾತ್ರ ನಗರದಲ್ಲಿ ಅಳವಡಿಸಿರುವ ಟವರ್ ಗೆ ನಗರ ಸಭೆಯಿಂದ ಪರವಾನಗಿ ಪಡೆದುಕೊಂಡು ಸರಕಾರದ ಮಾರ್ಗಸೂಚಿಯನ್ವಯ ಟವರ್ ಅಳವಡಿಸಿದ್ದಾರೆ. ಇನ್ನುಳಿದ ಮೊಬೈಲ್ ಟವರ್ ಕಂಪನಿಯವರು ನಗರ ಸಭೆಯಿಂದ ಅನುಮತಿಯನ್ನೇ ಪಡೆದುಕೊಳ್ಳದೆ ನಗರದಲ್ಲಿ ಎಲ್ಲೆಂದರಲ್ಲಿ ಟವರ್ ನಿರ್ಮಾಣ ಮಾಡಿದ್ದು ನಗರ ಸಭೆಗೆ ಲಕ್ಷಾಂತರ ರೂಪಾಯಿ ತೆರಿಗೆಯನ್ನ ವಂಚಿಸುತ್ತಿದ್ದಾರೆ.

ಇದರ ಜೊತೆಗೆ ಕಾನೂನಿನಲ್ಲಿ ಸರಕಾರದ ನಿಯಮದ ಪ್ರಕಾರ ಟವರ್ ಅಳವಡಿಸಿಲ್ಲ, ಇಂತಿಷ್ಟು ಅಂತರದಲ್ಲಿ ಟವರ್ ನಿರ್ಮಾಣ ಮಾಡಬೇಕು ಅನ್ನೋ ನಿಯಮವಿದೆ. ಆದರೆ ಆ ನೀಯಮವನ್ನೂ ಇಲ್ಲಿ ಗಾಳಿಗೆ ತೂರಲಾಗಿದೆ. ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಮೊಬೈಲ್‌ ಟವರ್‌ಗಳನ್ನು ಘೋಷಿಸಿಕೊಳ್ಳದ ಟೆಲಿಕಾಂ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಧೈರ್ಯ ಮಾಡುತ್ತಿಲ್ಲ.

ಕೇವಲ ರಿಲಯನ್ಸ್ ಕಂಪನಿಯವರು ಮಾತ್ರ ನಗರದಲ್ಲಿ ಅಳವಡಿಸಿರುವ ಟವರ್ ಗೆ ನಗರ ಸಭೆಯಿಂದ ಪರವಾನಗಿ ಪಡೆದುಕೊಂಡು ಸರಕಾರದ ಮಾರ್ಗಸೂಚಿಯನ್ವಯ ಟವರ್ ಅಳವಡಿಸಿದ್ದಾರೆ. ಇನ್ನುಳಿದ ಮೊಬೈಲ್ ಟವರ್ ಕಂಪನಿಯವರು ನಗರ ಸಭೆಯಿಂದ ಅನುಮತಿಯನ್ನೇ ಪಡೆದುಕೊಳ್ಳದೆ ನಗರದಲ್ಲಿ ಎಲ್ಲೆಂದರಲ್ಲಿ ಟವರ್ ನಿರ್ಮಾಣ ಮಾಡಿದ್ದು ನಗರ ಸಭೆಗೆ ಲಕ್ಷಾಂತರ ರೂಪಾಯಿ ತೆರಿಗೆಯನ್ನ ವಂಚಿಸುತ್ತಿದ್ದಾರೆ.

Also Read:

Cyber Sickness Disease: ಲ್ಯಾಪ್​ಟಾಪ್, ಮೊಬೈಲ್​ ಇಲ್ಲದೆ ಇರೋದಕ್ಕೆ ಆಗಲ್ಲ ಅನ್ನಿಸ್ತಿದೆಯಾ, ಇದು ಕೇವಲ ಅಡಿಕ್ಷನ್ ಅಲ್ಲ, ಕಾಯಿಲೆಯೂ ಆಗಿರಬಹುದು

ಇವುಗಳಲ್ಲಿ 20 ಟವರ್‌ಗಳಿಂದ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಉಳಿದ ಟವರ್‌ಗಳ ಬಗ್ಗೆ ನಗರ ಸಭೆಯ ಬಳಿ ನಿಖರ ಮಾಹಿತಿಯೇ ಇಲ್ಲ. ಬೀದರ್ ನಗರದಲ್ಲಿನ ಅನಧಿಕೃತ ಮೊಬೈಲ್ ಟವರ್ ಬಗ್ಗೆ ನಗರ ಸಭೆಯ ಆಯುಕ್ತರನ್ನ ಕೇಳಿದರೆ ನಮ್ಮಲ್ಲಿ 20 ಟವರ್ ಮಾತ್ರ ಅನುಮತಿ ಪಡೆದಿದ್ದು, ಅವುಗಳಿಗೆ ಟವರ್ ಅಳವಡಿಸಲು ಅನುಮತಿ ಕೊಡಲಾಗಿದೆ. ಉಳಿದ 110 ಟವರ್ ಗಳು ಅನುಮತಿ ಪಡೆಯದೆ ಮೊಬೈಲ್ ಟವರ್ ಅಳವಡಿಸಿದ್ದು ಅವರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಜರುಗಿಸಲಾಗುತ್ತದೆಂದು ನಗರ ಸಭೆಯ ಆಯುಕ್ತರಾದ ಪ್ರಭುದ್ಧ ಕಾಂಬ್ಳೆ ಹೇಳುತ್ತಿದ್ದಾರೆ.

ಟವರ್ ಅಳವಡಿಕೆಗೆ ಅನುಮತಿಗೆ ಅರ್ಜಿ ಸಲ್ಲಿಸುವ ವೇಳೆ ಸ್ಥಳ ನಕ್ಷೆ, ನಿವೇಶನ ನಕ್ಷೆ, ಸ್ಟ್ರಕ್ಚರಲ್ ಸ್ಟೆಬಿಲಿಟಿ ಸರ್ಟಿಫಿಕೇಟ್, ಮಾಲಿಕತ್ವ ಅಥವಾ ಗುತ್ತಿಗೆ ದಾಖಲೆಗಳು, ಅಳವಡಿಕೆಯಾಗುವ ಟವರ್, ಫ್ರೀಕ್ವೆನ್ಸಿ, ತೂಕ (ಟನ್‌ಗಳಲ್ಲಿ) ಮಾಹಿತಿ ಒದಗಿಸಬೇಕು. ಜತೆಗೆ ಅಗ್ನಿಶಾಮಕ ದಳದಿಂದ ನಿರಾಕ್ಷೇಪಣ ಪತ್ರ, ಎಆರ್‌ಎಐನಿಂದ ವಿತರಿಸಿರುವ ದಾಖಲೆ ಪತ್ರ ಒದಗಿಸಬೇಕು.

ಈಗಾಗಲೇ ಅಳವಡಿಕೆಯಾಗಿರುವ ಟವರ್‌ಗಳು ಇವೆಲ್ಲಾ ಮಾಹಿತಿಯೊಂದಿಗೆ ಮೂರು ತಿಂಗಳ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕಿದ್ದರೂ ಇದ್ಯಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ. ಅನಧಿಕೃತ ಟವರ್ ನಿರ್ಮಾಣ ಎಗ್ಗಿಲ್ಲದೆ ನಡೆಯಯತ್ತಿದ್ದರೂ ನಗರಸಭೆಯ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ಕುಳಿತಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.

ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್ 

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ಮಾಡಿ

Published On - 12:48 pm, Thu, 29 December 22

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು