AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ ಯೋಗ ಶಿಕ್ಷಕಿ ಅಪಹರಣ ಪ್ರಕರಣ: ಪೊಲೀಸರ ತನಿಖೆಯಲ್ಲಿ ಹಲವು ವಿಚಾರ ಬಹಿರಂಗ

ಚಿಕ್ಕಬಳ್ಳಾಪುರದಲ್ಲಿ ಯೋಗ ಶಿಕ್ಷಕಿಯನ್ನು ಅಪಹರಿಸಿ, ಜೀವಂತ ಸಮಾಧಿ ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದಿದೆ. ಪೊಲೀಸರು ತನಿಖೆ ವೇಳೆ ಹಲವು ಅಂಶಗಳು ಬೆಳಕಿಗೆ ಬಂದಿವೆ. ಯೋಗ ಶಿಕ್ಷಕಿಯನ್ನು ಮುಗಿಸಲು ಸುಪಾರಿ ನೀಡಲಾಗಿತ್ತು ಎಂಬ ಅಂಶ ತಿಳಿದು ಬಂದಿದೆ.

ಚಿಕ್ಕಬಳ್ಳಾಪುರ ಯೋಗ ಶಿಕ್ಷಕಿ ಅಪಹರಣ ಪ್ರಕರಣ: ಪೊಲೀಸರ ತನಿಖೆಯಲ್ಲಿ ಹಲವು ವಿಚಾರ ಬಹಿರಂಗ
ಯೋಗ ಶಿಕ್ಷಕಿ, ಬಿಂದು, ಸತೀಶ್​ ರೆಡ್ಡಿ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Nov 09, 2024 | 12:15 PM

Share

ಚಿಕ್ಕಬಳ್ಳಾಪುರ, ನವೆಂಬರ್​ 09: ಯೋಗ ಶಿಕ್ಷಕಿಯನ್ನು ಅಪಹರಿಸಿ, ಜೀವಂತ ಸಮಾಧಿ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಪೊಲೀಸರ (Police) ತನಿಖೆ ವೇಳೆ ಹಲುವು ವಿಚಾರಗಳು ಬಯಲಾಗಿದೆ. ಪ್ರಕರಣ ಸಂಬಂಧ ಕೃತ್ಯಕ್ಕೆ ಸುಪಾರಿ ನೀಡಿದ್ದ ಬಿಂದು ಮತ್ತು ಯೋಗ ಶಿಕ್ಷಕಿಯನ್ನು (Yoga Teacher) ಅಪಹರಿಸಿ, ಜೀವಂತ ಸಮಾಧಿ ಮಾಡಿದ್ದ ಆರೋಪಿ ಸಂತೋಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪತಿ ಸಂತೋಷ ಕುಮಾರ್ ಪತ್ನಿ ಬಿಂದು ಹಾಗೂ ಮಕ್ಕಳ ಕಡೆ ತಲೆ ಹಾಕುತ್ತಿರುಲಿಲ್ಲ. ಯೋಗ ಶಿಕ್ಷಕಿಯೊಂದಿಗೆ ಇರುತ್ತಿದ್ದರು. ಇದರಿಂದ ಬೇಸರಗೊಂಡ ಬಿಂದು, ಶಿಕ್ಷಕಿಯ ಕತ್ತಲ್ಲಿ ಇದ್ದ ಮಾಂಗಲ್ಯ ಸರ ಕಿತ್ತು ಹಾಕಲು ಮತ್ತು ಶಿಕ್ಷಕಿ ಕಥೆ ಮುಗಿಸಲು ಸತೀಶರೆಡ್ಡಿಗೆ ನಾಲ್ಕು ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಳು.

ಸುಪಾರಿ ಪಡೆದ ಸತೀಶ್​ ರೆಡ್ಡಿ ಯೋಗ ಶಿಕ್ಷಕಿಯನ್ನು ಮುಗಿಸಲು ಕಳೆದ ಮೂರು ತಿಂಗಳುಗಳಿಂದ ಸ್ಕೇಚ್ ಹಾಕಿದ್ದನು. ಶಿಕ್ಷಕಿಯನ್ನು ಮುಗಿಸಲೆಂದೇ ಸತೀಶ್​ ರೆಡ್ಡಿ ಯೋಗ ತರಗತಿಗೆ ಸೇರಿಕೊಂಡಿದ್ದನು. ಮೂರು ತಿಂಗಳುಗಳಲ್ಲಿ ಶಿಕ್ಷಕಿಯ ಜೊತೆ ಸ್ನೇಹ ಬೆಳಸಿ, ವಿಶ್ವಾಸ ಗಳಿಸಿದ್ದನು. ಅಲ್ಲದೇ, ಪಾರ್ಟನರ್ ಶಿಪ್​ನಲ್ಲಿ ಜಮೀನು ಖರೀದಿಸೋಣ ಎಂದು ಹೇಳಿದ್ದನು.

ನಂತರ, ಅ.23 ರಂದು ಯೋಗ ಶಿಕ್ಷಕಿಯನ್ನು ಅಪಹರಿಸಲು ಪ್ಲಾನ್​ ನಿರ್ಧರಿಸಿ, ಸತೀಶ್ ​ರೆಡ್ಡಿ ಮತ್ತು ಆತನ ಗ್ಯಾಂಗ್ ಫಿಲ್ಡ್​ಗೆ ಇಳಿದಿದೆ. ನಾಗರಿಕ ಗನ್ ಟ್ರೈನಿಂಗ್ ಕೊಡಿಸುತ್ತೇವೆ ಅಂತ ಕಾರಿನಲ್ಲಿ ಯೋಗ ಶಿಕ್ಷಿಯನ್ನು ಶಿಡ್ಲಘಟ್ಟ ತಾಲೂಕಿನ ಗೌಡನಹಳ್ಳಿ ಬಳಿಯ ಕಾಲುವೆ ಹತ್ತಿರ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಬೆದರಿಕೆ; ರಕ್ಷಣೆ ಕೋರಿ ಪೊಲೀಸರ​ ಮೊರೆ

ಅಲ್ಲಿ, ಯೋಗ ಶಿಕ್ಷಿಯ ಕೊರಳಲ್ಲಿದ್ದ 60 ಗ್ರಾಂ ತೂಕದ ಮಾಗಲ್ಯ ಸರ, ಕಿವಿಯೋಲೆ, ಉಂಗುರ ದೋಚಿದ್ದಾರೆ. ಬಳಿಕ, ಯೋಗ ಶಿಕ್ಷಕಿಯನ್ನು ಅರೆ ಬೆತ್ತಲೆಗೊಳಿಸಿ ಗುಂಡಿಗೆ ನೂಕಿದ್ದಾರೆ. ನಂತರ, ಮಣ್ಣು ಮತ್ತು ಮರದ ಟೊಂಗೆಗಳನ್ನು ಹಾಕಿ ಮುಚ್ಚಲಾಗಿತ್ತು.

ಇನ್ನು, ಆರೋಪಿ ಸತೀಶ್​ ರೆಡ್ಡಿ ಈ ಹಿಂದೆ ಗಂಡ-ಹೆಂಡತಿ ಸಮಸ್ಯೆಗಳನ್ನು ಬಳಸಿಕೊಂಡು ಬ್ಲಾಕ್ ಮೇಲ್, ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಆರೋಪಿ ಸತೀಶ್​ ರೆಡ್ಡಿ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕಳ್ಳತನ, ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:41 am, Sat, 9 November 24