Belagavi News: 30 ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದು, 6 ತಿಂಗಳಲ್ಲಿ 8 ಲಕ್ಷ ಗಳಿಕೆ; ಬಡ ರೈತನ ಮಗಳ ಅಮೋಘ ಸಾಧನೆ

ಆಕೆ ಗಡಿಜಿಲ್ಲೆಯ ಪುಟ್ಟ ಗ್ರಾಮದವಳು. ಸಿಎ ಆಗಬೇಕೆಂಬ ಕನಸು ಕಂಡಿದ್ದ ಬಡ ರೈತನ ಮಗಳು, ತಂದೆಯ ನಿಧನದಿಂದ ಸಿಎ ವ್ಯಾಸಂಗ ಮೊಟಕುಗೊಳಿಸಿ ಕೃಷಿಯತ್ತ ಮುಖ ಮಾಡಿದ ಯುವತಿ ಇಂದು ಕೃಷಿಯಲ್ಲಿ ಅಮೋಘ ಸಾಧನೆ ಮಾಡಿದ್ದಾಳೆ. ಇಂದು ಈ ಯುವತಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ. ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಎಲ್ಲರೂ ಹುಬ್ಬೇರುವಂತೆ ಸಾಧನೆ ಮಾಡಿದ ಆ ಯುವತಿ ಯಾರು? ಬಡ ರೈತನ ಮಗಳ ಸಾಧನೆಯಾದರೂ ಎಂತಹದ್ದು ಅಂತೀರಾ ಈ ಸ್ಟೋರಿ ನೋಡಿ.

Belagavi News: 30 ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದು, 6 ತಿಂಗಳಲ್ಲಿ 8 ಲಕ್ಷ ಗಳಿಕೆ; ಬಡ ರೈತನ ಮಗಳ ಅಮೋಘ ಸಾಧನೆ
ಬೆಳಗಾವಿಯಲ್ಲಿ ಮೆಣಸಿನಕಾಯಿ ಬೆಳೆದು ಉತ್ತಮ ಆದಾಯ ಗಳಿಸಿದ ಯುವತಿ
Follow us
|

Updated on: May 26, 2023 | 6:54 AM

ಬೆಳಗಾವಿ: ಹೌದು ಈ ದೃಶ್ಯದಲ್ಲಿ ಕಾಣುತ್ತಿರುವ ಯುವತಿಯ ಹೆಸರು ನಿಕಿತಾ ವೈಜು ಪಾಟೀಲ್ ವಯಸ್ಸು ಜಸ್ಟ್ 26, ಬೆಳಗಾವಿ(Belagavi) ತಾಲೂಕಿನ ಜಾಫರವಾಡಿ ಗ್ರಾಮದ ನಿವಾಸಿ. ನಿಕಿತಾ ತಂದೆ ವೈಜು ಪಾಟೀಲ್ 4 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ ಮಗಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ಕೆಲಸಕ್ಕೆ ಸೇರಿಸಬೇಕೆಂಬ ಕನಸು ಕಂಡಿದ್ದರು. ಬಿ.ಕಾಂ ಪದವೀಧರೆಯಾಗಿದ್ದ ನಿಕಿತಾ ಪಾಟೀಲ್(Nikita Patil) ಸಿಎ ವ್ಯಾಸಂಗ ಮಾಡುತ್ತಿದ್ದಳು. ಆದರೆ, ಕಳೆದ ವರ್ಷ ನಿಕಿತಾಳ ತಂದೆ ವೈಜು ಪಾಟೀಲ್ ನಿಧನ ಹೊಂದುತ್ತಾರೆ. ಇದಾದ ಬಳಿಕ ದಿಕ್ಕೇ ತೋಚದಂತಾದ ಕುಟುಂಬಕ್ಕೆ ಆಸರೆಯಾಗಿದ್ದು ನಿಕಿತಾ ಪಾಟೀಲ್. ನಿಕಿತಾಳ ಚಿಕ್ಕಪ್ಪ ತಾನಾಜಿ ಸಹಾಯದೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿ ನಾಲ್ಕು ಎಕರೆ ಜಮೀನಿನ ಪೈಕಿ ಮೂವತ್ತು ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದಾಳೆ. ನವಲ ಭಟಕಾ ಎಂಬ ತಳಿಯ ಮೆಣಸಿನ ಬೀಜವನ್ನು ತಾವೇ ಸ್ವತಃ ಬಿತ್ತಿ ಸಸಿ ಮಾಡಿ 30 ಗುಂಟೆಯಲ್ಲಿ ನಾಟಿ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿ ಸೇರಿ ಸುಧಾರಿತ ಬೇಸಾಯ ಕ್ರಮ ಅನುಸರಿಸಿ ವ್ಯವಸಾಯ ಮಾಡುತ್ತಾ ಬಂದಿದ್ದು ಕಳೆದ ಆರು ತಿಂಗಳಲ್ಲಿ ಎಂಟು ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾಳೆ.

ಹೊರ ರಾಜ್ಯಗಳಿಗೆ ರಫ್ತು

ಇನ್ನು ನಿಕಿತಾ ಬೆಳೆಯುತ್ತಿರುವ ಮೆಣಸಿನಕಾಯಿಗೆ ಭಾರಿ ಬೇಡಿಕೆ ಇದೆ. ಮೂರರಿಂದ ಐದು ಇಂಚು ಬೆಳೆಯುವ ಈ ಮೆಣಸಿನಕಾಯಿಯನ್ನು ಮಹಾರಾಷ್ಟ್ರದ ಕೊಲ್ಲಾಪುರ, ಗೋವಾಗೆ ಅತಿ ಹೆಚ್ಚು ಸರಬರಾಜು ಮಾಡಲಾಗುತ್ತೆ. ಪಿಜ್ಜಾ, ಬರ್ಗರ್ ತಯಾರಿಕೆಯಲ್ಲಿ ಈ ಮೆಣಸಿನಕಾಯಿ ಬಳಸುವುದರಿಂದ ಗೋವಾದಲ್ಲಿ ಈ ಮೆಣಸಿನಕಾಯಿಗೆ ಹೆಚ್ಚಿನ ಬೇಡಿಕೆ ಇದೆಯಂತೆ. ತಂದೆ ಸಾವಿನಿಂದಾಗಿ ಸಿಎ ವ್ಯಾಸಂಗ ಪೂರ್ಣ ಮಾಡಲು ಆಗಲಿಲ್ಲ. ತಂದೆಯ ಸಾವಿನ ಬಳಿಕ ಕೃಷಿ ಮಾಡಲು ಮನೆಯಲ್ಲಿ ಯಾರೂ ಇರಲಿಲ್ಲ, ಹೀಗಾಗಿ ಕೃಷಿ ಬಗ್ಗೆ ರೀಸರ್ಚ್ ಮಾಡಿ ವೈಜ್ಞಾನಿಕವಾಗಿ ಕೃಷಿ ಮಾಡಲು ಆರಂಭಿಸಿದೆ ಎಂದು ನಿಕಿತಾ ಪಾಟೀಲ್​ ಹೇಳಿದರು.

ಇದನ್ನೂ ಓದಿ:Koppal News:ಕೆಜಿಗೆ 2.50 ಲಕ್ಷ ರೂ, 1 ಹಣ್ಣಿಗೆ 40 ಸಾವಿರ: ಕೊಪ್ಪಳದಲ್ಲಿ ಈ ಮಾವಿನ ಹಣ್ಣು ನೋಡಲು ಮುಗಿಬಿದ್ದ ಜನ

ಸಂಶೋಧನೆ ಮಾಡಿ ಈ ಮೆಣಸಿನಕಾಯಿ ತಳಿ ಬೆಳದ ನಿಕಿತಾ ಪಾಟೀಲ್​

ಇನ್ನು ಕೃಷಿಯ ಬಗ್ಗೆ ಸಂಶೋಧನೆ ಮಾಡಿ ನವಲ ಭಟಕಾ ತಳಿಯ ಮೆಣಸಿನ ಬೀಜ ತಂದು ಬೆಳೆದೆ. ಈವರೆಗೂ ಎಂಟು ಲಕ್ಷ ಆದಾಯ ಬಂದಿದ್ದು ಆರು ಲಕ್ಷ ಲಾಭ ಬಂದಿದೆ. ಎರಡು ಲಕ್ಷ ರೂಪಾಯಿ ಖರ್ಚಾಗಿದೆ. ವ್ಯವಸಾಯದಲ್ಲಿ ಲಾಭವಿದೆ. ವ್ಯವಸಾಯ ಮಾಡುವುದರಿಂದ ಉತ್ತಮ ವಾತಾವರಣದಲ್ಲಿ ನಾವು ಇರುತ್ತೇವೆ. ನಾಲ್ಕು ಎಕರೆ ಜಮೀನಿನಲ್ಲಿ ಕೋತಂಬರಿ, ಸ್ವೀಟ್ ಕಾರ್ನ್ ಸೇರಿ ವಿವಿಧ ಬೆಳೆ ಬೆಳೆಯುತ್ತೇವೆ. ಈಗ ಸಿಎ ವ್ಯಾಸಂಗ ಸ್ಥಗಿತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಬೇಸಾಯದಲ್ಲಿ ತೊಡಗಿಕೊಂಡಿರುವೆ ಎಂದರು.

ಅಣ್ಣನ ಮಗಳ ಸಾಧನೆ ಬಗ್ಗೆ ಚಿಕ್ಕಪ್ಪ ಮೆಚ್ಚುಗೆ

ಇನ್ನು ಅಣ್ಣನ ಮಗಳ ಸಾಧನೆ ಬಗ್ಗೆ ಚಿಕ್ಕಪ್ಪ ವೈಜಪ್ಪ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಕಿತಾ ತಂದೆ ತೀರಿ ಹೋದ ಮೇಲೆ ಅವರ ಜಮೀನು ನೋಡಿಕೊಳ್ಳಲು ಯಾರೂ ಇರಲಿಲ್ಲ. ವ್ಯವಸ್ಥಿತವಾಗಿ ಬೇಸಾಯ ಮಾಡಿದರೆ ಒಳ್ಳೆಯ ಲಾಭ ಬರುತ್ತೆ. ಮೂವತ್ತು ಗುಂಟೆ ಜಾಗದಲ್ಲಿ ಮೂರ್ನಾಲ್ಕು ತಿಂಗಳಲ್ಲಿ ಎಂಟು ಲಕ್ಷ ರೂ. ಗಳಿಸಿದ್ದಾರೆ. ಇದರಲ್ಲಿ ಎರಡು ಲಕ್ಷ ರೂ.ವೆಚ್ಚವಾಗಿ ಆರು ಲಕ್ಷ ರೂಪಾಯಿ ಲಾಭ ಬಂದಿದೆ. ಕೃಷಿಯಲ್ಲಿಯೂ ಭವಿಷ್ಯವಿದೆ ಕೆಲಸ ಮಾಡಲು ಅಲ್ಲಿ ಇಲ್ಲಿ ಹೋಗುವುದಕ್ಕಿಂತ ಇಲ್ಲಿಯೇ ಕೆಲಸ ಮಾಡಿ ಎಂದ್ವಿ. ಜಮೀನು ಇದ್ದವರು ವ್ಯವಸ್ಥಿತವಾಗಿ ಬೇಸಾಯ ಮಾಡಿದ್ರೆ, ಒಳ್ಳೆಯ ಲಾಭ ಗಳಿಸುತ್ತಾರೆ. ಮಾರುಕಟ್ಟೆಯಲ್ಲಿ ಬೀಜ ಖರೀದಿಸಿ ನಾವೇ ಸ್ವತಃ ಸಸಿ ಮಾಡಿ ನಾಟಿ ಮಾಡಿದ್ದೇವೆ. ಹದಿನೈದು ದಿನಕ್ಕೊಮ್ಮೆ ಕಟಾವು ಮಾಡುತ್ತೇವೆ. ಒಂದು ಬಾರಿ ಕಟಾವು ಮಾಡಿದರೆ ನಾಲ್ಕು ಟನ್ ಇಳುವರಿ ಬರುತ್ತೆ. ಗೋವಾ, ಕೊಲ್ಲಾಪುರ, ಬೆಳಗಾವಿ ಮಾರುಕಟ್ಟೆಗೆ ಸರಬರಾಜು ಮಾಡುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂಓದಿ:Weight Loss Diet: ಮಾವಿನ ಹಣ್ಣು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆಯೇ? ತಜ್ಞರ ಅಭಿಪ್ರಾಯ?

ಅದೇನೇ ಇರಲಿ ವ್ಯವಸಾಯ ಎಂದರೆ ಮೂಗು ಮುರಿಯುವ ಇಂದಿನ ಕಾಲದಲ್ಲಿ ಬಡ ರೈತನ ಮಗಳು ಉತ್ತಮ ಸಾಧನೆ ಮಾಡಿದ್ದಾರೆ. ನಿಕಿತಾ ಪಾಟೀಲ್ ಸಾಧನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸ್ವಂತ ಜಮೀನು ಇದ್ದರೂ ಕೆಲಸ ಅರಸಿ ಬೆಂಗಳೂರು, ಪುಣೆ, ಮುಂಬೈ ಅಂತಾ ಕೆಲಸಕ್ಕಾಗಿ ಅಲೆದಾಡುವ ನಿರುದ್ಯೋಗಿ ಯುವಕರಿಗೆ ನಿಕಿತಾ ಪಾಟೀಲ್ ನಿಜಕ್ಕೂ ಪ್ರೇರಣೆ.

ವರದಿ: ಮಹಾಂತೇಶ ಕುರಬೇಟ್ ಟಿವಿ9

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ