ಶೂಟೌಟ್​​​​​​ಗೆ ಪ್ರತೀಕಾರ: ಅರಣ್ಯಾಧಿಕಾರಿಗಳ ಹತ್ಯೆಗೆ ಶಿಬಿರ ಸ್ಫೋಟ ಬಳಿಕ ಸೋಲಾರ್ ಫೆನ್ಸಿಂಗ್ ಪುಡಿ-ಪುಡಿ

ಚಾಮರಾಜನಗದ ಹಾನೂರು ಅರಣ್ಯ ಅಧಿಕಾರಿಗಳ ಎನ್ ಕೌಂಟರ್ ಗೆ ಮೂವರು ಸಾವನ್ನಪ್ಪಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ನಡುವೆ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಹೌದು.. ಎನ್ ಕೌಂಟರ್ ಬಳಿಕ ಅರಣ್ಯ ಇಲಾಖೆಯನ್ನೇ ಕಾಡುಗಳ್ಳರು ಟಾರ್ಗೆಟ್ ಮಾಡಿದ್ದು, ತನಿಖೆ ವೇಳೆ ರಿವೀಲ್ ಆಗಿದೆ. ಆಗಸ್ಟ್ 15 ರ ಬಳಿಕ ನಡೆದ ಪ್ರತಿಭಟನೆಯ ದೊಡ್ಡ ಷಡ್ಯಂತ್ರವನ್ನ ಟಿವಿ9 ದಾಖಲೆ ನಮೇತ ಬಟಾಬಯಲು ಮಾಡಿದೆ.

ಶೂಟೌಟ್​​​​​​ಗೆ ಪ್ರತೀಕಾರ: ಅರಣ್ಯಾಧಿಕಾರಿಗಳ ಹತ್ಯೆಗೆ ಶಿಬಿರ ಸ್ಫೋಟ ಬಳಿಕ ಸೋಲಾರ್ ಫೆನ್ಸಿಂಗ್ ಪುಡಿ-ಪುಡಿ
Hanur Shoot Out
Edited By:

Updated on: Aug 22, 2026 | 6:02 PM

ಚಾಮರಾಜನಗರ, (ಆಗಸ್ಟ್ 22): ಹಾನೂರು ಎನ್ ಕೌಂಟರ್ ಪ್ರಕರಣ (Hanur Shootout Case) ಬಳಿಕ ಕಾಡುಗಳ್ಳರು, ಅರಣ್ಯ ಇಲಾಖೆಯನ್ನೇ (Forest Department)  ಟಾರ್ಗೆಟ್ ಮಾಡಿದ್ದು, ತನಿಖೆಯಲ್ಲಿ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಆಗಸ್ಟ್ 15ರ ಬಳಿಕ ನಡೆದ ಪ್ರತಿಭಟನೆಯ ದೊಡ್ಡ ಷಡ್ಯಂತ್ರವನ್ನ ಟಿವಿ9 ದಾಖಲೆ ನಮೇತ ಬಟಾಬಯಲು ಮಾಡಿದೆ. ಯಾವಾಗ ಅರಣ್ಯ ಅಧಿಕಾರಿಗಳ ಎನ್ ಕೌಂಟರ್ ಗೆ ಮೂವರು ಬಲಿಯಾದ್ರೋ ಅಂದಿನಿಂದ ಪಕ್ಕಾ ಪ್ರಿ ಪ್ಲಾನ್ ಮಾಡಿದ ದುಷ್ಕರ್ಮಿಗಳು, ಈಗ ಅರಣ್ಯ ಇಲಾಖೆಯನ್ನ ಟಾರ್ಗೆಟ್ ಮಾಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾಡಿನಿಂದ ನಾಡಿಗೆ ಕಾಡಾನೆ ಬರಬಾರದು ಎಂದು ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ಹಾಗೂ ತೋಮಿಯರ್ ಪಾಳ್ಯದಲ್ಲಿದ್ದ ಹಾಕಲಾಗಿದ್ದ ಸೋಲಾರ್ ಗೇಟ್ ಸೋಲಾರ್ ಫೆನ್ಸಿಂಗ್ ಹಾಗೂ ಸೋಲಾರ್ ತಂತಿಯನ್ನ ಧ್ವಂಸ ಮಾಡಿದ್ದಾರೆ.

ಎನ್ ಕೌಂಟರ್ ಆದ ಬಳಿಕ ಮೃತನ ಕುಟುಂಬಸ್ಥರು ಗ್ರಾಮಸ್ಥರು ಎಲ್ಲ ಹನೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸ್ಥಯಿದ್ರು ಈ ವೇಳೆ ಅರಣ್ಯ ಇಲಾಖೆಯನ್ನ ಟಾರ್ಗೆಟ್ ಮಾಡಿದ್ದ 30 ಕ್ಕೂ ಹೆಚ್ಚು ಕಾಡುಗಳ್ಳರು 5 ಲೋಕೇಷನ್ ನಲ್ಲಿ ಪ್ರತಿಭಟನಾಕಾರರನ್ನ ಕುಮ್ಮಕ್ಕು ನೀಡಿ. ಅರಣ್ಯ ಇಲಾಖೆ ವಿರುದ್ದ ತಿರುಗಿ ಬೀಳುವಂತೆ ಮಾಡಿದ್ರು. ಪಚ್ಚೆದೊಡ್ಡಿ ಗ್ರಾಮದ ಗೋವಿಂದ ಅಲಿಯಾಸ್ ಮರಿ ವೀರಪ್ಪನ್ ಅರಣ್ಯ ಇಲಾಖೆ ಕಚೇರಿಗೆ ನುಗ್ಗೋಣ ಬನ್ನಿ ಅಂತ ರೊಚ್ಚಿಗೆಬ್ಬಿಸಿದ್ರೆ ರಾಬರ್ಟ್ ಪಿಂಟೊ ಪೆರಿಯನಾಯಗನ್ ರೈತ ಸಂಘಟನೆಯವರ ಜೊತೆಗೂಡಿ ಅರಣ್ಯ ಇಲಾಖೆ ವಿರುದ್ದ ಷಡ್ಯಂತ್ರ ಮಾಡಿದ್ದು ಈಗ ತನಿಖೆ ವೇಳೆ ರಿವೀಲ್ ಆಗಿದೆ.

ಇದನ್ನೂ ಓದಿ: ಹನೂರು ಫೈರಿಂಗ್​​ ಪ್ರಕರಣ: ಧರಣಿ ನಿರತರಿಗೆ ಪ್ರಚೋದನೆ ನೀಡಿದ್ದು ಮರಿ ವೀರಪ್ಪನ್​​!; ವಿಡಿಯೋ ವೈರಲ್​​

ಈ ರಾರ್ಬಟ್ ಪಿಂಟೊ ಮೇಲೆ ಕೇವಲ ಕರ್ನಾಟಕ ಅಷ್ಟೇ ಅಲ್ಲದೆ ತಮಿಳುನಾಡಿನ ಅರಣ್ಯ ಇಲಾಖೆಯಲ್ಲು ಈ ದುಷ್ಕರ್ಮಿಯ ವಿರುದ್ದ ಪ್ರಕರಣಗಳು ಇರುವುದು ಈ ರಿವೀಲ್ ಆಗಿದೆ.
Chamarajanagara Shootout Case: ಅರಣ್ಯಾಧಿಕಾರಿಗಳ ಹತ್ಯೆಗೆ ಶಿಬಿರ ಸ್ಫೋಟ ಬಳಿಕ ಸೋಲಾರ್ ಫೆನ್ಸಿಂಗ್ ಪುಡಿಪುಡಿ
ಅದೇನೆ ಹೇಳಿ ಆಫ್ಟರ್ ಎನ್ ಕೌಂಟರ್ ಅರಣ್ಯ ಇಲಾಖೆ ಸಿಬ್ಬಂದಿ ಕಚೇರಿ ಹಾಗೂ ಕಳ್ಳಬೇಟೆ ತಡೆ ಶಿಬಿರಗಳೇ ಟಾರ್ಗೆಟ್ ಆಗಿರುವುದು ಈಗ ಬಟಾ ಬಯಲಾಗಿದೆ. ಇವರನ್ನ ಹೀಗೆ ಬಿಟ್ರೆ ಮುಂದೆ ದೊಡ್ಡ ಅನಾಹುತವಂತು ಕಟ್ಟಿಟ್ಟ ಬುತ್ತಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Sat, 22 August 26

Loading...
Unable to load recommendations.
Follow Us