ಅಶಿಸ್ತಿನಿಂದ ವರ್ತಿಸುವವರ ವಿರುದ್ಧ ಕ್ರಮ -ಯತ್ನಾಳ್ಗೆ ಪರೋಕ್ಷ ವಾರ್ನಿಂಗ್
ಬೆಂಗಳೂರು: ಉಪಚುನಾವಣೆಯ ಕಾವು ಏರುತ್ತಿರುವ ಮಧ್ಯದಲ್ಲಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಪಕ್ಷದ ಹೈ ಕಮಾಂಡ್ ಬದಲಿಸಲಿದೆ ಎಂದು ಹೇಳುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಮಾಜಿ ಮಂತ್ರಿಯಾಗಿದ್ದ ಮತ್ತು ಬಲಿಷ್ಠ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಯತ್ನಾಳ್ ಹೇಳಿಕೆಯನ್ನು ಉಪಚುನಾವಣೆಯಲ್ಲಿ ಬಳಸಿಕೊಂಡು ವಿರೋಧ ಪಕ್ಷಗಳು ತಮ್ಮ ಪಕ್ಷಕ್ಕೆ ಹಾನಿ ಮಾಡಬಹುದು ಎಂದು ಚಿಂತೆಗೊಳಗಾದ ಬಿಜೆಪಿ ಈಗ ತನ್ನ ನಿಲುವನ್ನ ಸ್ಪಷ್ಟಪಡಿಸಿದೆ. ಟ್ವಿಟರ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ […]

ಬೆಂಗಳೂರು: ಉಪಚುನಾವಣೆಯ ಕಾವು ಏರುತ್ತಿರುವ ಮಧ್ಯದಲ್ಲಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಪಕ್ಷದ ಹೈ ಕಮಾಂಡ್ ಬದಲಿಸಲಿದೆ ಎಂದು ಹೇಳುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ.
ಮಾಜಿ ಮಂತ್ರಿಯಾಗಿದ್ದ ಮತ್ತು ಬಲಿಷ್ಠ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಯತ್ನಾಳ್ ಹೇಳಿಕೆಯನ್ನು ಉಪಚುನಾವಣೆಯಲ್ಲಿ ಬಳಸಿಕೊಂಡು ವಿರೋಧ ಪಕ್ಷಗಳು ತಮ್ಮ ಪಕ್ಷಕ್ಕೆ ಹಾನಿ ಮಾಡಬಹುದು ಎಂದು ಚಿಂತೆಗೊಳಗಾದ ಬಿಜೆಪಿ ಈಗ ತನ್ನ ನಿಲುವನ್ನ ಸ್ಪಷ್ಟಪಡಿಸಿದೆ. ಟ್ವಿಟರ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇನ್ನು ಮೂರು ವರ್ಷಗಳ ಕಾಲ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಹಾಗೂ ಅಶಿಸ್ತಿನಿಂದ ವರ್ತಿಸುವವರ ವಿರುದ್ಧ ಪಕ್ಷ ಕ್ರಮ ತೆಗೆದುಕೊಳ್ಳುತ್ತೆ ಎಂದು ಹೇಳುವ ಮೂಲಕ ಯತ್ನಾಳ್ಗೆ ಎಚ್ಚರಿಕೆ ನೀಡಿದ್ದಾರೆ.
ಹೀಗೆ ಹೇಳುವ ಮೂಲಕ ಪಕ್ಷದ ಹೈಕಮಾಂಡ್, ಯಡಿಯೂರಪ್ಪ ವಿರುದ್ಧ ಸಾರ್ವಜನಿಕವಾಗಿ ಮುಜುಗರ ಉಂಟು ಮಾಡಲು ಪ್ರಯತ್ನಿಸುವ ಯತ್ನಾಳ್ ಮತ್ತು ಬೇರೆ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.



