ಕ್ಷೇತ್ರದ ಜನತೆಗೆ ಭಗವಂತ ಖೂಬಾ ದೀಪಾವಳಿ ಗಿಫ್ಟ್: ಬೀದರ್ To ತಿರುಪತಿಗೆ ಹೊಸ ರೈಲು, ಇಲ್ಲಿದೆ ವೇಳಾಪಟ್ಟಿ
ರೇಲ್ವೆ ಸಚಿವಾಲಯ ಬೀದರ್ ಜನತೆಗೆ ದೀಪಾವಳಿಗೆ ಸಿಹಿ ಸುದ್ದಿ ನೀಡಿದೆ. ವಾಯಾ ಹುಮನಾಬಾದ ಮಾರ್ಗವಾಗಿ ತಿರುಪತಿಗೆ ಹೋಗಲು ವಿಶೇಷ ರೈಲು ಬಿಟ್ಟಿದೆ.
ಬೀದರ್: ಕೇಂದ್ರ ರೇಲ್ವೆ ಸಚಿವಾಲಯ ಬೀದರ್ ಜನತೆಗೆ ದೀಪಾವಳಿಗೆ ಸಿಹಿ ಸುದ್ದಿ ನೀಡಿದೆ. ವಾಯಾ ಹುಮನಾಬಾದ (Humnabad) ಮಾರ್ಗವಾಗಿ ತಿರುಪತಿಗೆ (Tirupati) ಹೋಗಲು ವಿಶೇಷ ರೈಲು ಬಿಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ (Bhagwanth Khuba) ” ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಕೊಡುಗೆ, ವಾಯಾ ಹುಮನಾಬಾದ ಮಾರ್ಗವಾಗಿ ತಿರುಪತಿಗೆ ವಿಶೇಷ ರೈಲು ಚಲಿಸುತ್ತಿದೆ ” ಎಂದು ಟ್ವೀಟ್ ಮಾಡಿದ್ದಾರೆ.
ಈ ವಿಶೇಷ ರೈಲು ಅಕ್ಟೋಬರ್ 30, ನವೆಂಬರ್ 6, 13, 20, 27 ಮತ್ತು ಡಿಸೆಂಬರ್ 4 ಒಟ್ಟು 6 ರವಿವಾರಗಳಂದು ಚಲಿಸಲಿದೆ. ಈ ವಿಶೇಷ ರೈಲು ಸಾಯಂಕಾಲ 7.05 ನಿಮಿಷಕ್ಕೆ ಭಾಲ್ಕಿಯಿಂದ ಹೊರಟು ಬೀದರಗೆ ಸಾ. 7.40 ನಿಮಿಷಕ್ಕೆ ತಲುಪಲಿದೆ. ಮುಂದೆ ಹುಮನಾಬಾದಗೆ ರಾತ್ರಿ. 8.50 ಗಂಟೆಗೆ ತಲುಪಿ ತಾಜಸುಲ್ತಾನಪೂರ, ಕಲಬುರಗಿ, ವಾಡಿ ಮೂಲಕ ಮರುದಿನ ಬೆಳಿಗ್ಗೆ 9:00 ಗಂಟಗೆ ತಿರುಪತಿ ತಲುಪಿಲಿದೆ.
ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಕೊಡುಗೆ, ವಾಯಾ ಹುಮನಾಬಾದ ಮಾರ್ಗವಾಗಿ ತಿರುಪತಿಗೆ ವಿಶೇಷ ರೈಲು ಚಲಿಸುತ್ತಿದೆ.
ಈ ವಿಶೇಷ ರೈಲು ಅಕ್ಟೋಬರ್ 30, ನವೆಂಬರ್ 6, 13, 20, 27 ಮತ್ತು ಡಿಸೆಂಬರ್ 4 ಒಟ್ಟು 6 ರವಿವಾರಗಳಂದು ಭಾಲ್ಕಿಗೆ ಸಾ. 7.05 ಗಂಟೆಗೆ, ಬೀದರಗೆ ಸಾ. 7.4೦ ಗಂಟೆಗೆ ಮತ್ತು ಹುಮನಾಬಾದಗೆ ರಾತ್ರಿ. 8.5೦ ಗಂಟೆಗೆ ತಲುಪಿ (1/4) pic.twitter.com/rVAZVjqwhR
— Bhagwanth Khuba (@bhagwantkhuba) October 26, 2022
ನಂತರ ನವೆಂಬರ್ 1,8,15,22,29 ಒಟ್ಟು 5 ಮಂಗಳವಾರದಂದು ತಿರುಪತಿಯಿಂದ ಸಾಯಂಕಾಲ 6:35 ನಿಮಿಷಕ್ಕೆ ಹೊರಟು ಬಂದ ಮಾರ್ಗವಾಗಿ ಮರುದಿನ ಬುಧವಾರ ಬೆ. 6:10 ಗಂಟೆಗೆ ಹುಮನಾಬಾದಗೆ, ಬೆಳಿಗ್ಗೆ 7:10 ನಿಮಿಷಕ್ಕೆ ಬೀದರ್ಗೆ ತಲುಪಲಿದೆ. ಅಲ್ಲಿಂದ ಬೆಳಿಗ್ಗೆ 8:04 ನಿಮಿಷಕ್ಕೆ ಭಾಲ್ಕಿಗೆ ಬರಲಿದೆ. ಅಲ್ಲಿಂದ ಉದಗೀರ, ಲಾತೂರ ಮೂಲಕ ಸಾಯಂಕಾಲ 6:00 ಗಂಟೆಗೆ ಜಾಲನಾಗೆ ತಲುಪಲಿದೆ.
ಈ ವಿಶೇಷ ರೈಲಿನ ಮೂಲಕ ಸೋಮವಾರ ಬೆಳಿಗ್ಗೆ ತಿರುಪತಿಗೆ ತೆರಳುವ ಭಕ್ತರಿಗೆ ಸುಮಾರು 30 ಗಂಟೆಗಳ ಕಾಲಾವಕಾಶವಿದ್ದು, ಈ ಸಮಯದಲ್ಲಿ ದರ್ಶನ ಮುಗಿಸಿಕೊಂಡು ಮಂಗಳವಾರ ಸಾಯಂಕಾಲ ಇದೇ ರೈಲಿನ ಮೂಲಕ ಬೀದರಗೆ ಆಗಮಿಸಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:37 pm, Wed, 26 October 22