ಬೀನ್ಸ್ ಬೆಳೆದು ಲಕ್ಷಾಧಿಪತಿಯಾದ ಯುವರೈತ; ಇಲ್ಲಿದೆ ವಿವರ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾವಂತ ಯುವಕನೋರ್ವ ಕೆಲಸ ತೊರೆದು, ತಂದೆ ಮಾಡುತ್ತಿದ್ದ ಕೃಷಿ ಕಾಯಕವನ್ನೇ ಮುಂದುವರೆಸಿದ್ದಾನೆ. ಇದೀಗ ತನ್ನ 2 ಎಕರೆ ಜಮೀನಿನಲ್ಲಿ ಬೀನ್ಸ್ ಬೆಳೆದು ಲಕ್ಷಾಧಿಪತಿಯಾಗುವುದರ ಮೂಲಕ ಇನ್ನೀತರ ರೈತರಿಗೆ ಮಾದರಿಯಾಗಿದ್ದಾನೆ. 2 ಎಕರೆ ಬೀನ್ಸ್​ನಿಂದ 20 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಬೀನ್ಸ್ ಬೆಳೆದು ಲಕ್ಷಾಧಿಪತಿಯಾದ ಯುವರೈತ; ಇಲ್ಲಿದೆ ವಿವರ
ಚಿಕ್ಕಬಳ್ಳಾಪುರದಲ್ಲಿ ಬೀನ್ಸ್ ಬೆಳೆದು ಲಕ್ಷಾಧಿಪತಿಯಾದ ಯುವರೈತ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: May 17, 2024 | 4:04 PM

ಚಿಕ್ಕಬಳ್ಳಾಪುರ, ಮೇ.17: ನಗರದ ಹೊರವಲಯದ ತಿಪ್ಪೇನಹಳ್ಳಿ(Thippenahalli) ಗ್ರಾಮದ ಗಿರೀಶ್ ಎನ್ನುವ ಯುವರೈತ, ಪದವಿ ಮುಗಿಸಿ 15 ರಿಂದ 20 ಸಾವಿರ ಸಂಬಳಕ್ಕೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಆತನಿಗೆ ಬರುತ್ತಿದ್ದ ಸಂಬಳ ಸಾಕಾಗುತ್ತಿಲ್ಲವೆಂದು ಕೆಲಸ ತೊರೆದು ತಂದೆಯ ಜೊತೆ ಕೃಷಿ, ತೋಟಗಾರಿಕೆಯತ್ತ ವಾಲಿದ್ದಾನೆ. ಅದರಂತೆ ಈ ಬಾರಿ ಬೀನ್ಸ್​ ಬೆಳೆದು ಲಕ್ಷಾಧಿಪತಿ ಅಗಿದ್ದಾನೆ. ಈಗ ಬೀನ್ಸ್​ಗೆ ಬಂಗಾರದ ಬೆಲೆ ಇದೆ. ಕೆಜಿ ಬೀನ್ಸ್ 170 ರಿಂದ 200 ರೂಪಾಯಿಗೆ ಮಾರಾಟವಾಗುತ್ತಿದೆ.

2 ತಿಂಗಳಿನಲ್ಲಿ 17 ಲಕ್ಷಕ್ಕೂ ಹೆಚ್ಚು ಆದಾಯ

ಇನ್ನು ವಿಪರೀತ ತಾಪಮಾನದಿಂದ ಫಸಲು ಬರದೇ ಮೊಳಕೆಯಲ್ಲೇ ಬೀನ್ಸ್ ಕಮರಿತ್ತು. ಆದರೂ ಛಲಬಿಡದ ಗಿರೀಶ್, ಹಗಲು-ರಾತ್ರಿ ಕಷ್ಟಪಟ್ಟು 2 ಎಕರೆ ಜಮೀನಿನಲ್ಲಿ ಬೀನ್ಸ್ ಬೆಳೆದಿದ್ದಾನೆ. ಜೊತೆಗೆ ಈಗಾಗಲೇ 4 ರಿಂದ 5 ಸಲ ಕಟಾವು ಮಾಡಿದ್ದು, 10 ಟನ್‍ಗೂ ಹೆಚ್ಚು ಬೀನ್ಸ್ ಬಂದಿದೆ. ಕೆಜಿ ಬೀನ್ಸ್​ಗೆ ಸರಾಸರಿ 180 ರೂಪಾಯಿ ಮಾರಾಟವಾಗಿದೆ. ಇದರಿಂದ ಕೇವಲ 2 ತಿಂಗಳಿನಲ್ಲಿ 17 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿದ್ದಾನೆ.

ಇದನ್ನೂ ಓದಿ:ರಾಮನಗರದಲ್ಲಿ ರಣಬಿಸಿಲು: 500 ಕೋಟಿ ಮೌಲ್ಯದ ಮಾವು ಲಾಸ್! 28 ‌ಸಾವಿರ ರೈತ ಕುಟುಂಬಗಳು ಸಂಷಕ್ಟದಲ್ಲಿ

ಗಿರೀಶ್ ತಂದೆ ಹೆಸರಿನಲ್ಲಿ 8 ಎಕರೆ ಜಮೀನಿದೆ. ಅದರಲ್ಲಿ ಗಿರೀಶ್​ 2 ಎಕರೆ ರೋಜಾಹೂವು ಬೆಳೆದಿದ್ದಾನೆ. ಭರಪೂರ ಆದಾಯ ಬರುತ್ತಿದೆ. ಇನ್ನು ತುಂಬಾ ಬಿಸಿಲು ಎಂದು ಈ ಬಾರಿ ರೈತರು ಬೀನ್ಸ್ ಬೆಳೆಯಲು ಹೋಗಿಲ್ಲ. ಆದರೂ ಛಲಬಿಡದ ಗಿರೀಶ್​, ಬೋರ್​ವೇಲ್‍ಗೆ ಜನರೇಟರ್ ಅಳವಡಿಸಿ ಹಗಲು-ರಾತ್ರಿ ಬೀನ್ಸ್ ತೋಟ ಸಾಕುತ್ತಿದ್ದಾನೆ. ಇದರಿಂದ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಗಿರೀಶ್ ಬೆಳೆದ ಬೀನ್ಸ್​ದೇ ಹವಾ ಹೆಚ್ಚಾಗಿದೆ.

ಬೀನ್ಸ್ ಸೇರಿದಂತೆ ತರಹೆವಾರಿ ತರಕಾರಿಗೆ ಹೆಸರುವಾಸಿಯಾಗಿರುವ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈಗ ಬೀನ್ಸ್​ನ್ನು ದುರ್ಬಿನ್ ಹಾಕಿ ಹುಡುಕುವಂತಾಗಿದೆ. ಪ್ರತಿವರ್ಷ ಈ ಸಂದರ್ಭದಲ್ಲಿ ಟನ್‍ಗಟ್ಟಲೇ ಬೀನ್ಸ್ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈ ಬಾರಿ ಬೆರಳಣಿಕೆಯಷ್ಟು ಬೀನ್ಸ್ ಮೂಟೆಗಳು ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಬೀನ್ಸ್​ಗೆ ಬಂಗಾರದ ಬೆಲೆ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ