Chikkaballapur News: ದಿಲ್ ಖುಷ್ ದ್ರಾಕ್ಷಿಗೆ ಹೆಚ್ಚಾದ ಬೇಡಿಕೆ, ದಿಢೀರ್ ಬೆಲ ಏರಿಕೆ! ಸಂತಸಗೊಂಡ ದ್ರಾಕ್ಷಿ ಬೆಳೆಗಾರರು
ಆ ಜಿಲ್ಲೆಯ ರೈತರು ಮೊದಲೆ ಹೇಳಿ ಕೇಳಿ ಹೂ ಹಣ್ಣು ತರಕಾರಿ ಸೇರಿದಂತೆ ದ್ರಾಕ್ಷಿ ಬೆಳೆಗೆ ರಾಜ್ಯದಲ್ಲೆ ಖ್ಯಾತಿ, ಆದ್ರೆ, ಹೂ ಬೆಳೆಗೆ ಬೆಲೆ ಇಲ್ಲದೆ ಕಂಗಲಾಗಿದ್ರು. ಇದೀಗ ದಿಢೀರನೆ ದ್ರಾಕ್ಷಿಯ ಬೆಲೆ ಹೆಚ್ಚಳವಾಗಿದ್ದು, ರೈತರು ಮಂದಹಾಸ ಬೀರಿದ್ದಾರೆ.
ಚಿಕ್ಕಬಳ್ಳಾಪುರ: ಒಂದಕ್ಕಿಂತ ಮತ್ತೊಂದು ದ್ರಾಕ್ಷಿ ಗೊಂಚಲು ಸುಂದರವಾಗಿ ನಳನಳಿಸುತ್ತಿರುವುದು ಚಿಕ್ಕಬಳ್ಳಾಫು(Chikkaballapur)ರದಲ್ಲಿ. ಹೌದು ಜಿಲ್ಲೆಯೊಂದರಲ್ಲಿ ಬರೋಬ್ಬರಿ 5 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತರೇವಾರಿ ದ್ರಾಕ್ಷಿ ಬೆಳೆಯಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ದ್ರಾಕ್ಷಿಯನ್ನು ಕೊಂಡುಕೊಳ್ಳುವವರು ಇಲ್ಲದೆ ತೋಟದಲ್ಲಿ ದ್ರಾಕ್ಷಿ ಬಿಕಾರಿಯಾಗಿತ್ತು, ಆದ್ರೆ, ಕಳೆದ 15 ದಿನಗಳಿಂದ ದ್ರಾಕ್ಷಿಗೆ ಉತ್ತಮ ಬೆಲೆ ಬಂದಿದ್ದು, ಇದೀಗ ಕೆ.ಜಿ ದಿಲ್ಖುಷ್ ದ್ರಾಕ್ಷಿ 60 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು ಮೊದಲು ದ್ರಾಕ್ಷಿ ತೋಟ ನೋಡಿದ್ರೆ, ದೂರ ಹೋಗುತ್ತಿದ್ದ ದೊಡ್ಡ ದೊಡ್ಡ ಹಣ್ಣಿನ ವ್ಯಾಪಾರಿಗಳು, ಈಗ ದ್ರಾಕ್ಷಿ ತೋಟಗಳನ್ನು ಹುಡುಕಿಕೊಂಡು ರೈತರ ಬಳಿ ಬರುತ್ತಿದ್ದಾರೆ. ಮುಂಗಡ ಹಣ ನೀಡಿ ತೋಟದಲ್ಲಿ ದ್ರಾಕ್ಷಿ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರ ಸಂತೋಷಕ್ಕೆ ಪಾರವೆ ಇಲ್ಲದಂತಾಗಿದೆ.
ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಅಲ್ಲಿಯ ತೋಟಗಳಲ್ಲಿ ಈಗ ದ್ರಾಕ್ಷಿ ಖಾಲಿಯಾಗಿದೆ. ಇದ್ರಿಂದ ಅಲ್ಲಿಯ ದೊಡ್ಡ ದೊಡ್ಡ ದ್ರಾಕ್ಷಿ ವ್ಯಾಪಾರಿಗಳು ಚಿಕ್ಕಬಳ್ಳಾಫುರದತ್ತ ಮುಖ ಮಾಡಿದ ಕಾರಣ ಚಿಕ್ಕಬಳ್ಳಾಫುರದ ದಿಲ್ ಖುಷ್ ದ್ರಾಕ್ಷಿಗೆ ಭಾರಿ ಡಿಮ್ಯಾಂಡ್ ಬಂದಿದ್ದು, ರೈತರು ಜಣ ಜಣ ಕಾಂಚಣ ಎಣಿಸುತ್ತಿದ್ದಾರೆ.
ಇದನ್ನೂ ಓದಿ:Belagavi News: 30 ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದು, 6 ತಿಂಗಳಲ್ಲಿ 8 ಲಕ್ಷ ಗಳಿಕೆ; ಬಡ ರೈತನ ಮಗಳ ಅಮೋಘ ಸಾಧನೆ
30 ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದು, 6 ತಿಂಗಳಲ್ಲಿ 8 ಲಕ್ಷ ಗಳಿಕೆ; ಬಡ ರೈತನ ಮಗಳ ಅಮೋಘ ಸಾಧನೆ
ಬೆಳಗಾವಿ: ಹೌದು ಈ ದೃಶ್ಯದಲ್ಲಿ ಕಾಣುತ್ತಿರುವ ಯುವತಿಯ ಹೆಸರು ನಿಕಿತಾ ವೈಜು ಪಾಟೀಲ್ ವಯಸ್ಸು ಜಸ್ಟ್ 26, ಬೆಳಗಾವಿ ತಾಲೂಕಿನ ಜಾಫರವಾಡಿ ಗ್ರಾಮದ ನಿವಾಸಿ. ನಿಕಿತಾ ತಂದೆ ವೈಜು ಪಾಟೀಲ್ 4 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ ಮಗಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ಕೆಲಸಕ್ಕೆ ಸೇರಿಸಬೇಕೆಂಬ ಕನಸು ಕಂಡಿದ್ದರು. ಬಿ.ಕಾಂ ಪದವೀಧರೆಯಾಗಿದ್ದ ನಿಕಿತಾ ಪಾಟೀಲ್ ಸಿಎ ವ್ಯಾಸಂಗ ಮಾಡುತ್ತಿದ್ದಳು. ಆದರೆ, ಕಳೆದ ವರ್ಷ ನಿಕಿತಾಳ ತಂದೆ ವೈಜು ಪಾಟೀಲ್ ನಿಧನ ಹೊಂದುತ್ತಾರೆ. ಇದಾದ ಬಳಿಕ ದಿಕ್ಕೇ ತೋಚದಂತಾದ ಕುಟುಂಬಕ್ಕೆ ಆಸರೆಯಾಗಿದ್ದು ನಿಕಿತಾ ಪಾಟೀಲ್. ನಿಕಿತಾಳ ಚಿಕ್ಕಪ್ಪ ತಾನಾಜಿ ಸಹಾಯದೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿ ನಾಲ್ಕು ಎಕರೆ ಜಮೀನಿನ ಪೈಕಿ ಮೂವತ್ತು ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದಾಳೆ. ನವಲ ಭಟಕಾ ಎಂಬ ತಳಿಯ ಮೆಣಸಿನ ಬೀಜವನ್ನು ತಾವೇ ಸ್ವತಃ ಬಿತ್ತಿ ಸಸಿ ಮಾಡಿ 30 ಗುಂಟೆಯಲ್ಲಿ ನಾಟಿ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿ ಸೇರಿ ಸುಧಾರಿತ ಬೇಸಾಯ ಕ್ರಮ ಅನುಸರಿಸಿ ವ್ಯವಸಾಯ ಮಾಡುತ್ತಾ ಬಂದಿದ್ದು ಕಳೆದ ಆರು ತಿಂಗಳಲ್ಲಿ ಎಂಟು ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾಳೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ