ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗಿಲ್ಲ ಸರ್ಕಾರದ ಸ್ಪಂದನೆ: ಉಪ ಜೀವನಕ್ಕಾಗಿ ಶಿಕ್ಷಕರ ಪರದಾಟ
ಶೇಕಡ 80 ರಷ್ಟು ಪಿಯುಸಿ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿವೆ. ಆದರೆ ಬೀದರ್ ಜಿಲ್ಲೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ. ಪ್ರಮುಖ ವಿಷಯಗಳಿಗೆ ಉಪನ್ಯಾಸಕರಿಲ್ಲದ್ದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಭಾರೀ ಹೊಡೆತ ಬಿಳುತ್ತಿದ್ದು, ಅಥಿತಿ ಉಪನ್ಯಾಸಕರನ್ನ ಸರಿಯಾದ ಸಮಯಕ್ಕೆ ತುಂಬಿಕೊಳ್ಳದಿರುವುದರಿಂದ ನೂರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಸರಕಾರ ಚೆಲ್ಲಾಟವಾಡುತ್ತಿದೆ.
ಬೀದರ್, ಆಗಸ್ಟ್ 30: ಶೇಕಡ 80 ರಷ್ಟು ಪಿಯುಸಿ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ (guest lecturers) ನಡೆಯುತ್ತಿವೆ. ಕಡಿಮೆ ಸಂಬಳದಲ್ಲಿ ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಮಾಡುತ್ತಿದ್ದಾರೆ. ಆದರೆ ಅತಿಥಿ ಉಪನ್ಯಾಸಕರಿಗೆ ಅಭದ್ರತೆ ಕಾಡತೊಡಗಿದ್ದು ಪಿಎಚ್ಡಿ, ಡಾಕ್ಟರೇಟ್ ಪದವಿ ಪಡೆದುಕೊಂಡು ಕುಟುಂಬದ ನಿರ್ವಹಣೆಗೆ ಪರದಾಡುವಂತಾಗಿದೆ. ಅತಿಥಿ ಉಪನ್ಯಾಸಕರು ಇವರು ಸರಕಾದ ದುಡ್ಡನ್ನ ಉಳಿಸಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಬೋಧನೆಯನ್ನ ಮಾಡುತ್ತಿದ್ದು ಇವರ ಜೀವ ನೀರಿ ಮೇಲಿನ ಗುಳ್ಳಿಯಂತಾಗಿದೆ.
ಹೌದು ರಾಜ್ಯದಲ್ಲಿ 425 ಸರಕಾರಿ ಪ್ರಥಮ ದರ್ಜೇ ಕಾಲೇಜುಗಳಿದ್ದು, ಒಟ್ಟಾರೆ 12 ನೂರುಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಡಿಮೆ ಸಂಬಳದಲ್ಲಿ ಕಾಲೇಜು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದಾರೆ. ಪ್ರಥಮ ದರ್ಜೆಯ ಕಾಲೇಜಿನ ಕಾಯಂ ಉಪನ್ಯಾಸಕರಿಗೆ ಇರುವ ಸಂಬಳದ ಮೂರು ಪಟ್ಟು ಕಡಿಮೆ ಸಂಬಳದಲ್ಲಿ ಅವರಷ್ಟೇ ಸಮಯವನ್ನ ಮಕ್ಕಳಿಗಾಗಿ ಮೀಸಲಿಡುತ್ತಿದ್ದಾರೆ.
ಆದರೆ ಅವರಿಗೆ ಸಿಗಬೇಕಾದ ಸೇವಾ ಭದ್ರತೆ ಮಾತ್ರ ಸಿಗುತ್ತಿಲ್ಲ ಸರಕಾರ ಯಾವಾಗ ಬೇಕು ಆವಾಗ ಮಾತ್ರ ಅತಿಥಿ ಉಪನ್ಯಾಸಕರನ್ನ ನೇಮಕ ಮಾಡಿಕೊಂಡು ಒಂದು ವರ್ಷ ಆದಮೇಲೆ ಮತ್ತೆ ಸೇವೆಯಿಂದಾ ತೆಗೆಯುತ್ತಾರೆ. ನಂತರ ಆನ್ ಲೈನ್ ಅಪ್ಲಿಕೇಶನ್ ಹಾಕಿ ಮತ್ತೆ ಕಾಲೇಜಿಗೆ ಪಾಠ ಮಾಡಲು ಹೋಗಬೇಕಾದರೆ ನಾಲ್ಕೈದು ತಿಂಗಳು ಕಳೆಯುತ್ತದೆ ಆ ಸಮಯದಲ್ಲಿ ಅವರಿಗೆ ಸಂಬಳ ಇರುವುದಿಲ್ಲ, ಆವಾಗ ಕುಟುಂಬದ ನಿರ್ವಹಣೆ ಕಷ್ಟವಾಗುತ್ತಿದ್ದು ನಮಗೆ ಸೇವಾ ಭದ್ರತೆಕೊಡಿ ಎಂದು ಅತಿಥಿ ಉಪನ್ಯಾಸಕರು ಸರಕಾರಕ್ಕೆ ವಿನಂತಿಸುತ್ತಿದ್ದಾರೆ.
ಇದನ್ನೂ ಓದಿ: ಗಾಂಜಾ ಗ್ಯಾಂಗ್ನ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸ್ರು, ಬರೋಬ್ಬರಿ 1.18 ಕೋಟಿ ರೂ. ಮೌಲ್ಯದ ಗಾಂಜಾ ವಶಕ್ಕೆ
ಪ್ರತಿವರ್ಷವೂ ಕೂಡಾ ಅತಿಥಿ ಉಪನ್ಯಾಸರಕ್ಕ ಸರಕಾರ ನೇಮಕ ಮಾಡುತ್ತದೆ ಪ್ರತಿ ವರ್ಷವೂ ಕೂಡಾ ಅತಿಥಿ ಉಪನ್ಯಾಸಕರನ್ನ ರೀಲಿವ್ ಮಾಡುತ್ತದೆ ಆದರೆ ನಮಗೆ ಯಾವುದೆ ರೀತಿಯ ಸೇವಾ ಭದ್ರತೆಯಿಲ್ಲಾ ಕಳೆದ ಮೂವತ್ತು ನಲವತ್ತು ವರ್ಷದಿಂದ ಅತಿಥಿ ಉಪನ್ಯಾಸಕರಾಗಿ ಸೇವಾ ಭದ್ರತೆಯಿಲ್ಲದೆ ಕೆಲಸವನ್ನ ಮಾಡಿಕೊಂಡು ಬಂದಿದ್ದೇವೆ ಆದರೆ ಯಾವ ಸಕರಾರವೂ ಕೂಡಾ ನಮಗೆ ಸೇವಾ ಭದ್ರತೆಯನ್ನ ಕೊಡುತ್ತಿಲ್ಲ ಎಂದು ಅತಿಥಿ ಉಪನ್ಯಾಸಕರು ತನ್ನ ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.
ಬೀದರ್ ಜಿಲ್ಲೆಯಲ್ಲಿ 10 ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ 340 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಯಾವುದೆ ರೀತಿಯ ರಜೆಗಳಿಲ್ಲ, ಮಹಿಳೆಯರಿಗೆ ಹೆರಿಗೆ ರಜೆಯೂ ಇಲ್ಲಾ, ಇನ್ನೂ ಪ್ರತಿ ತಿಂಗಳು ಕೂಡಾ ನಮಗೆ ಸಂಬಳ ಆಗುತ್ತಿಲ್ಲ. ಈ ಸಲ ಮೂರು ತಿಂಗಳ ಬಳಿಕೆ ಸಂಬಳವಾಗಿದೆ, ಇನ್ನೂ ಅಕ್ಕಪಕ್ಕದ ರಾಜ್ಯದಲ್ಲಿ ನಾಲ್ಕೈದು ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರೆ ಅವರನ್ನ ಕಾಯಂ ಮಾಡುತ್ತದೆ ಆದರೆ ನಮ್ಮ ರಾಜ್ಯದಲ್ಲಿ ಇಪತ್ತು ಮೂವತ್ತು ವರ್ಷದಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು ನಮಗೆ ಕಾಯಂ ಮಾಡುತ್ತಿಲ್ಲ. ಈ ಬಗ್ಗೆ ನಾವು ಸರಕಾರಕ್ಕೆ ಪ್ರಶ್ನೇ ಮಾಡಿದರೆ ಅತಿಥಿ ಉಪನ್ಯಾಸಕರನ್ನ ಕಾಯಂ ಗೊಳಿಸಲು ಕಾನೂನಿನಲ್ಲಿ ಅವಕಾಶ ಇಲ್ಲಾ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: Bidar Fort: ಬೀದರ್ ಕೋಟೆ ಮೇಲೆ ಗಿಡ-ಗಂಟಿಗಳ ಆಕ್ರಮಣ; ಕೋಟೆ ಶಿಥಿಲಗೊಳ್ಳುವ ಆತಂಕದಲ್ಲಿ ಜನ
ಇದು ಯಾವ ನ್ಯಾ ಎಂದು ಅತಿಥಿ ಉಪನ್ಯಾಕರು ಪ್ರಶ್ನಿಸುತ್ತಿದ್ದಾರೆ. ನಮಗೂ ಕುಟುಂಬಗಳಿವೆ ಮಕ್ಕಳಿದ್ದಾರೆ ನಮ್ಮ ಸಮಸ್ಯೆಯನ್ನ ಅರಿತು ನಮ್ಮನ್ನ ಕಾಯಂ ಮಾಡಿ ಐದಾರು ವರ್ಷದಲ್ಲಿ ನಿವೃತ್ತಿ ಹೊಂದಲಿದ್ದೇವೆ ಪಿಎಚ್ ಡಿ, ಡಾಕ್ಟರೇಟ್ ಪದವಿ ಪಡೆದುಕೊಂಡು ಕುಟುಂಬದ ನಿರ್ವಹಣೆಗೆ ಪರದಾಡುವಂತಾಗಿದ್ದು ನಮ್ಮ ಸಮಸ್ಯೆಯನ್ನ ಕೇಳಿ ಎಂದು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಖಾಯಂ ಉಪನ್ಯಾಸಕರ ಕೊರೆತೆಯಿಂದ ಬೀದರ್ ಜಿಲ್ಲೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ. ಪ್ರಮುಖ ವಿಷಯಗಳಿಗೆ ಉಪನ್ಯಾಸಕರಿಲ್ಲದ್ದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಭಾರೀ ಹೊಡೆತ ಬಿಳುತ್ತಿದ್ದು ಅಥಿತಿ ಉಪನ್ಯಾಸಕರನ್ನ ಸರಿಯಾದ ಸಮಯಕ್ಕೆ ತುಂಬಿಕೊಳ್ಳದಿರುವುದರಿಂದ ನೂರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಸರಕಾರ ಚೆಲ್ಲಾಟವಾಡುತ್ತಿದೆ. ಇಂಥಹ ಪರಿಸ್ಥಿಯಲ್ಲಿ ಕಾಲೇಜು ಆರಂಭವಾಗಿ 3 ತಿಂಗಳು 2 ತಿಂಗಳು ತಡವಾಗಿ ಅತಿಥಿ ಉನ್ಯಾಸಕರ ಸರಕಾರ ನೇಮಕ ಮಾಡುತ್ತದೆ ಈ ವಿಳಂಬ ನೀತಿ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾಗಿದಂತೂ ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:58 pm, Wed, 30 August 23