ಕೊರೊನಾ ಆರ್ಥಿಕ ಸಂಕಷ್ಟ: ಶಿಡ್ಲಘಟ್ಟದ ಸಮಾಜ ಸೇವಕ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟ 40 ಜೋಡಿ

ಶಿಡ್ಲಘಟ್ಟ ತಾಲೂಕಿನಲ್ಲಿರುವ ಬ್ಯಾಟರಾಯನ ಸ್ವಾಮಿ ದೇವಾಲಯದ ಆವರಣದಲ್ಲಿ 40 ಜೋಡಿಗಳು ಉಚಿತ ಸಾಮೂಹಿಕ ಮದುವೆ ಸಮಾರಂಭದಲ್ಲಿ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೊರೊನಾ ಆರ್ಥಿಕ ಸಂಕಷ್ಟ:  ಶಿಡ್ಲಘಟ್ಟದ ಸಮಾಜ ಸೇವಕ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟ 40 ಜೋಡಿ
ಚಿಕ್ಕ ಬಳ್ಳಾಪುರ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 29, 2022 | 6:17 PM

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕದಾಸರಹಳ್ಳಿಯ ಹೊರವಲಯದಲ್ಲಿರುವ ಬ್ಯಾಟರಾಯನ ಸ್ವಾಮಿ ದೇವಾಲಯದ ಆವರಣದಲ್ಲಿ ಶಿಡ್ಲಘಟ್ಟದ ಸಮಾಜ ಸೇವಕ ಪುಟ್ಟು ಆಂಜಿನಪ್ಪ ಅವರು ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ  ಗ್ರಾಮೀಣ ಭಾಗದ ಬರೋಬ್ಬರಿ ನಲವತ್ತು ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೊರೊನಾ ಸೋಂಕಿನ ಆರ್ಭಟದಲ್ಲಿ ಅದೇಷ್ಟೋ ಜೋಡಿಗಳು ಮದುವೆ ಫಿಕ್ಸ್ ಮಾಡಿಕೊಂಡಿದ್ದರು ಆದರೆ ಆರ್ಥಿಕ ಸಮಸ್ಯೆಯಿಂದ ಮದುವೆ ಮುಂದೂಡುತ್ತಾ ಬಂದಿದ್ದರು. ಇದನ್ನರಿತ  ಸಮಾಜ ಸೇವಕ ಪುಟ್ಟು ಆಂಜಿನಪ್ಪ ಅವರು ಶಿಡ್ಲಘಟ್ಟ ತಾಲೂಕಿನ ಚಿಕ್ಕದಾಸರಹಳ್ಳಿಯ ಹೊರವಲಯದಲ್ಲಿರುವ ಬ್ಯಾಟರಾಯನ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ರು.

ಇದನ್ನೂ ಓದಿ:ಚಿಕ್ಕಬಳ್ಳಾಪುರ ನೂತನ ಮಂಚೇನಹಳ್ಳಿ ಕೇಂದ್ರಕ್ಕೆ 10 ಕೋಟಿ ರೂ. ಅನುದಾನ: ಸುಧಾಕರ್ ಮನವಿಗೆ ಸ್ಥಳದಲ್ಲೇ ಘೋಷಿಸಿದ ಅಶೋಕ್

ಸಾಮೂಹಿಕ ಮದುವೆ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮಿ, ಆದಿಚುಂಚನಗಿರಿಯ ಚಿಕ್ಕಬಳ್ಳಾಪುರದ ಶಾಖಾ ಮಠಾಧೀಶ ಮಂಗಳಾನಾಥ ಸ್ವಾಮಿ ಬಾಗಿಯಾಗಿ ನವ ವಿವಾಹಿತ ಜೋಡಿಗಳಿಗೆ ಆರ್ಶಿವದಿಸಿ ಉಚಿತ ಮದುವೆಯ ಉದ್ದೇಶ, ಸಾರ್ಥಕತೆಯನ್ನು ಮನವರಿಕೆ ಮಾಡಿಕೊಟ್ಟರು. ಬಡವರು ಎಂದು ಹೇಳಿ ಉಚಿತ ಮದುವೆ ಸಮಾರಂಭದಲ್ಲಿ ಮದುವೆಯಾಗಿ ನಂತರ ಮತ್ತೆ ಕಲ್ಯಾಣ ಮಂಟಪದಲ್ಲಿ ಅದ್ದೂರಿ ಅರತಕ್ಷತೆ ಮಾಡಿಕೊಳ್ಳಬೇಡಿ ಎಂದರು.

ವರದಿ:ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ