Chicken And Egg Price: ಮಾಂಸ ಪ್ರಿಯರಿಗೆ ಬಿಗ್ ಶಾಕ್, ಚಿಕನ್-ಮೊಟ್ಟೆ ಬೆಲೆ ಏರಿಕೆ
ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಚಿಕನ್ ಹಾಗೂ ಮೊಟ್ಟೆ ದರದಲ್ಲಿ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಬೆಂಗಳೂರು: ವಿದ್ಯುತ್ ಬಿಲ್, ತರಕಾರಿ, ಪೆಟ್ರೋಲ್-ಡೀಸೆಲ್ ಸೇರಿದಂತೆ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರು ಕಂಗೆಟ್ಟಿದ್ದಾರೆ. ಇದರ ನಡುವೆ ಚಿಕನ್ ಹಾಗೂ ಮೊಟ್ಟೆ ದರ ಏರಿಕೆಯಾಗಿದ್ದು, ಮಾಂಸ್ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ. ಹೌದು..ಗರಿಷ್ಠ ತಾಪಮಾನ ಮತ್ತು ಹಿಟ್ ವೆವ್ಸ್ ಪರಿಣಾಮದಿಂದಾಗಿ ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಏರಿಕೆಯಾಗಿದೆ. ಕಳೆದೊಂದು ತಿಂಗಳಿನಿಂದ ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಗರಿಷ್ಠ ಏರಿಕೆ ಕಂಡಿದೆ. ಚಿಕನ್ ( ಬಾಯ್ಲರ್ ) ದರ ಕೆ.ಜಿ 200 ರಿಂದ 210 ರೂ.ಗೆ ಏರಿಕೆಯಾಗಿದೆ. ಸಮಾನ್ಯವಾಗಿ 110ರೂ.ರಿಂದ 120 ರೂ.ವರಗೆ ಇರುತ್ತಿತ್ತು. ಇನ್ನು ಫಾರಂ ಕೋಳಿ ಉತ್ಪದನೆಯ ದರವೇ 140 ರೂ. ಇದ್ದು ಗ್ರಾಹಕರಿಗೆ 180 ರೂ.ರಿಂದ 190 ರೂ.ಗೆ ಸಿಗುತ್ತಿದೆ. ಚಿಕನ್ ಮಾತ್ರವಲ್ಲದೇ ಮೊಟ್ಟೆ ಬೆಲೆ ಸಹ ಹಚ್ಚಳವಾಗಿದೆ.
ಇದನ್ನೂ ಓದಿ: ಮೀಟರ್ ರೀಡರ್ ಯಡವಟ್ಟು: ಏಳು ಲಕ್ಷ ರೂ. ಕರೆಂಟ್ ಬಿಲ್ ನೋಡಿ ಶಾಕ್ ಆದ ಮಂಗಳೂರಿನ ವ್ಯಕ್ತಿ
ತಾಪಮಾನದಿಂದ ಮೊಟ್ಟೆ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಬೇಡಿಕೆ ಜೊತೆ ಹಿಟ್ ವೆವ್ಸ್ ಹಾಗೂ ತಾಪಮಾನದಿಂದ ಮೊಟ್ಟೆ ದರ ಕೂಡ ಏರಿಕೆಯಾಗಿದೆ. ಸಾಮನ್ಯವಾಗಿ 5 ರೂಪಾಯಿ ಇದ್ದ ಒಂದು ಮೊಟ್ಟೆ ಬೆಲೆ ಈಗ 6.5 ರೂಪಾಯಿಗೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಇಲ್ಲಿಯವರೆಗೆ ಮೊಟ್ಟೆ ದರಲ್ಲಿ 1.15 ಪೈಸೆಯಷ್ಟು ಹೆಚ್ಚಳವಾಗಿದೆ.
ಮೊಟ್ಟೆ ಬೆಲೆ ಹೆಚ್ಚಳ ಮಾತ್ರವಲ್ಲದೇ ಉತ್ಪಾದಣೆಯಲ್ಲೂ ಸಹ ಕಡಿಮೆಯಾಗಿದೆ. ಮೊಟ್ಟೆ ರಾಜ್ಯದಲ್ಲಿ ನಿತ್ಯ 2.5 ಕೋಟಿ ಬೇಡಿಕೆ ಇದೆ. ಆದ್ರೆ, ಇದೀಗ 2 ಕೋಟಿಯಷ್ಟು ಮಾತ್ರ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಮೊಟ್ಟೆ ಬೇಡಿಕೆ ಇರುವುದರಿಂದ ಪಕ್ಕದ ರಾಜ್ಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಹೆಚ್ಚುವರಿ ಬರುತ್ತಿದೆ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿಯ ಅಧ್ಯಕ್ಷ ಕಾಂತರಾಜು ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ