ಯ್ಯೂಟೂಬೇ ಗುರು: ಬಿಸಿಲಿನ ಅಬ್ಬರದ ನಡುವೆ ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದ ರೈತ!
ಚಿಕ್ಕಬಳ್ಳಾಪುರದ ರಯತನೋರ್ವ ಯೂಟ್ಯೂಬ್ ನೆರವಿನಿಂದ ಬಿಸಿಲಿನ ವಾತಾವರಣದಲ್ಲೂ ಕಾಶ್ಮೀರಿ ಸೇಬು ಬೆಳೆದು ಗಮನ ಸೆಳೆದಿದ್ದಾರೆ. ಟೊಮ್ಯಾಟೊ ಕೃಷಿಯಲ್ಲಿ ನಷ್ಟ ಅನುಭವಿಸಿದ ನಂತರ, ಅವರು ಒಂದು ಎಕರೆ ಜಮೀನಿನಲ್ಲಿ ಇಸ್ರೇಲ್ ತಳಿಯ 400 ಸೇಬು ಗಿಡಗಳನ್ನು ನೆಟ್ಟು ಯಶಸ್ವಿಯಾಗಿದ್ದಾರೆ. ಪ್ರತಿ ಗಿಡದಲ್ಲಿ 10 ಕೆಜಿ ಫಸಲು ಬಂದಿದ್ದು, ಇದು ಕೃಷಿಯಲ್ಲಿ ನವೀನ ಪ್ರಯೋಗಗಳಿಗೆ ಉತ್ತಮ ಉದಾಹರಣೆ ಎಂಬಂತಿದೆ.

ಚಿಕ್ಕಮಗಳೂರು, ಮೇ 10: ಸೇಬು ಅಂದ ತಕ್ಷಣ ನಮಗೆ ನೆನಪಾಗೋದೇ ಕಾಶ್ಮೀರ. ಯಾಕೆಂದರೆ ಶೀತವಲಯದ ಪ್ರಮುಖ ಬೆಳೆಗಳಲ್ಲೊಂದಾದ ಸೇಬನ್ನು ಭಾರದಲ್ಲಿ ಹೆಚ್ಚಾಗಿ ಬೆಳೆಯುವ ರಾಜ್ಯಗಳೆಂದರೆ ಅವು ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರ. ಆದರೆ ಜನರ ಈ ಅನಿಸಿಕೆಯನ್ನು ಸುಳ್ಳು ಮಾಡುವ ನಿಟ್ಟಿನಲ್ಲಿ ನಮ್ಮದೇ ಕರ್ನಾಟಕದ ರೈತರೊಬ್ಬರು ಗಮನ ಸೆಳೆದಿದ್ದಾರೆ. ರಾಜಧಾನಿ ಬೆಂಗಳೂರಿನ ಪಕ್ಕವೇ ಕಾಶ್ಮೀರಿ ಆ್ಯಪಲ್ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಮುಖ್ಯಾಂಶಗಳು
- ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದ ರೈತ
- ಅಡ್ಡಗಲ್ಲದ ವ್ಯಕ್ತಿಯೋರ್ವರಿಂದ ವಿಶಿಷ್ಠ ಸಾಧನೆ
- ಬಿಸಲಿನ ಅಬ್ಬರದ ನಡುವೆಯೂ ಕೈ ಹಿಡಿದ ಬೆಳೆ
ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ಲ ಗ್ರಾಮದ ರೈತ ಅನಿಲ್ ಎನ್ನುವವರು ತನ್ನ ಒಂದು ಎಕರೆ ಜಮೀನಿನಲ್ಲಿ ಸೇಬು ಬೆಳೆ ಬೆಳೆದಿದ್ದಾರೆ. ಈ ಜಮೀನಿಲ್ಲಿ ಟೊಮ್ಯಾಟೋ ಸೇರಿದಂತೆ ಇತರ ತರಕಾರಿ ಬೆಳೆದಿದ್ದ ಅನಿಲ್, ಈ ಹಿಂದೆ ಸಾಕಷ್ಟು ಬಾರಿ ಕೈಸುಟ್ಟುಕೊಂಡಿದ್ದರು. ಹೀಗಾಗಿ ಇದೇ ಬೆಳೆಯನ್ನು ಮತ್ತೆ ಬೆಳೆದು ನಷ್ಟ ಅನುಭವಿಸುವ ಬದಲು ಹೊಸತೇನನ್ನಾದರೂ ಮಾಡಬೇಕೆಂದು ಯೋಚಿಸಿದ್ದಾರೆ. ಅದರಂತೆ ಹೊಲದಲ್ಲಿ ಅವರು 400 ಆ್ಯಪಲ್ ಗಿಡಗಳನ್ನು ಹಾಕಿದ್ದು, ಅವುಗಳಲ್ಲೀಗ ಭರ್ಜರಿ ಫಸಲು ಬಂದಿದೆ.
ಇದನ್ನೂ ಓದಿ: ರಣಬಿಸಿಲಲ್ಲೂ ನಳನಳಿಸಿದ ‘ದಿಲ್ ಖುಷ್’; ವಿಶಿಷ್ಟ ತಳಿಯ ದ್ರಾಕ್ಷಿಗೆ ಭಾರೀ ಡಿಮ್ಯಾಂಡ್
ಯ್ಯೂಟೂಬೇ ಗುರು!
ಅಷ್ಟಕ್ಕೂ ಸೇಬು ಬೆಳೆ ಬೆಳೆಯೋದು ಹೇಗೆಂದು ಯೂಟ್ಯೂಬ್ ನೋಡಿ ರೈತ ಅನಿಲ್ ಗಿಡಗಳನ್ನು ಹಾಕಿದ್ದರು. ಜೊತೆಗೆ ಅಲ್ಲಿ ಸಿಕ್ಕ ಮಾಹಿತಿಯನ್ನು ಅಧರಿಸಿ ತುಮಕೂರು ಮೂಲಕ ಕೃಷಿ ಪದವಿಧರ ಶಶಿಕುಮಾರ್ ಮಾರ್ಗದರ್ಶನದಲ್ಲಿ ಆ್ಯಪಲ್ ಬೆಳೆದಿದ್ದಾರೆ. ಇಸ್ರೇಲ್ ಮೂಲದ ತಳಿಯ ಗಿಡಗಳನ್ನು ತರಿಸಿ ಪ್ರಯೋಗ ಮಾಡಿದ್ದು, ಸೇಬಿನ ಫಸಲು ಉತ್ತಮವಾಗಿ ಬಂದಿದೆ. ಸದ್ಯ ಒಂದು ಗಿಡದಲ್ಲಿ ಹತ್ತು ಕೆಜಿಯಷ್ಟು ಬೆಳೆ ಬಂದಿದ್ದು, ಹಣ್ಣುಗಳನ್ನು ವರ್ತಕರಿಗೆ ಕೊಡುವುದರ ಬದಲು ಸಾರ್ವಜನಿಕರು ತೋಟಕ್ಕೆ ಬಂದು ಮನಸ್ಸೋ ಇಚ್ಚೆ ಕಿತ್ತುಕೊಂಡು ಹಣ ನೀಡುವಂತೆ ರೈತ ಅನಿಲ್ ಮನವಿ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




