Gladiolus – ಚಿಕ್ಕಬಳ್ಳಾಪುರ: ಕೈಹಿಡಿದ ಗ್ಲಾಡಿಯೋಲಸ್ ಎಂಬ ಸುರಸುಂದರಿ, ರೈತರ ಬಾಳು ಬಂಗಾರವಾಯ್ತು!

gladiolus: ಚಿಕ್ಕಬಳ್ಳಾಪುರದ ರೈತರು ಬೆಳೆದ ಗ್ಲ್ಯಾಡಿಯೋಲಸ್ ಹೂಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ಶ್ರೀಮಂತರ ಹೂ ಎಂದೆ ಖ್ಯಾತಿಯಾಗಿದೆ. ನಾಲ್ಕು ಹೂವಿನ ಒಂದೊಂದು ಗೊಂಚಲು ರೆಡಿ ಮಾಡುತ್ತಾರೆ. ನ್ಯೂಸ್ ಪೇಪರ್ ನಿಂದ ಹೂ ಗಳನ್ನು ಸುತ್ತಿ ಮಾರಾಟಕ್ಕೆ ಸನ್ನದ್ದಗೋಳಿಸುತ್ತಾರೆ.

Gladiolus - ಚಿಕ್ಕಬಳ್ಳಾಪುರ: ಕೈಹಿಡಿದ ಗ್ಲಾಡಿಯೋಲಸ್ ಎಂಬ ಸುರಸುಂದರಿ, ರೈತರ ಬಾಳು ಬಂಗಾರವಾಯ್ತು!
ಕೈಹಿಡಿದ ಗ್ಲಾಡಿಯೋಲಸ್ ಎಂಬ ಸುರಸುಂದರಿ, ರೈತರ ಬಾಳು ಬಂಗಾರವಾಯ್ತು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 18, 2023 | 1:13 PM

ಚಿಕ್ಕಬಳ್ಳಾಪುರ: ಆ ಜಿಲ್ಲೆಯ ರೈತರು (farmer) ಹೂ ಹಣ್ಣು ತರಕಾರಿಗಳು ಸೇರಿದಂತೆ ಸಾಂಪ್ರದಾಯಕ ಬೆಳೆಗಳನ್ನು ಬೆಳೆಯುತ್ತಿದ್ದರು. ಆದ್ರೆ ಮಾರುಕಟ್ಟೆಯಲ್ಲಿ ಧಾರಣೆ ಏರುಪೇರು ಆದಾಗ ಆಗುವ ನಷ್ಟವನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಈಗ ವಿನೂತನ ತಳಿಯ ಗ್ಲಾಡಿಯೋಲಸ್ ಎಂಬ ಸುಂದರ ಹೂ ಬೆಳೆಯಲು ಆರಂಭಿಸಿದ್ದಾರೆ. ಇದ್ರಿಂದ ಪ್ರತಿದಿನ ಜಣ ಜಣ ಕಾಂಚಣ ಎಣೆಸುವಂತಾಗಿದೆ. ಅಷ್ಟಕ್ಕೂ ಈ ಹೂವಿನ ವಿಶೇಷತೆಯಾದರೂ ಏನು ಅಂತಾ ಸವಿವರವಾಗಿ ನೋಡೋಣ. ಮದುವೆ ಮುಂಜಿ ಸಭೆ ಸಮಾರಂಭಗಳು ಸೇರಿದಂತೆ ಶುಭ ಕಾರ್ಯಗಳಲ್ಲಿ ಕಾಣಸಿಗುವ ಗ್ಲ್ಯಾಡಿಯೋಲಸ್ ಹೂ (gladiolus) ತನ್ನ ವಿಶೇಷತೆಯಿಂದ ಫೇಮಸ್. ಬಿಳಿ, ಕೆಂಪು ಪಿಂಕ್ ಸೇರಿದಂತೆ ವಿವಿಧ ಕಲರ್ ಗಳಲ್ಲಿ ಗ್ಲ್ಯಾಡಿಯೋಲಸ್ ಹೂ ಸಿಗುತ್ತೆ. ಮಾರುದ್ದ ಕಡ್ಡಿಯೊಂದಕ್ಕೆ ಸಿಂಗಾರ ಮಾಡಿ, ಕಡ್ಡಿಗೆ ಮುತ್ತು ಪೋಣಿಸಿದಂತೆ ಇರುತ್ತೆ. ಜೋಳದ ಕಡ್ಡಿಯ ರೀತಿ ಸಾಫ್ಟ್​​ ಆಗಿ ಇರುತ್ತೆ. ಒಂದಡಿಯಿಂದ ಎರಡು ಅಡಿಗಳಷ್ಟು ಉದ್ದ ಇರುತ್ತೆ. ಒಂದು ಬಾರಿ ಹೂ ಕಟಾವು (floriculture) ಮಾಡಿದರೆ ಕನಿಷ್ಠ ಒಂದು ವಾರ ಇಡಬಹುದು (success story).

ಗ್ಲ್ಯಾಡಿಯೋಲಸ್ ಎಲ್ಲಿ ಬೆಳೆಯಲಾಗುತ್ತೆ:

ಗ್ಲ್ಯಾಡಿಯೋಲಸ್ ಹೂ ಗಳನ್ನು ಚಿಕ್ಕಬಳ್ಳಾಪುರ (chikkaballapur) ತಾಲೂಕಿನ ಕತ್ತರಿಗುಪ್ಪೆ ಗ್ರಾಮದ ಸುತ್ತಮುತ್ತ ಊರುಗಳಲ್ಲಿ ಬೆಳೆಯಲಾಗುತ್ತುದೆ. ಒಂದು ಎಕೆರೆಯಿಂದ ಆರಂಭವಾದ ಹೂ ಗಳ ಬೆಳೆ ಈಗ ಸಾವಿರಾರು ಎಕರೆಗಳಲ್ಲಿ ಬೆಳೆಯಲಾಗ್ತಿದೆ. ಸಾವಿರಾರು ರೈತರು ಗ್ಲ್ಯಾಡಿಯೋಲಸ್ ಕೃಷಿಯಲ್ಲಿ ತೊಡಗಿದ್ದಾರೆ.

ಹೂ ಬೆಳೆಯುವುದು ತುಂಬ ಸುಲಭ:

ಎರಡು ರೀತಿಯ ಗಡ್ಡೆಗಳ ರೂಪದಲ್ಲಿ ಹೂವಿನ ಬೀಜಗಳು ದೊರೆಯುತ್ತವೆ. ಅದರಲ್ಲಿ ಒಂದು ರೀತಿಯ ಗಡ್ಡೆ ಮೂರು ತಿಂಗಳಿಗೆ, ಮತ್ತೊಂದು ಗಡ್ಡೆ ಆರು ತಿಂಗಳಿಗೆ ನಾಟಿ ಮಾಡಬಹುದು. ಈ ಗಡ್ಡೆಗಳಿಗಾಗಿ ರೈತರು ಬಂಡವಾಳ ಹಾಕಬೇಕು. ಗಡ್ಡೆ ಮೊಳಕೆ ಹೊಡೆದು ಹೂ ಬಿಡಲು ಮೂರು ತಿಂಗಳು ಇಲ್ಲಾ ಆರು ತಿಂಗಳು ಆಗುತ್ತೆ. ಡಿಎಪಿ ಹೊಂಗೆ ಹಿಂಡಿ ಬೇವಿನ ಹಿಂಡಿ ಯಥೇಚ್ಛವಾಗಿ ಹಾಕಿದರೆ ಇಳುವರಿ ಚೆನ್ನಾಗಿ ಬರುತ್ತದೆ. ಬೆಳೆ ಬಂದ ನಂತರ ಉಳಿದ ಹೆಚ್ಚುವರಿ ​ ಗಡ್ಡೆಯನ್ನು ಸಹ ಮಾರಾಟ ಮಾಡಿ ಅಧಿಕ ಲಾಭ ಗಳಿಸಬಹುದು, ಮುಂದಿನ ವರ್ಷ ಅದೇ ಗಡ್ಡೆಗಳನ್ನು ನಾಟಿ ಮಾಡಿ ಪುನಃ ಬೆಳೆಯನ್ನು ಬೆಳೆಯಬಹುದು .

ಗ್ಲ್ಯಾಡಿಯೋಲಸ್ ಮಾರುಕಟ್ಟೆ ಹೇಗೆ:

ಚಿಕ್ಕಬಳ್ಳಾಪುರದ ರೈತರು ಬೆಳೆದ ಗ್ಲ್ಯಾಡಿಯೋಲಸ್ ಹೂಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ಶ್ರೀಮಂತರ ಹೂ ಎಂದೆ ಖ್ಯಾತಿಯಾಗಿದೆ. ನಾಲ್ಕು ಹೂವಿನ ಒಂದೊಂದು ಗೊಂಚಲು ರೆಡಿ ಮಾಡುತ್ತಾರೆ. ನ್ಯೂಸ್ ಪೇಪರ್ ನಿಂದ ಹೂ ಗಳನ್ನು ಸುತ್ತಿ ಮಾರಾಟಕ್ಕೆ ಸನ್ನದ್ದಗೋಳಿಸುತ್ತಾರೆ. ಬೆಂಗಳೂರು ಹೈದರಾಬಾದ್, ತಮಿಳುನಾಡು ಮಹಾರಾಷ್ಟ್ರ ಕೇರಳ ಸೇರಿದಂತೆ ದೇಶ ವಿಧೇಶಕ್ಕೆ ಹೂಗಳ ರಫ್ತು ಆಗತ್ತೆ. ದೊಡ್ಡ ದೊಡ್ಡ ಹೂ ಗಳ ವರ್ತಕರು ಕುಂಟೆ ಇಲ್ಲಾ ಎಕರೆಗಳ ಆಧಾರದಲ್ಲಿ ಹೂ ತೋಟ ಲೀಸ್ ಗೆ ಪಡೆಯುತ್ತಾರೆ. ಇನ್ನೂ ಕೆಲವು ರೈತರು ತಾವೆ ಹೂ ಕಟಾವು ಮಾಡಿ ಬಸ್ ಗಳ ಮೂಲಕ ಹೊರ ರಾಜ್ಯಕ್ಕೆ ಕಳುಹಿಸುತ್ತಾರೆ (Fresh Gladiolus Flowers Shelf Life).

ಗ್ಲ್ಯಾಡಿಯೋಲಸ್ ಬೆಲೆ ಹೇಗೆ: chikkaballapur farmers into floriculture successfully growing gladiolus

ನಾಲ್ಕು ಕಡ್ಡಿಯ ಒಂದು ಹೂ ಗೂಚ್ಚಕ್ಕೆ 20 ರೂಪಾಯಿಯಿಂದ ಆರಂಭವಾಗಿ ಹಬ್ಬದ ಸೀಜನ್ ನಲ್ಲಿ ನೂರು ರೂಪಾಯಿವರೆಗೂ ಮಾರಾಟವಾಗುತ್ತೆ. ಹೂ ಗಳ ಬಣ್ಣ ಗುಣಮಟ್ಟ ಶೈನಿಂಗ್ ಮಗ್ಗುವಿನ ಆಧಾರದಲ್ಲಿ ಹೂಗಳಿಗೆ ಬೆಲೆ ಕಟ್ಟಲಾಗುತ್ತದೆ. ಅಲಂಕಾರಿಕ ಹೂಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೆಡಿಕೆ ಇರುವ ಕಾರಣ ಸಭೆ ಸಮಾರಂಭಗಳಲ್ಲಿ ಗ್ಲ್ಯಾಡಿಯೋಲಸ್ ನ್ನು ಹೆಚ್ಚಾಗಿ ಬಳಸುತ್ತಾರೆ.

ಗ್ಲ್ಯಾಡಿಯೋಲಸ್ ಹೂಗಳಲ್ಲಿ ಎರಡು ತಳಿಗಳಿವೆ:

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (IIHR) ಹಲವಾರು ವರ್ಷಗಳಿಂದ ಸಂಶೋಧನೆ ನಡೆಸಿ ಭಾರತದಲ್ಲಿ ರೋಗ ನಿರೋದಕ ಗ್ಲ್ಯಾಡಿಯೋಲಸ್ ತಳಿಯನ್ನು ಅಭಿವೃದ್ದಿಪಡಿಸಿದೆ. ಮೊದಲೆಯದಾಗಿ ಅರ್ಕಾ ಅಮರ್ ಮೊತ್ತೊಂದು ತಳಿ ಅರ್ಕಾ ಆಯುಶ್ ಎಂದು ಇದೆ. ಅರ್ಕಾ ಆಯುಶ್ ರೋಗ ನಿರೋದಕ ಶಕ್ತಿಯನ್ನು ಒಳಗೊಂಡಿರುತ್ತದೆ. ಈ ತಳಿಗಳನ್ನು ಬೆಳೆಯುವುದರಿಂದ ರೈತನಿಗೆ ನಷ್ಟವಾಗುವುದಿಲ್ಲ. ಬೆಳೆಗೆ ರೋಗ ಭಾದೆ ಇರಲ್ಲ.

ಬಿಳಿ ಬಣ್ಣದ ಗ್ಲಾಡಿಯಸ್ ಗೆ ಭಾರಿ ಡಿಮ್ಯಾಂಡ್:

ಬಿಳಿ ಬಣ್ಣದ ಗ್ಲಾಡಿಯಸ್ ಹೂಗಳಿಗೆ ಭಾರಿ ಡಿಮ್ಯಾಂಡ್ ಇದೆ. ವಿವಿಧ ಅಲಂಕಾರಿಕ ವೇದಿಕೆಗಳಲ್ಲಿ ಬಿಳಿ ಬಣ್ಣದ ಹೂಗಳನ್ನು ಹೆಚ್ಚಾಗಿ ಬಳಸುತ್ತಾರೆ. ಬಿಳಿ ಬಣ್ಣದ ಹೂ ಗೆ ಯಾವುದೆ ಕಲರ್ ಮಿಕ್ಸ್ ಮಾಡಿದ್ರೆ… ಆಯಾ ಕಲರ್ ಗೆ ಹೂ ತಿರುಗುತ್ತೆ ಇದ್ರಿಂದ ಬಿಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ ಎಂದು ಕತ್ತರಿಗುಪ್ಪೆ ಗ್ರಾಮದ ಹೂ ಬೆಳೆಗಾರ ಗಿರೀಶ ತೀಳಿಸಿದರು.

ಓಟ್ನಲ್ಲಿ ಗ್ಲಾಡಿಯೋಲಸ್ ಹೂಗಳನ್ನು ಬೆಳೆಯಲು ಸೂಕ್ತವಾದ ತಳಿಯನ್ನು ಆಯ್ಕೆ ಮಾಡಿಕೊಂಡು ಉತ್ತಮ ಬೇಸಾಯ ಮಾಡಿದರೆ ಸಾಕು ಉತ್ತಮ ಬೆಳೆಯನ್ನು ಬೆಳೆದು ಅತ್ಯುತ್ತಮ ಆದಾಯ ಗಳಿಸಬಹುದು, ಟೊಮೇಟೋ ಸೇರಿದಂತೆ ಅದದೇ ತರಕಾರಿ ಬೆಳೆಗಳನ್ನು ಬೆಳೆದು ಹಲವಾರು ಭಾರಿ ನಷ್ಟ ಅನುಭವಿಸಿದ್ದು ಸಾಕು, ಒಮ್ಮೆ ಇಂತಹ ಲಾಭದಾಯಕ ಬೆಳೆಗಳನ್ನು ಬೆಳೆದು ನೋಡಿ. ಖಂಡಿತ ಲಾಭ ಸಿಗುತ್ತೆ ಎನ್ನುತ್ತಾರೆ ಅನುಭವಿ ರೈತರು.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?