Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್​ ರಹಿತ ಪ್ರಯಾಣ, ಮಹಿಳಾ ಸೀಟ್​ನಲ್ಲಿ ಕೂತಿದ್ದವರಿಂದ ದಂಡ: BMTCಯಿಂದ 19 ಲಕ್ಷಕ್ಕೂ ಹೆಚ್ಚು ವಸೂಲಿ

ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮತ್ತು ನಿರ್ವಾಹಕರ ಅವ್ಯವಹಾರಗಳಿಂದಾಗಿ 3 ತಿಂಗಳಲ್ಲಿ 19 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ. ಮಹಿಳಾ ಮೀಸಲು ಆಸನದಲ್ಲಿ ಕೂತರಿಗೂ ದಂಡ ವಿಧಿಸಲಾಗಿದೆ. ಅಲ್ಲದೇ 5268 ಪ್ರಕರಣಗಳಲ್ಲಿ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾಗಿದೆ. 

ಟಿಕೆಟ್​ ರಹಿತ ಪ್ರಯಾಣ, ಮಹಿಳಾ ಸೀಟ್​ನಲ್ಲಿ ಕೂತಿದ್ದವರಿಂದ ದಂಡ: BMTCಯಿಂದ 19 ಲಕ್ಷಕ್ಕೂ ಹೆಚ್ಚು ವಸೂಲಿ
ಟಿಕೆಟ್​ ರಹಿತ ಪ್ರಯಾಣ, ಮಹಿಳಾ ಸೀಟ್​ನಲ್ಲಿ ಕೂತಿದ್ದವರಿಂದ ದಂಡ: BMTCಯಿಂದ 19 ಲಕ್ಷಕ್ಕೂ ಹೆಚ್ಚು ವಸೂಲಿ
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on:Nov 28, 2024 | 3:06 PM

ಬೆಂಗಳೂರು, ನವೆಂಬರ್​ 28: ನಗರದಲ್ಲಿ ಬಿಎಂಟಿಸಿ (BMTC) ಬಸ್​ನಲ್ಲಿ ಟಿಕೆಟ್​ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಹಾಗಾಗಿ 3 ತಿಂಗಳಲ್ಲಿ ಟಿಕೆಟ್​ ರಹಿತ ಪ್ರಯಾಣಿಕರಿಂದ ಬರೋಬ್ಬರಿ 17 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ದಂಡ ವಸೂಲಿ ಜೊತೆಗೆ ನಿರ್ವಾಹಕರ ವಿರುದ್ಧ‌ವೂ ಬಿಎಂಟಿಸಿ ಸಂಸ್ಥೆ ಕೇಸ್ ದಾಖಲಿಸಿದೆ.

ಆಗಸ್ಟ್​, ಸೆಪ್ಟೆಂಬರ್​, ಅಕ್ಟೋಬರ್​​ನಲ್ಲಿ ಒಟ್ಟು 8,891‌ ಪ್ರಕರಣಗಳು ಪತ್ತೆ ಆಗಿದ್ದು, 57,219 ಟ್ರಿಪ್​ಗಳಲ್ಲಿ ತಪಾಸಣೆ ಮಾಡಿದ್ದು, ಆ ಪೈಕಿ 8,891 ಪ್ರಯಾಣಿಕರಿಂದ ದಂಡ ವಸೂಲಿ ಮಾಡಲಾಗಿದೆ. ಅಲ್ಲದೇ 5268 ಪ್ರಕರಣಗಳಲ್ಲಿ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಚಾಲಕರು, ನಿರ್ವಾಹಕರಿಗೆ ಸಿಹಿ ಸುದ್ದಿ ನೀಡಿದ ಬಿಎಂಟಿಸಿ ಅಧಿಕಾರಿಗಳು

ಅಷ್ಟೇ ಅಲ್ಲದೆ ಮಹಿಳೆಯರ ಮೀಸಲು ಸೀಟ್​ನಲ್ಲಿ ಕೂತು ಪ್ರಯಾಣಿಸುತ್ತಿದ್ದವರಿಗೂ ದಂಡ ವಿಧಿಸಲಾಗಿದ್ದು, ಒಟ್ಟು 1,17,800 ರೂ. ದಂಡ ಸಂಗ್ರಹಿಸಲಾಗಿದೆ. ಎರಡೂ ಪ್ರಕರಣಗಳಲ್ಲಿ ಒಟ್ಟು 19,13,830 ರೂ. ದಂಡ ವಸೂಲಿ ಮಾಡಲಾಗಿದೆ.

ಬಿಎಂಟಿಸಿ ಕಂಡಕ್ಟರ್​ಗಳ ವಿರುದ್ಧ ಪ್ರಯಾಣಿಕರಿಂದ ದೂರು

ಇನ್ನು ಬಿಎಂಟಿಸಿ ಕಂಡಕ್ಟರ್​ಗಳ ವಿರುದ್ಧ ಸಾಕಷ್ಟು ದೂರು ಬಂದಿವೆ. ಪ್ರಯಾಣಿಕರಿಗೆ ಚಿಲ್ಲರೆ ನೀಡದೆ ಕಂಡಕ್ಟರ್​ಗಳು ಯಾಮಾರಿತ್ತಿದ್ದಾರೆ ಎನ್ನಲಾಗುತ್ತಿದೆ. ಪ್ರಯಾಣಿಕರು ಟಿಕೆಟ್​ಗಾಗಿ ಹಣ ನೀಡಿದ ನಂತರ ಟಿಕೆಟ್ ನೀಡಿ ಉಳಿದ ಹಣವನ್ನು ಬಿಎಂಟಿಸಿ ಕಂಡಕ್ಟರ್​ಗಳು ವಾಪಸ್ಸು ನೀಡ್ತಿಲ್ವಂತೆ. ಪ್ರಯಾಣಿಕರು ಚಿಲ್ಲರೆ ಕೇಳಿದ್ರೆ ಕಂಡಕ್ಟರ್​ಗಳು ಜೋರು ಮಾಡ್ತಾರಂತೆ. ಅದ್ರಲ್ಲೂ ಕನ್ನಡ ಬಾರದ ಪ್ರಯಾಣಿಕರಿಗೆ ಚಿಲ್ಲರೆ ನೀಡೋದೆ ಇಲ್ವಂತೆ. ಈ ಬಗ್ಗೆ ಪ್ರಯಾಣಿಕರು ಟ್ವಿಟ್ಟರ್ ಎಕ್ಸ್ ನಲ್ಲಿ ವಿಡಿಯೋ ಮಾಡಿ ಬಿಎಂಟಿಸಿಗೆ‌ ದೂರು ನೀಡ್ತಿದ್ದಾರೆ.‌ ಬಸ್ ನಂಬರ್​ ಸಮೇತ ಪ್ರಯಾಣಿಕರು ಬಿಎಂಟಿಸಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಕೆಎಸ್​​ಆರ್​ಟಿಸಿ, ಬಿಎಂಟಿಸಿ ನೌಕರರ ಮುಷ್ಕರಕ್ಕೆ ದಿನಾಂಕ ನಿಗದಿ: ಬಸ್ ಸಂಚಾರ ಬಂದ್ ಯಾವಾಗಿನಿಂದ ನೋಡಿ

ಕಳೆದ ಒಂದು ತಿಂಗಳಲ್ಲಿ ನೂರಕ್ಕೆ ಹೆಚ್ಚು ದೂರುಗಳು ದಾಖಲಾಗಿದೆ. ಮತ್ತೊಂದು ಬೇರೆ ಬೇರೆ ರಾಜ್ಯದ ಪ್ರಯಾಣಿಕರಿಗೆ ರಾಜ್ಯದ ಮಹಿಳಾ ಫ್ರೀ ಟಿಕೆಟ್​ಗಳನ್ನು ನೀಡಿರುವ ಬಗ್ಗೆ ದೂರುಗಳು ಬಂದಿದೆ. ಬಾಯಿ ತುಂಬಾ ಗುಟ್ಕ ಹಾಕಿಕೊಂಡು, ಕಿವಿಯಲ್ಲಿ ಹೆಡ್ ಫೋನ್ ಹಾಕ್ಕೊಂಡು ಡ್ಯೂಟಿ ಮಾಡ್ತಾರೆ ಪ್ರಯಾಣಿಕರ ಜೊತೆಗೆ ಸರಿಯಾಗಿ ಮಾತಾಡೋದಿಲ್ಲ ಇದರಿಂದ ಪ್ರಯಾಣಿಕರಿಗೆ ಕಿರಿಕಿರಿ ಆಗುತ್ತಿದೆಯಂತೆ. ಸರಿಯಾಗಿ ಬಸ್ ಸ್ಟಾಪ್ ನಲ್ಲಿ ಬಸ್ ನಿಲ್ಲಿಸೋದಿಲ್ವಂತೆ. ಬಸ್ ನಿಲ್ಲಿಸಿದ ಕಡೆ ಪ್ರಯಾಣಿಕರು ಇಳಿಯುವ ದುಸ್ಥಿತಿ ಎದುರಾಗಿದೆ ಎಂದು ಬಿಎಂಟಿಸಿ ಪ್ರಯಾಣಿಕರು ಶ್ರೀ ನಿವಾಸ್​ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:02 pm, Thu, 28 November 24