ಬಿಜೆಪಿ ಶಾಸಕರ ದೆಹಲಿ ಯಾತ್ರೆಗೆ ಯಡಿಯೂರಪ್ಪ ಆಕ್ಷೇಪ: ಭೇಟಿಗೆ ಸಮಯ ಕೊಡಬೇಡಿ ಎಂದು ಸಲಹೆ

ಕರ್ನಾಟಕದಿಂದ ಬರುವ ಶಾಸಕರ ಭೇಟಿಗೆ ದೆಹಲಿಯ ವರಿಷ್ಠರು ಸಮಯ ಕೊಡಬಾರದು ಎಂದು ಅವರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಒತ್ತಾಯಿಸಿದರು.

ಬಿಜೆಪಿ ಶಾಸಕರ ದೆಹಲಿ ಯಾತ್ರೆಗೆ ಯಡಿಯೂರಪ್ಪ ಆಕ್ಷೇಪ: ಭೇಟಿಗೆ ಸಮಯ ಕೊಡಬೇಡಿ ಎಂದು ಸಲಹೆ
ಬಿ.ಎಸ್​.ಯಡಿಯೂರಪ್ಪ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 18, 2021 | 11:24 PM

ದೆಹಲಿ: ಶಾಸಕರು ದೆಹಲಿ ಯಾತ್ರೆ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಆಗ್ರಹಿಸಿದರು. ಕರ್ನಾಟಕದಿಂದ ಬರುವ ಶಾಸಕರ ಭೇಟಿಗೆ ದೆಹಲಿಯ ವರಿಷ್ಠರು ಸಮಯ ಕೊಡಬಾರದು ಎಂದು ಅವರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಒತ್ತಾಯಿಸಿದರು.

ಕೆಲ ಶಾಸಕರು ಪದೇಪದೆ ದೆಹಲಿಗೆ ಹೋಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಂಥವರಿಗೆ ದೆಹಲಿ ಯಾತ್ರೆ ಮಾಡುವುದು ನಂತರ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುವುದು ರೂಢಿಯಾಗಿದೆ. ವರಿಷ್ಠರು ಇಂಥವರನ್ನು ಭೇಟಿಯಾಗಲು ನಿರಾಕರಿಸಿದರೆ ಈ ಗೊಂದಲ ತಾನಾಗಿಯೇ ನಿಲ್ಲುತ್ತದೆ ಎಂದು ಕೋರ್​​ ಕಮಿಟಿ ಸಭೆಯಲ್ಲಿ ಅರುಣ್​ ಸಿಂಗ್​ಗೆ ಯಡಿಯೂರಪ್ಪ ಆಗ್ರಹಿಸಿದರು. ಶಾಸಕರು ದೆಹಲಿ ಬರುವುದು ನನಗೂ ಗೊತ್ತಿದೆ. ಈ ಗೊಂಲದವನ್ನು ಸರಿ ಮಾಡ್ತೇವೆ ಎಂದು ಅರುಣ್ ಸಿಂಗ್ ಭರವಸೆ ನೀಡಿದರು.

ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಶಾಸಕರು ಬಹಿರಂಗ ಹೇಳಿಕೆ ನೀಡುವುದಕ್ಕೂ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಹೇಳಿಕೆಗಳ ವಿಚಾರವನ್ನು ಪಕ್ಷದ ವರಿಷ್ಠರ ಗಮನಕ್ಕೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತರಬೇಕು. ಬಹಿರಂಗ ಹೇಳಿಕೆಗಳಿಗೆ ತಕ್ಷಣವೇ ಕ್ರಮ ಆಗಬೇಕು. ನಿಗಮ-ಮಂಡಳಿ ನೇಮಕ ಕುರಿತು ಪರಿಶೀಲಿಸಬೇಕು. ಪಕ್ಷದ ಕಡೆಯಿಂದ ಎಷ್ಟು ನೇಮಕಾತಿ ಸಾಧ್ಯವೋ ಅಷ್ಟನ್ನೂ ಮಾಡಬೇಕು. ಕಾರ್ಯಕರ್ತರಿಗೆ ಅವಕಾಶಗಳು ಸಿಗುವಂತಾಗಲು ಪ್ರಯತ್ನಿಸಬೇಕು ಎಂಬ ವಿಚಾವೂ ಕೋರ್​ ಕಮಿಟಿ ಸಭೆಯಲ್ಲಿ ಚರ್ಚೆಗೆ ಬಂತು.

ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಹೇಳಿಕೆ ಸಹಿಸಲ್ಲ ಎಂದು ಬಿಜೆಪಿ ಕೇಂದ್ರ ಸಮಿತಿಯ ಕರ್ನಾಟಕ ಉಸ್ತುವಾರಿ ಅರುಣ್​ ಸಿಂಗ್ ಹೇಳಿದರು. ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದ ವಿರುದ್ಧ ಮಾತನಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನೀವು ಮಾತನಾಡುವುದರಿದ್ದರೆ ಪ್ರತಿಪಕ್ಷ ಕಾಂಗ್ರೆಸ್​, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡಿ. ಅದು ಬಿಟ್ಟು ಪಕ್ಷದ ವಿರುದ್ಧ ಮಾತನಾಡಿದರೆ ಶಿಸ್ತುಕ್ರಮ ಜರುಗಿಸಲಾಗುವ ಎಚ್ಚರಿಕೆ ನೀಡಿದ್ದೇನೆ ಎಂದು ಅರುಣ್ ಸಿಂಗ್ ಮಾಹಿತಿ ನೀಡಿದರು.

(BJP Core Committee Meeting BS Yediyurappa Angry over MLAs visiting Delhi All the time)

ಇದನ್ನೂ ಓದಿ: ಜೂನ್ 25 ರಂದು ಮತ್ತೆ ರಾಜ್ಯಕ್ಕೆ ಬರಲಿರುವ ಅರುಣ್ ಸಿಂಗ್; ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಭಾಗಿ

ಇದನ್ನೂ ಓದಿ: ಸಿಎಂ ಯಡಿಯೂರಪ್ಪ ನಾಯಕತ್ವದಲ್ಲಿ ಬದಲಾವಣೆ ಇಲ್ಲ; ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಸ್ಪಷ್ಟಪಡಿಸಿದ ಸಚಿವ ಆರ್ ಅಶೋಕ್

Published On - 11:23 pm, Fri, 18 June 21