ಚಿಕ್ಕಬಳ್ಳಾಪುರ ಜಿಲ್ಲೆಯ 64 ಕೆರೆಗಳಿಗೆ ಜೀವ ತುಂಬಲು ಹರಿದು ಬಂದಳು ಗಂಗೆ!

ಚಿಕ್ಕಬಳ್ಳಾಪುರ: ಹತ್ತಾರು ಹಳ್ಳಿಗಳ ಪಾಲಿಗೆ ಬೆಳಕಾಗ್ಬೇಕು ಅಂತಾನೆ ಬಂದ ಯೋಜನೆಯದು. ಎರಡು ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದ್ದು, ಈಗ ಹಳ್ಳಿ ಹಳ್ಳಿಯಲ್ಲೂ ನೀರು ಹರಿಯೋಕೆ ಶುರು ಮಾಡಿದೆ. ಈ ಮೂಲಕ ಸಾವಿರಾರು ಹೆಕ್ಟೇರ್ ಭೂಮಿಗೆ ನೀರಾವರಿ ಮೂಲವಾಗಿದೆ. ಜಲಪಾತವೇ ಧುಮ್ಮಿಕ್ಕಿದಂತ ಅನುಭವ. ಮರುಳುಗಾಡಲ್ಲಿ ನೀರು ಸಿಕ್ಕಷ್ಟು ಸಂತಸ. ನೀರಿಗೆ ಇಳಿಯೋದೇನು, ಅದೇ ನೀರನ್ನ ಮೈಮೇಲೆ ಹಾಕಿಕೊಳ್ಳೋದೇನು. ಇವ್ರ ಖುಷಿಗಿಲ್ಲಿ ಪಾರವೇ ಇಲ್ಲ. ಯಾಕಂದ್ರೆ ಇಲ್ಲಿನ ಮಂದಿಗೆ ಇದೇ ನೀರು ಹೊಸ ಭರವಸೆ ಮೂಡಿಸಿದೆ. ಬಿಸಿಲಿನ ಬೇಗೆಯಲ್ಲಿ ಬಾಡ್ತಿದ್ದ […]

ಚಿಕ್ಕಬಳ್ಳಾಪುರ ಜಿಲ್ಲೆಯ 64 ಕೆರೆಗಳಿಗೆ ಜೀವ ತುಂಬಲು ಹರಿದು ಬಂದಳು ಗಂಗೆ!
Follow us
ಸಾಧು ಶ್ರೀನಾಥ್​
|

Updated on: Feb 07, 2020 | 4:36 PM

ಚಿಕ್ಕಬಳ್ಳಾಪುರ: ಹತ್ತಾರು ಹಳ್ಳಿಗಳ ಪಾಲಿಗೆ ಬೆಳಕಾಗ್ಬೇಕು ಅಂತಾನೆ ಬಂದ ಯೋಜನೆಯದು. ಎರಡು ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದ್ದು, ಈಗ ಹಳ್ಳಿ ಹಳ್ಳಿಯಲ್ಲೂ ನೀರು ಹರಿಯೋಕೆ ಶುರು ಮಾಡಿದೆ. ಈ ಮೂಲಕ ಸಾವಿರಾರು ಹೆಕ್ಟೇರ್ ಭೂಮಿಗೆ ನೀರಾವರಿ ಮೂಲವಾಗಿದೆ.

ಜಲಪಾತವೇ ಧುಮ್ಮಿಕ್ಕಿದಂತ ಅನುಭವ. ಮರುಳುಗಾಡಲ್ಲಿ ನೀರು ಸಿಕ್ಕಷ್ಟು ಸಂತಸ. ನೀರಿಗೆ ಇಳಿಯೋದೇನು, ಅದೇ ನೀರನ್ನ ಮೈಮೇಲೆ ಹಾಕಿಕೊಳ್ಳೋದೇನು. ಇವ್ರ ಖುಷಿಗಿಲ್ಲಿ ಪಾರವೇ ಇಲ್ಲ. ಯಾಕಂದ್ರೆ ಇಲ್ಲಿನ ಮಂದಿಗೆ ಇದೇ ನೀರು ಹೊಸ ಭರವಸೆ ಮೂಡಿಸಿದೆ. ಬಿಸಿಲಿನ ಬೇಗೆಯಲ್ಲಿ ಬಾಡ್ತಿದ್ದ ಬದುಕಿಗೆ ನೀರೆರೆದಿದೆ.

ಚಿಕ್ಕಬಳ್ಳಾಪುರ ರೈತರಿಗೆ ಬೆಳಕಾಯ್ತು HN ವ್ಯಾಲಿ ಯೋಜನೆ: ಚಿಕ್ಕಬಳ್ಳಾಪುರ ತಾಲೂಕಿನ 44 ಕೆರೆಗಳು ಸೇರಿದಂತೆ ಜಿಲ್ಲೆಯ 64 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೇ ಹೆಚ್​ಎನ್ ವ್ಯಾಲಿ ಯೋಜನೆ. ಹೆಬ್ಬಾಳ-ನಾಗವಾರ ಕಣಿವೆಯ ಸಂಸ್ಕರಿತ ತ್ಯಾಜ್ಯ ನೀರು ಹರಿಸುವ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಅಂತೆಯೇ ಚಿಕ್ಕಬಳ್ಳಾಪುರ ತಾಲೂಕಿನ ತಿರ್ನಹಳ್ಳಿ ಗ್ರಾಮಕ್ಕೆ ನೀರು ಹರಿಸಲಾಗಿದೆ. ತಮ್ಮೂರಿಗೆ ನೀರು ಬರುತ್ತಿದ್ದಂತೆ ಸ್ಥಳೀಯರು ನೀರು ನೋಡಲು ಮುಗಿಬಿದ್ದಿದ್ರು. ಹರಿಯುವ ನೀರಿನಲ್ಲಿ ಇಳಿದು ಜಲಪಾತ ಕಂಡಷ್ಟೇ ಖುಷಿ ಪಟ್ರು.

64 ಕೆರೆಗಳಿಗೆ ಜೀವ ತುಂಬಲು ಹರಿದುಬಂದಳು ಗಂಗೆ: ಇನ್ನು ಹೆಬ್ಬಾಳ, ನಾಗವಾರ ಕಣಿವೆಯ ಸಂಸ್ಕರಿತ ತ್ಯಾಜ್ಯ ನೀರು, ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಕೆರೆಗೆ ಬರುತ್ತೆ. ನಂತ್ರ ಅಲ್ಲಿಂದ ವಿವಿಧ ಕೆರೆಗಳಿಗೆ ಪೈಪ್ ಲೈನ್ ಮೂಲಕ ಹರಿಸಲಾಗುತ್ತೆ. ಹೀಗಾಗಿ ಬೆಂಗಳೂರಿನಿಂದ ಪೈಪ್​ಲೈನ್ ಮೂಲಕ ತಿರ್ನಹಳ್ಳಿ ಬಳಿ ಸ್ಟೋರೇಜ್ ಟ್ಯಾಂಕ್​ಗೆ ನೀರು ಬಿಡಲಾಯ್ತು. ನೀರಿನ ಬಗ್ಗೆ ಹಲವಾರು ಅನುಮಾನ, ವಾದ-ವಿವಾದ ವ್ಯಕ್ತವಾಗಿದ್ರಿಂದ ಸ್ಥಳೀಯರು ಹರಿಯುವ ನೀರಿನಲ್ಲಿ ಇಳಿದು ನೀರನ್ನು ಮುಟ್ಟಿ ವಾಸನೆ ನೋಡಿ ಪರೀಕ್ಷಿಸಿದ್ರು. ಸಾಮಾನ್ಯ ನೀರಿನಂತೆ ಇದೆ ಎಂದು ಕೆಲವರು ಮಾತನಾಡಿಕೊಂಡ್ರೆ ಇನ್ನೂ ಕೆಲವರು ನೀರು ಯಾವುದಾದರೇನು ಬೆಳೆಗಳಿಗೆ ಜೀವ ತುಂಬಿದ್ರೆ ಸಾಕು ಅಂತಿದ್ರು.

ಸದ್ಯ ಹೆಚ್ಎನ್ ವ್ಯಾಲಿ ಯೋಜನೆ ಚಿಕ್ಕಬಳ್ಳಾಪುರ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಹಾಗೆ ಹತ್ತಾರು ಕೆರೆಗಳಿಗೆ ಮರುಜೀವ ನೀಡೋ ಯೋಜನೆಯಾಗಿದೆ. ಇನ್ನಾದ್ರೂ ಜಿಲ್ಲೆಯ ರೈತರಿಗೆ ನೀರಿನ ಬವಣೆ ನೀಗುತ್ತಾ ಕಾದು ನೋಡ್ಬೇಕು.

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ