AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಕ್ರಿಮಿನಾಶಕ, ಗೊಬ್ಬರ ಸಿಂಪಡಣೆಗೆ ಬಂತು ಡ್ರೋನ್; ರೈತರ ಸಮಸ್ಯೆಗಳಿಗೆ ರಾಮಬಾಣ

ಪಾಸ್ಟ್ ಫುಡ್, ಬೇಡಿಕೆ ನೀಗಿಸುವುದರಿಂದ ಹಿಡಿದು, ಮನುಷ್ಯನಿಗೆ ಬೇಕಾಗಿರುವ ಔಷಧಿ ಸರಬರಾಜು ಮಾಡುವವರೆಗೆ ಅತ್ಯಾಧುನಿಕ ಮಾದರಿಯ ಡ್ರೋನ್​ಗಳು ಯಶಸ್ವಿ ಪ್ರಯೋಗ ನಡೆಸಿ ಸೈ ಎನಿಸಿಕೊಂಡಿವೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಡ್ರೋನ್​ಗಳು ಈಗ ರೈತರ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುವಲ್ಲಿ ಸೈ ಎನಿಸಿಕೊಂಡಿವೆ.

ಚಿಕ್ಕಬಳ್ಳಾಪುರ: ಕ್ರಿಮಿನಾಶಕ, ಗೊಬ್ಬರ ಸಿಂಪಡಣೆಗೆ ಬಂತು ಡ್ರೋನ್; ರೈತರ ಸಮಸ್ಯೆಗಳಿಗೆ ರಾಮಬಾಣ
ಡ್ರೋನ್ ಔಷಧಿ ಸಿಂಪಡಣೆ
TV9 Web
| Edited By: |

Updated on: Oct 16, 2021 | 8:50 PM

Share

ಚಿಕ್ಕಬಳ್ಳಾಪುರ: ಬೆಳೆಗಳಿಗೆ ಔಷಧಿ ಸಿಂಪಡಿಸಬೇಕು ಅಂದರೆ ಒಂದೆಡೆ ಕೂಲಿಕಾರ್ಮಿಕರ ಸಮಸ್ಯೆ, ಮತ್ತೊಂದೆಡೆ ನುರಿತ ಕಾರ್ಮಿಕರ ಅಲಭ್ಯ ಇದೆ. ಇನ್ನು ಅಗತ್ಯಕ್ಕಿಂತ ಅನಗತ್ಯವಾಗಿ ಖರ್ಚಾಗುವ ಔಷಧಿಯ ಸಮಸ್ಯೆಯೂ ಕೂಡ ಬೆಳೆಗಾರರನ್ನು ಕಾಡುತ್ತಿದೆ. ಇವೆಲ್ಲದಕ್ಕೂ ಪರಿಹಾರ ಎಂಬಂತೆ, ಈಗ ವಿನೂತನ ಮಾದರಿಯ ಡ್ರೋನ್​ಗಳು ರೈತರ ಬೆಳೆಗಳಿಗೆ, ಔಷಧಿ, ಗೊಬ್ಬರ ಸಿಂಪಡಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದೆ ಏನಿದು ಡ್ರೋನ್ ಔಷಧಿ ಸಿಂಪಡಣೆ ಅಂತೀರಾ ಈ ವರದಿ ನೋಡಿ

ಪಾಸ್ಟ್ ಫುಡ್, ಬೇಡಿಕೆ ನೀಗಿಸುವುದರಿಂದ ಹಿಡಿದು, ಮನುಷ್ಯನಿಗೆ ಬೇಕಾಗಿರುವ ಔಷಧಿ ಸರಬರಾಜು ಮಾಡುವವರೆಗೆ ಅತ್ಯಾಧುನಿಕ ಮಾದರಿಯ ಡ್ರೋನ್​ಗಳು ಯಶಸ್ವಿ ಪ್ರಯೋಗ ನಡೆಸಿ ಸೈ ಎನಿಸಿಕೊಂಡಿವೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಡ್ರೋನ್​ಗಳು ಈಗ ರೈತರ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುವಲ್ಲಿ ಸೈ ಎನಿಸಿಕೊಂಡಿವೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಬಳಿ ರೈತರ ಜಮೀನಿನಲ್ಲಿ ಡ್ರೋನ್​ಗಳು ಕಮಾಲ್ ಮಾಡಿವೆ. ಅದರಲ್ಲೂ ರೈತರಿಗೆ ಅಗತ್ಯ ಹಾಗೂ ಜಟಿಲವಾಗಿದ್ದ, ಅವರ ಬೆಳೆಗಳಿಗೆ ಔಷಧಿ ಸಿಂಪಡಿಸುವ ಕಾರ್ಯಕ್ಕೆ ಡ್ರೋನ್​ಗಳು ಇಳಿದಿವೆ. ಖಾಸಗಿ ಕ್ರಿಮಿನಾಶಕ ತಯಾರಿಕಾ ಸಂಸ್ಥೆಯೊಂದು, ಬಾಡಿಗೆ ಆಧಾರದ ಮೇಲೆ ರೈತರ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುತ್ತಿದೆ. ಒಂದು ಎಕರೆ ಜಮೀನಿನಲ್ಲಿರುವ ಬೆಳೆಗೆ ಕೇವಲ 7 ನಿಮಿಷದಲ್ಲಿ, ಔಷಧಿ ಸಿಂಪಡಣೆ ಮಾಡುತ್ತದೆ. ಅದರಲ್ಲೂ ಔಷಧಿ ವ್ಯರ್ಥವಾಗದ ಹಾಗೆ ಬೆಳೆಗಳ ಮೇಲೆ ಔಷಧಿ ಸಿಂಪಡಿಸುತ್ತದೆ. ಇದರಿಂದ ರೈತರ ವಿವಿಧ ಸಮಸ್ಯೆಗಳಿಗೆ ಡ್ರೋನ್​ಗಳು ರೈತಮಿತ್ರವಾಗುತ್ತಿವೆ ಎಂದು ಡ್ರೋನ್ ನಿರ್ವಾಹಕ ರಬ್ಬಾನಿ ಹೇಳಿದ್ದಾರೆ.

ಅಸಲಿಗೆ ಡ್ರೋನ್​ಗಳಲ್ಲಿ 6 ಮಾಡೆಲ್​ಗಳಿವೆ, 10 ಲೀಟರ್ ಸಾಮರ್ಥ್ಯದ ಡ್ರೋನ್​, 16 ಲೀಟರ್ ಸಾಮರ್ಥ್ಯದ ಹೈಬ್ರಿಡ್ ಡ್ರೋನ್​, 21 ಲೀಟರ್ ಸಾಮರ್ಥ್ಯದ ಡ್ರೋನ್​ ಸೇರಿದಂತೆ, 22 ಕೆಜಿ ಹೊತ್ತು ಹಾರಾಡಬಲ್ಲ ಡ್ರೋನ್​ಗಳಿವೆ. ಡ್ರೋನ್ ಬುಡದಲ್ಲಿ ಟ್ಯಾಂಕ್ ಒಂದನ್ನು ಅಳವಡಿಸಿದ್ದು, ಅದಕ್ಕೆ ಸ್ಪ್ರೇಯರ್ ಪಂಪ್ ಅಳವಡಿಸಲಾಗಿದೆ. ಬೆಳೆಗೆ ತಕ್ಕ ಎತ್ತರಕ್ಕೆ ಸೀಮಿತವಾಗಿ, ಡ್ರೋನ್​ಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು ಡ್ರೋನ್​ಗೆ ಜಿಪಿಎಸ್ ಅಳವಡಿಸಲಾಗಿದೆ. ಜಮೀನಿನ ಮ್ಯಾಪ್​ ಅನ್ನು ಡ್ರೋನ್​ಗೆ ಅಳವಡಿಸಿದರೆ ಡ್ರೋನ್​ ಆ ಜಮೀನು ಬಿಟ್ಟು ಅಕ್ಕಪಕ್ಕ ಜಮೀನಿಗೆ ಹೋಗಲ್ಲ. ಇದರಿಂದ ರೈತರು ಡ್ರೋನ್ ಕಾರ್ಯಕ್ಕೆ ಫೀದಾ ಆಗಿದ್ದಾರೆ.

ಕೃಷಿ ಹಾಗೂ ತೋಟಗಾರಿಕೆಯಲ್ಲಿ ಡ್ರೋನ್​ ಬಳಕೆಗೆ ನಾಗರೀಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ. 200 ಮೀಟರ್ ಎತ್ತರದ ವರೆಗೂ ಹಸಿರುವಲಯದಲ್ಲಿ ಡ್ರೋನ್​ಗಳು ಹಾರಾಟ ನಡೆಸಬಹುದಾಗಿದೆ. ಆದರೆ ರೆಡ್ ಜೋನ್, ಯಲ್ಲೋ ಜೋನ್, ಸೇರಿದಂತೆ ನಿಷೇಧಿತ ಪ್ರದೇಶದಲ್ಲಿ ಡ್ರೋನ್​ಗಳ ಹಾರಾಟಕ್ಕೆ ಅನುಮತಿ ನೀಡಿಲ್ಲ. ಒಟ್ಟಾರೆ ಕೃಷಿಗೆ ಡ್ರೋನ್ ಬಳಕೆಯಿಂದ ಕೃಷಿಯಲ್ಲಿ ಮತ್ತೊಂದು ಹೊಸ ಕ್ರಾಂತಿಯೇ ಸೃಷಿಯಾಗಿರುವುದಂತು ಸತ್ಯ.

ವರದಿ: ಭೀಮಪ್ಪ ಪಾಟೀಲ್​

ಇದನ್ನೂ ಓದಿ: Viral Video: ಈ ಡ್ರೋನ್​ನಲ್ಲಿ ಮನುಷ್ಯರೂ ಕೂತು ಹಾರಬಹುದು! ವಿಡಿಯೋ ನೋಡಿ

ಜಮ್ಮು ದಾಳಿಯ ನಂತರ ಶ್ರೀನಗರದಲ್ಲಿ ಡ್ರೋನ್‌, ಮಾನವರಹಿತ ವಾಹನಗಳಿಗ ನಿಷೇಧ

Follow Us
TV9 Web
TV9 Web

TV9 Kannada

Read More
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್