ಬೇಲಿಯೇ ಎದ್ದು ಹೊಲ ಮೇಯ್ದಂತೆ: ಮಗನನ್ನು ಪಾಸ್ ಮಾಡಿಸಲು ಹೆಡ್ಮಾಸ್ಟರ್ನಿಂದಲೇ ಚೀಟಿಂಗ್
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಪ್ರೌಢಶಾಲೆ ಮುಖ್ಯ ಶಿಕ್ಷಕರಿಂದಲೇ ಪರೀಕ್ಷಾ ನಿಯಮ ಉಲ್ಲಂಘಿಸಿರುವಂತಹ ಘಟನೆ ನಡೆದಿದೆ. ಮಗನನ್ನು ಪಾಸ್ ಮಾಡಿಸಲು ಮುಖ್ಯ ಶಿಕ್ಷಕರಿಂದಲೇ ಚೀಟಿಂಗ್ ಮಾಡಲಾಗಿದೆ. ಅಕ್ರಮದ ವಿಚಾರದ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಅಪರ ಆಯುಕ್ತರಿಗೆ ಶಿವರಾಜ್ ಪತ್ರ ಬರೆದಿದ್ದಾರೆ.
ಯಾದಗಿರಿ, ಆಗಸ್ಟ್ 26: ಮಗನನ್ನು ಪಾಸ್ ಮಾಡಿಸಲು ಹೆಡ್ ಮಾಸ್ಟರ್ (headmaster) ಪರೀಕ್ಷಾ ನಿಯಮವನ್ನು ಉಲ್ಲಂಘಿಸಿರುವಂತಹ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಪ್ರೌಢಶಾಲೆ ನಡೆದಿದೆ. ಗುರುಬಸಪ್ಪ ಪರೀಕ್ಷಾ ನಿಯಮವನ್ನು ಉಲ್ಲಂಘಿಸಿರುವ ಮುಖ್ಯ ಶಿಕ್ಷಕ. ಮಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 2 ಬಾರಿ ಫೇಲ್ ಆಗಿದ್ದ. 3ನೇ ಬಾರಿಗೆ ಮತ್ತೆ ಪರೀಕ್ಷೆ ಬರೆಯುತ್ತಿದ್ದ. ಪರೀಕ್ಷಾ ಚೀಫ್ ಸುಪರಿಂಟೆಂಡೆಂಟ್ ಆಗಿದ್ದ ಶಿವರಾಜ್ಗೆ ಕರೆ ಮಾಡಿ ಅಕ್ರಮಕ್ಕೆ ಸಹಕರಿಸಿ ಎಂದು ಹೆಡ್ಮಾಸ್ಟರ್ ಹೇಳಿದ್ದಾರೆ.
ಆ.2ರಿಂದ 8ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ-3 ನಡೆದಿತ್ತು. ನಿಮ್ಮ ದಯೆಯಿಂದ ಪಾಸಾಗಲಿ ಎಂದು ಗುರುಬಸಪ್ಪ ಶಿವರಾಜ್ ಬಳಿ ಬೇಡಿಕೊಂಡಿದ್ದರು. ಜೊತೆಗೆ ಗಣಿತ ವಿಷಯದ ಶಿಕ್ಷಕರು ಇದ್ದರೆ ನೋಡಿ ಎಂದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಗಣಿತದಲ್ಲಿ ಕಡಿಮೆ ಅಂಕ ಪಡೆದ ಎಂದು ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದ ಶಿಕ್ಷಕ
ಅಷ್ಟೇ ಅಲ್ಲದೆ ಬೇರೊಬ್ಬ ವಿದ್ಯಾರ್ಥಿ ಕೂರಿಸಿ ಪರೀಕ್ಷೆ ಬರೆಸೋಣ ಎಂದು ಒತ್ತಡ ಹೇರಿದ್ದಾರೆ. ಅಕ್ರಮದ ವಿಚಾರದ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಅಪರ ಆಯುಕ್ತರಿಗೆ ಶಿವರಾಜ್ ಪತ್ರ ಬರೆದಿದ್ದಾರೆ.
ಬಿಎಡ್ ಪರೀಕ್ಷೆಗಳಲ್ಲಿ ಸಾಮೂಹಿತಕ ನಕಲು
ವಿಜಯಪುರ: ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧೀನದಲ್ಲಿ ನಡೆಯುವ ಬಿಡಿ ಜತ್ತಿ ಕಾಲೇಜ್ ಆಫ್ ಎಜುಕೇಶನ್ನಲ್ಲಿ ಬಿಎಡ್ ಪರೀಕ್ಷೆಗಳು ಇತ್ತೀಚಿಗೆ ನಡೆದಿದ್ದವು. ಈ ವೇಳೆ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ಎಲ್ಲೆಡೆ ಕಂಡು ಬಂದಿತ್ತು. ಇಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಓಡಿಸ್ಸಾ ಮೂಲದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಿಎಡ್ ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು 84 ಪರೀಕ್ಷಾರ್ಥಿಗಳು ಪರೀಕ್ಷೆಗಳನ್ನು ಬರೆಯುತ್ತಿದ್ದು ಎಲ್ಲರೂ ಸಾಮೂಹಿಕ ನಕಲು ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ: ಬಸವಸಾಗರದಿಂದ ಕೃಷ್ಣಾಗೆ ನೀರು ರಿಲೀಸ್; ಎಚ್ಚರಿಕೆ ನೀಡಿದರೂ ಮೀನು ಹಿಡಿಯಲು ನೀರಿಗೆ ಇಳಿದ ಮೀನುಗಾರರು
ನಿತ್ಯ ತರಗತಿಗಳಿಗೆ ಹಾಜರಾಗಿ ಇಲ್ಲಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿಗಳು ಕೇವಲ ಪರೀಕ್ಷೆಗೆ ಮಾತ್ರ ಹಾಜರಾಗಿದ್ದರು. ಕ್ಲಾಸ್ಗೆ ಹಾಜರಾಗದೇ ಎಕ್ಸಾಂಗೆ ಮಾತ್ರ ಹಾಜರಾಗಿದ್ದ ಕಾರಣ ಇಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಾಮೂಹಿಕ ನಕಲು ಮಾಡಲು ಅವಕಾಶ ನೀಡಲಾಗಿತ್ತು ಎಂದು ಪರೀಕ್ಷಾ ಪರಿವೀಕ್ಷಕರು ಆರೋಪ ಮಾಡಿದ್ದರು. ಜುಲೈ 19 ರಿಂದಲೇ ಪರೀಕ್ಷೆಗಳು ನಡೆದಿದ್ದು ನಿತ್ಯ ನಕಲು ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದ ವಿಡಿಯೋ ಮೊಬೈಲ್ನಲ್ಲಿ ಸೆರೆಹಿಡಿಯಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.