ದಂಡ ಕಟ್ಟಲ್ಲ ಅಂದಿದ್ದಕ್ಕೆ.. ಬೈಕ್ ಸವಾರನ ಮೇಲೆ ರಕ್ತ ಬರುವ ಹಾಗೆ ಪೊಲೀಸರಿಂದ ಹಲ್ಲೆ?
ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಹೆಲ್ಮೆಟ್ ಧರಿಸದ ಬೈಕ್ ಸವಾರನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಬಂದಿದೆ. ಹಲ್ಲೆಗೊಳಗಾದ ಬೈಕ್ ಸವಾರ ಮಲ್ಲೇಶ್ನನ್ನು ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಲ್ಮೆಟ್ ಧರಿಸದ ಮಲ್ಲೇಶ್ನನ್ನು ಹಿಡಿದ ಕೊಳ್ಳೇಗಾಲ ಪಟ್ಟಣದ ಪೊಲೀಸರು ದಂಡ ಕಟ್ಟಲು ಹೇಳಿದ್ದರಂತೆ. ದಂಡ ಕಟ್ಟಲು ಮಲ್ಲೇಶ್ ಒಪ್ಪದಿದ್ದಕ್ಕೆ ಪೊಲೀಸರು ಮತ್ತು ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆಯಂತೆ. ಈ ವೇಳೆ ಪೊಲೀಸರು ಯುವಕನ ಮುಖಕ್ಕೆ ಗುದ್ದಿ ರಕ್ತ ಬರುವ ಹಾಗೆ ಹಲ್ಲೆ […]

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಹೆಲ್ಮೆಟ್ ಧರಿಸದ ಬೈಕ್ ಸವಾರನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಬಂದಿದೆ. ಹಲ್ಲೆಗೊಳಗಾದ ಬೈಕ್ ಸವಾರ ಮಲ್ಲೇಶ್ನನ್ನು ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೆಲ್ಮೆಟ್ ಧರಿಸದ ಮಲ್ಲೇಶ್ನನ್ನು ಹಿಡಿದ ಕೊಳ್ಳೇಗಾಲ ಪಟ್ಟಣದ ಪೊಲೀಸರು ದಂಡ ಕಟ್ಟಲು ಹೇಳಿದ್ದರಂತೆ. ದಂಡ ಕಟ್ಟಲು ಮಲ್ಲೇಶ್ ಒಪ್ಪದಿದ್ದಕ್ಕೆ ಪೊಲೀಸರು ಮತ್ತು ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆಯಂತೆ. ಈ ವೇಳೆ ಪೊಲೀಸರು ಯುವಕನ ಮುಖಕ್ಕೆ ಗುದ್ದಿ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಹಲ್ಲೆಗೊಳಗಾಗಿದ್ದ ಮಲ್ಲೇಶ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ, ಆತನ ಮೇಲೆ ಹಲ್ಲೆಯನ್ನು ಖಂಡಿಸಿದ ಸಾರ್ವಜನಿಕರು ಪಟ್ಟಣ ಠಾಣೆ ಎದುರು ಪ್ರತಿಭಟಿಸಿದರು.