AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು ಉತ್ಪಾದಕರಿಗೆ ಚಾಮುಲ್ ದೀಪಾವಳಿ ಗಿಫ್ಟ್, ಪ್ರತಿ ಲೀಟರ್ ಹಾಲಿಗೆ 2ರೂ. ಹೆಚ್ಚಳ

ರಾಸುಗಳಿಗೆ ಚರ್ಮಗಂಟು ರೋಗದಿಂದ ಹಾಲಿನ ಇಳುವರಿ ಕುಂಠಿತವಾಗಿತ್ತು. ಹಾಗಾಗಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ದರ ಹೆಚ್ಚಳ ಮಾಡಲಾಗಿದೆ ಎಂದು ಚಾಮುಲ್ ಅಧ್ಯಕ್ಷ ವೈಸಿ ನಾಗೇಂದ್ರ ಮಾಹಿತಿ ನೀಡಿದರು.

ಹಾಲು ಉತ್ಪಾದಕರಿಗೆ ಚಾಮುಲ್ ದೀಪಾವಳಿ ಗಿಫ್ಟ್, ಪ್ರತಿ ಲೀಟರ್ ಹಾಲಿಗೆ 2ರೂ. ಹೆಚ್ಚಳ
milk milk
TV9 Web
| Edited By: |

Updated on:Oct 20, 2022 | 4:53 PM

Share

ಚಾಮರಾಜ‌ನಗರ: ಚಾಮರಾಜ‌ಗರ ಜಿಲ್ಲಾ ಹಾಲು (milk) ಉತ್ಪಾದಕರಿಗೆ ಚಾಮುಲ್ ದೀಪಾವಳಿ (Chamul Diwali) ಕೊಡುಗೆ ನೀಡಿದ್ದು, ಹಾಲು ಉತ್ಪದಾಕರಿಗೆ ನಾಳೆಯಿಂದ ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಪ್ರತಿ ಲೀಟರ್​ ಹಾಲಿಗೆ ರೂ. 26.85 ನೀಡಲಾಗುತಿತ್ತು. ನಾಳೆಯಿಂದ ಲೀಟರ್ ಹಾಲಿಗೆ 28.85 ನೀಡಿ ಖರೀದಿ ಮಾಡಲಾಗುತ್ತಿದೆ. ರಾಸುಗಳಿಗೆ ಚರ್ಮಗಂಟು ರೋಗದಿಂದ ಹಾಲಿನ ಇಳುವರಿ ಕುಂಠಿತವಾಗಿತ್ತು. ಹಾಗಾಗಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ದರ ಹೆಚ್ಚಳ ಮಾಡಲಾಗಿದೆ ಎಂದು ಚಾಮುಲ್ ಅಧ್ಯಕ್ಷ ವೈಸಿ ನಾಗೇಂದ್ರ ಮಾಹಿತಿ ನೀಡಿದರು.

ಹಾಲಿನ ದರ ಹೆಚ್ಚಿಸುವಂತೆ ಉತ್ಪಾದಕರ ಸಂಘಗಳು ಮನವಿ 

ಬೆಂಗಳೂರು: ಹಾಲಿನ ದರ ಹೆಚ್ಚಿಸಬೇಕೆಂದು 14 ಹಾಲು ಉತ್ಪಾದಕರ ಸಂಘಗಳು ಮನವಿ ಮಾಡಿದ್ದು, ದರ ಹೆಚ್ಚಿಸಿದರೆ ರೈತರಿಗೆ ಹಣ ನೀಡುವುದಾಗಿ ಉತ್ಪಾದಕ ಸಂಘಗಳು ಹೇಳಿವೆ ಎಂದು ವಿಧಾನಸೌಧದಲ್ಲಿ ರಾಜ್ಯ ಸಹಕಾರ ಸಚಿವ ಎಸ್​.ಟಿ.ಸೋಮಶೇಖರ್ ನಿನ್ನೆ (ಅ. 19)​ ಹೇಳಿದ್ದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಗ್ರಾಹಕರು ಹಾಲಿನ ದರ ಹೆಚ್ಚಿಸಬೇಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದ್ದರು.

ಎಷ್ಟು ದರ ಹೆಚ್ಚಳವಾಗಿದೆ

ಪ್ರತಿ ಉತ್ಪನ್ನದ ಮೇಲೆ ಸರಾಸರಿ ₹ 1ರಂದ ₹ 3ರವರೆಗೆ ಬೆಲೆ ಹೆಚ್ಚಾಗಿದೆ. ಈ ಮೊದಲು ಲೀಟರ್​ ಮೊಸರಿಗೆ ₹ 43 ಇತ್ತು. ಜುಲೈ 18 ರಿಂದ ಅದು ₹ 46 ಆಗಿದೆ. ಅರ್ಧ ಲೀಟರ್ ಮೊಸರಿನ ಬೆಲೆ ₹ 22 ಇತ್ತು. ಜುಲೈ 18 ರಿಂದ ₹ 24 ಆಗಿದೆ. 200 ಎಂಎಲ್ ಮಜ್ಜಿಗೆ ಹಾಗೂ ಲಸ್ಸಿ ಮೇಲೆ ₹ 1 ಹೆಚ್ಚಳವಾಗಿದೆ. ಪಾಕೆಟ್​ಗಳ ಮೇಲೆ ಹಳೆಯ ದರಗಳೇ ನಮೂದಾಗಿರುತ್ತವೆ. ಆದರೆ ಗ್ರಾಹಕರು ಹೊಸದಾಗಿ ನಿಗದಿಪಡಿಸಿರುವಷ್ಟು ದರ ನೀಡಿ ಖರೀದಿಸಬೇಕು ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿತ್ತು.

ನವೆಂಬರ್​ನಲ್ಲಿ ಸಹಕಾರ ಸಪ್ತಾಹ

ಸಹಕಾರ ಸಪ್ತಾಹವನನ್ನು ಪ್ರತಿ ವರ್ಷದಂತೆ ಈ ವರ್ಷವು ಆಚರಣೆ ಮಾಡಲು ನಿರ್ಧರಿಸಲಾಗಿದೆ. ನವೆಂಬರ್ 14 ರಿಂದ 20ರ ವರೆಗೆ ಕಲ್ಬುರ್ಗಿಯಲ್ಲಿ 69ನೇ ಸಹಕಾರ ಸಪ್ತಾಹ ನಡೆಯಲಿದೆ. ಈ ಕಾರ್ಯಕ್ರಮವು 7 ಜಿಲ್ಲೆಗಳಲ್ಲಿ 7 ದಿನಗಳ ಕಾಲ ನಡೆಯಲಿದೆ. ಸಹಕಾರ ಸಪ್ತಾಹಕ್ಕೆ ಸಿಎಂ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಸಹಕಾರ ಸಪ್ತಾಹಕ್ಕೆ ಪಕ್ಷಾತೀತವಾಗಿ ಎಲ್ಲಾ ಮುಖಂಡರಿಗೂ ಆಹ್ವಾನ ನೀಡಲಾಗುತ್ತದೆ ಎಂದರು.

ಈ ಹಿಂದೆ ಕೇಂದ್ರ ಸರ್ಕಾರ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಶೇ 5ರಷ್ಟು ಸರಕು ಸೇವಾ ಸುಂಕ (GST) ವಿಧಿಸಿತ್ತು. ಇದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗಿವೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಈಗ ಹಾಲು ಉತ್ಪಾದಕರ ಸಂಘಗಳು ಹಾಲಿನ ದರ ಏರಿಸುವಂತೆ ಮನವಿ ಮಾಡಿದ್ದು, ಇದರಿಂದ ಜನರಿಗೆ ತೀರ್ವ ಸಂಕಷ್ಟ ಎದುರಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:28 pm, Thu, 20 October 22

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ