ಮಿಟ್ಟೇಮರಿ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವಕ್ಕೆ ಗರುಡ ಪಕ್ಷಿಯೆ ಮುಖ್ಯ ಅತಿಥಿ! ಗರುಡ ರಥಕ್ಕೆ ಪ್ರದಕ್ಷಿಣೆ ಹಾಕಿದ ಮೇಲೆಯೇ ರಥ ಚಾಲನೆ!

Mittemari Lakshmi Narasimha swamy: ಮಿಟ್ಟೇಮರಿ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಅಂದ್ರೆ ನೆರೆಯ ಆಂಧ್ರದ ಕದಿರಿ ಪ್ರಖ್ಯಾತಿ ಹೊಂದಿದೆ. ಇವತ್ತಿನ ಇಲ್ಲಿನ ರಥೋತ್ಸವಕ್ಕೆ ಚಾಲನೆ ನೀಡೋಕೆ ಕದಿರಿಯಿಂದ ಗರುಡ ಪಕ್ಷಿ ಬಂದು ರಥ ಚಾಲನೆ ಮಾಡೋಕೆ ಸೂಚನೆ ಕೊಟ್ಟ ನಂತರವಷ್ಟೇ ಇಲ್ಲಿ ರಥಕ್ಕೆ ಚಾಲನೆ ನೀಡಲಾಗುತ್ತೆ.

ಮಿಟ್ಟೇಮರಿ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವಕ್ಕೆ ಗರುಡ ಪಕ್ಷಿಯೆ ಮುಖ್ಯ ಅತಿಥಿ! ಗರುಡ ರಥಕ್ಕೆ ಪ್ರದಕ್ಷಿಣೆ ಹಾಕಿದ ಮೇಲೆಯೇ ರಥ ಚಾಲನೆ!
ಮಿಟ್ಟೇಮರಿ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವಕ್ಕೆ ಗರುಡ ಪಕ್ಷಿಯೆ ಮುಖ್ಯ ಅತಿಥಿ!
Follow us
ಸಾಧು ಶ್ರೀನಾಥ್​
|

Updated on:Mar 08, 2023 | 9:45 PM

ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಅಂದ್ರೆ ನೆರೆಯ ಆಂಧ್ರದ ಕದಿರಿ ಪ್ರಖ್ಯಾತಿ ಹೊಂದಿದೆ. ಆದ್ರೆ ಬಾಗೇಪಲ್ಲಿಯ ಮಿಟ್ಟೇಮರಿ ಗ್ರಾಮದ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡೋಕೆ ಕದಿರಿಯಿಂದ ಗರುಡ ಪಕ್ಷಿ ಬಂದು ರಥ ಚಾಲನೆ ಮಾಡೋಕೆ ಸೂಚನೆ ಕೊಟ್ಟ ನಂತರವಷ್ಟೇ ಇಲ್ಲಿ ರಥಕ್ಕೆ (chariot) ಚಾಲನೆ ನೀಡಲಾಗುತ್ತೆ! ನೂರಾರು ಅಡಿ ಉದ್ದದ ಕಬ್ಬಿಣದ ಸರಪಣಿ, ಸಾವಿರಾರು ಭಕ್ತರು ಇನ್ನೇನು ರಥ ಎಳೆಯಬೇಕು… ಆದರೂ ಅದು ಕದಲುವುದೇ ಇಲ್ಲ! ಯಾರದೋ ನಿರೀಕ್ಷೆಯಲ್ಲಿ ಸಾವಿರಾರು ಕಣ್ಣುಗಳು ಕೌತುಕದಿಂದ ಆಕಾಶದ ಕಡೆ ಎದುರು ನೋಡ್ತಾನೇ ಇರುತ್ತೆ. ಆ ದೇವರ ರಥ ಕದಲಬೇಕು ಅಂದ್ರೆ ಆ ಕ್ಷೇತ್ರದ ಎಂ.ಎಲ್.ಎ, ಎಂ.ಪಿ, ಮಂತ್ರಿಗಳು ಬರದೆ ಇದ್ದರೂ ಪರವಾಗಿಲ್ಲ, ಆದ್ರೆ ಅದೊಬ್ಬ ವಿಶೇಷ ಅತಿಥಿ ಬಂದರೆ ಮಾತ್ರವೇ ರಥಕ್ಕೆ ಚಾಲನೆ ಸಿಗುತ್ತೆ. ಅಷ್ಟಕ್ಕೂ ಆ ವಿಶೇಷ ಅತಿಥಿಯಾದರೂ ಯಾರು ಅಂತೀರಾ? ಈ ವರದಿ ನೋಡಿ!! ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಗ್ರಾಮದ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ (Mittemari Lakshmi Narasimha swamy chariot) ಅಂದ್ರೆ ನೆರೆಯ ಆಂಧ್ರ ಮತ್ತು ರಾಜ್ಯದ ಕೆಲವು ಪ್ರದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ಐತಿಹಾಸಿಕ ಹಿನ್ನೆಲೆ ಇರುವ ದೇವಾಲಯದ ಬ್ರಹ್ಮರಥೋತ್ಸವಕ್ಕೆ ನೂರಾರು ಭಾಗಗಳಿಂದ ಭಕ್ತರು ಬರ್ತಾರೆ. ಇಲ್ಲಿನ ರಥೋತ್ಸವಕ್ಕೆ ಚಾಲನೆ ನೀಡೋಕೆ ಆಂಧ್ರದ ಕದಿರಿ ನರಸಿಂಹಸ್ವಾಮಿಯ ಗರುಡ ಪಕ್ಷಿ (Garuda Bird) ಬರುತ್ತದೆ. ಇದಕ್ಕೆ ಒಂದು ಐತಿಹಾಸಿಕ ಹಿನ್ನೆಲೆಯೂ ಇದೆ.

ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಅಂದ್ರೆ ನೆರೆಯ ಆಂಧ್ರದ ಕದಿರಿ ಪ್ರಖ್ಯಾತಿ ಹೊಂದಿದೆ. ಇವತ್ತಿನ ಇಲ್ಲಿನ ರಥೋತ್ಸವಕ್ಕೆ ಚಾಲನೆ ನೀಡೋಕೆ ಕದಿರಿಯಿಂದ ಗರುಡ ಪಕ್ಷಿ ಬಂದು ರಥ ಚಾಲನೆ ಮಾಡೋಕೆ ಸೂಚನೆ ಕೊಟ್ಟ ನಂತರವಷ್ಟೇ ಇಲ್ಲಿ ರಥಕ್ಕೆ ಚಾಲನೆ ನೀಡಲಾಗುತ್ತೆ. ವಿಷ್ಣುವಿನ ವಾಹನ ಗರುಡನನ್ನು ನೋಡಿದ್ರೆ ಪುನರ್ ಜನ್ಮ ಇರೋದಿಲ್ಲ ಅನ್ನೋ ನಂಬಿಕೆ ಇಲ್ಲಿನ ಭಕ್ತರದು. ಕೊನೆಗೂ ಗರುಡ ಪಕ್ಷಿ ಬಂದ ರಥದ ಪ್ರದಕ್ಷಿಣೆ ಹಾಕಿತು ನಂತರವಷ್ಟೆ ರಥಕ್ಕೆ ಚಾಲನೆ ದೊರೆಯಿತು.

ಇಂತಹ ಕೌತುಕದ ಕ್ಷಣಗಳನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಲು ಇಲ್ಲಿ ಸಾವಿರಾರು ಭಕ್ತರು ದೂರದೂರುಗಳಿಂದ ಬರ್ತಾರೆ. ಕದಿರಿ ಹುಣ್ಣಿಮೆ ಹಬ್ಬದ ಮಾರನೆ ದಿನ ನಡೆಯುವ ಬ್ರಹ್ಮರಥೋತ್ಸವಕ್ಕೆ ಬರುವ ಭಕ್ತರು ಉಪವಾಸ ಮಾಡಿರ್ತಾರೆ. ರಥೋತ್ಸವಕ್ಕೆ ಚಾಲನೆ ನೀಡಿದ ನಂತರವಷ್ಟೇ ಎಲ್ಲರ ಮನೆಗಳಲ್ಲಿ ಊಟ ನಡೆಯುತ್ತೆ. ಕದಿರಿ ಹುಣ್ಣಿಮೆ ಒಂದು ವಾರ ಮುಂಚೆ, ಒಂದು ವಾರದ ಹಿಂದೆ ಮಾಂಸಾಹಾರವನ್ನೂ ಸೇವಿಸಲ್ಲ. ಅಷ್ಟೇ ಅಲ್ಲದೆ ಇಲ್ಲಿ ನಡೆಯೋ ದನಗಳ ಜಾತ್ರೆ ಕೂಡ ವಿಶೇಷ. ರಥೋತ್ಸವಕ್ಕೆ ಚಾಲನೆ ನೀಡೋ ಗರುಡನನ್ನು ನೋಡೋದೆ ಭಕ್ತರ ಸಂತಸ.

ಚಿಕ್ಕ ಹಳ್ಳಿಯಾದ್ರೂ ಐತಿಹಾಸಿಕ ಹಿನ್ನೆಲೆ ಹೊಂದಿರೋ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವ ಹಲವು ದಶಕಗಳಿಂದ ನಡೆದು ಬರ್ತಿದೆ. ಚೋಳರ ಕಾಲದ ಹಿನ್ನೆಲೆ ಹೊಂದಿರೋ ಈ ದೇವಾಲಯದಲ್ಲಿ ವಿಜೃಂಭಣೆಯ ರಥೋತ್ಸವ ಪ್ರತಿ ವರ್ಷ ನಡೆಯುತ್ತೆ. ಮತ್ತೊಂದೆಡೆ ಈಗ ಚುನಾವಣೆ ವರ್ಷ ಆದ ಕಾರಣ ಸ್ಥಳೀಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಸೇರಿದಂತೆ ಚುನಾವಣಾ ಟಿಕೆಟ್ ಆಕಾಂಕ್ಷಿಗಳು ದೇವಸ್ಥಾನ ಹಾಗೂ ಜಾತ್ರೆಯಲ್ಲಿ ಬೀಡುಬಿಟ್ಟಿದ್ದು ವಿಶೇಷವಾಗಿತ್ತು!

ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

Published On - 5:56 pm, Wed, 8 March 23

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ